ಮಂಡ್ಯ: ಕೋವಿಡ್ ವರದಿ ಇಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದ ಕಾರಣ ಆಸ್ಪತ್ರೆಯ ಮುಂಭಾಗ ಗರ್ಭಿಣಿ ನಿಂತಿದ್ದ ವೇಳೆ ಹೆರಿಗೆಯಾದ ಪರಿಣಾಮ ನವಜಾತ ಶಿಶು ಕೆಳಗೆ ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯದ ಮಿಮ್ಸ್ ನ ಹೆರಿಗೆ ವಾರ್ಡ್ ಮುಂಭಾಗ ಜರುಗಿದೆ.
ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಇಸ್ಮಾಯಿಲ್ ಪತ್ನಿ ಸೋನು ಅವರು ಏಳು ತಿಂಗಳ ಗರ್ಭಿಣಿ ಆಗಿದ್ದರು. ನಿನ್ನೆ ಆರೋಗ್ಯದಲ್ಲಿ ವ್ಯತ್ಯಾಸ ಆದ ಕಾರಣ ಮಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ವೈದ್ಯರು ಪರೀಕ್ಷೆ ಮಾಡಿದಾಗ ಮಗುವಿನ ಎದೆಯ ಬಡಿತ ಕೇಳುತ್ತಿಲ್ಲ ನಾಳೆ ಬಂದು ಆಸ್ಪತ್ರೆಗೆ ದಾಖಲಾಗಿ ಎಂದು ಪರೀಕ್ಷೆಗಳನ್ನು ನಡೆಸಿದ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ನಿನ್ನೆಯೇ ಇಸ್ಮಾಯಿಲ್ ತನ್ನ ಪತ್ನಿ ಸೋನುಗೆ ಕೊರೊನಾ ಟೆಸ್ಟ್ ಮಾಡಿದ್ದಾರೆ.
Advertisement
Advertisement
ಇಂದು ಬೆಳಗ್ಗೆ ಸೋನು ಅವರಿಗೆ ನೋವು ಹೆಚ್ಚಾದ ಕಾರಣ ಇಸ್ಮಾಯಿಲ್ ತನ್ನ ಪತ್ನಿಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲು ಬಂದಿದ್ದಾರೆ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ರಿಪೋರ್ಟ್ ಇಲ್ಲದೇ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕುಟುಂಬಸ್ಥರು ಹಾಗೂ ಅಲ್ಲಿದ್ದ ಸಾರ್ವಜನಿಕರು ದಾಖಲು ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದರು ಸಹ ದಾಖಲು ಮಾಡಿಕೊಂಡಿಲ್ಲ. ಈ ವೇಳೆ ಸೋನು ಆಸ್ಪತ್ರೆಯ ಹೊರ ಭಾಗ ನಿಂತಿದ್ದಾಗ ಹೆರಿಗೆ ಆದ ಕಾರಣ ನೆಲಕ್ಕೆ ಮಗು ಬಿದ್ದಿದೆ. ಇದಾದ ಬಳಿಕ ಮಗು ಹಾಗೂ ಸೋನು ಅವರನ್ನು ಆಸ್ಪತ್ರೆಯ ಒಳಕ್ಕೆ ಕರೆದುಕೊಳ್ಳಲಾಗಿದೆ.
Advertisement
ಇಷ್ಟೇಲ್ಲಾ ಆದರೂ ಸಹ ಮಿಮ್ಸ್ ಅಧಿಕಾರಿಗಳು ಇದರಲ್ಲಿ ನಮ್ಮ ತಪ್ಪು ಆಗಿಲ್ಲ, ಇದಕ್ಕೆ ಪೋಷಕರೇ ಕಾರಣ ಎಂದು ನುಣುಚಿಕೊಳ್ಳುತ್ತಿದ್ದಾರೆ. ನಾವು ಸೋನು ಅವರು ಬಂದಾಗಾ ಆಂಟಿಜನ್ ಟೆಸ್ಟ್ ಮಾಡಿ ದಾಖಲು ಮಾಡಿಕೊಳ್ಳಲು ಮುಂದಾಗಿದ್ದವು. ಆಗ ಅವರು ಆಭರಣಗಳನ್ನು ಬಿಚ್ಚಿಡಲು ಹೊರಗೆ ಹೋದರು, ಈ ವೇಳೆ ಘಟನೆ ಜರುಗಿದೆ ಎಂದು ಮಿಮ್ಸ್ ಅಧಿಕಾರಿಗಳು ಹೇಳುತ್ತಿದ್ದಾರೆ.
Advertisement