ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
ಈ ಕುರಿತಂತೆ ಸಿಎಂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಇಂದು ನಾನು ಲಕ್ನೋನ ಶ್ಯಾಮ್ ಪ್ರಸಾದ್ ಮುಖರ್ಜಿ ಸಿವಿಲ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದೇನೆ. ಕೊರೊನಾ ಲಸಿಕೆ ಪಡೆಯಬೇಕಾದವರೆಲ್ಲರೂ ಲಸಿಕೆ ಸ್ವೀಕರಿಸಿ, ಉತ್ತರ ಪ್ರದೇಶವನ್ನು ಕೊರೊನಾ ಮುಕ್ತವನ್ನಾಗಿಸಿ. ಬನ್ನಿ ಎಲ್ಲರೂ ಕೊರೊನಾ ವಿರುದ್ಧ ಹೋರಾಟ ನಡೆಸೋಣ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
Advertisement
आज मैंने लखनऊ स्थित डॉ. श्यामा प्रसाद मुखर्जी (सिविल) अस्पताल में स्वदेशी कोरोना वैक्सीन की प्रथम डोज प्राप्त की।
मैं, उत्तर प्रदेश को ‘कोरोना मुक्त’ बनाने हेतु वैक्सीन लेने योग्य सभी लोगों का वैक्सीनेशन हेतु आह्वान करता हूँ।
आइए, कोरोना के विरुद्ध संघर्ष में हम सभी सहभागी बनें। pic.twitter.com/9AmSaow4g7
— Yogi Adityanath (@myogiadityanath) April 5, 2021
Advertisement
ಯೋಗಿ ಆದಿತ್ಯನಾಥ್ರವರು ಕೊರೊನಾ ಲಸಿಕೆ ಸ್ವೀಕರಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಆರೋಗ್ಯ ಸಿಬ್ಬಂದಿ ರಶ್ಮಿ ಜೀತ್ ಸಿಂಗ್ ಎಂಬವರು ಮುಖ್ಯಮಂತ್ರಿಗೆ ಭಾರತ್ ಬಯೋಟಿಕ್ನ ಕೋವ್ಯಾಕ್ಸಿನ್ ನೀಡುತ್ತಿರುವುದನ್ನು ಕಾಣಬಹುದಾಗಿದೆ.