ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ನಂಜು ದಿನೇ ದಿನೇ ಏರಿಕೆಯಾಗುತ್ತಿದೆ. ಇದರೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂದು ಕೂಡ ಕೋವಿಡ್ ಸೋಂಕಿಗೆ 15 ಮಂದಿ ಬಲಿಯಾಗಿದ್ದು, ನಿನ್ನೆ 30 ಮಂದಿ ಸಾವನ್ನಪ್ಪಿದ್ದರು. ಪರಿಣಾಮ ಸಾವಿನ ಸಂಖ್ಯೆ 416ಕ್ಕೇರಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಮಾಹಿತಿಯ ಅನ್ವಯ, ಮೈಸೂರು ಮತ್ತು ಬೀದರ್ ತಲಾ 4, ಕಲಬುರಗಿ 2, ಬಾಗಲಕೋಟೆ, ಹಾಸನ, ಧಾರವಾಡ, ಬೆಳಗಾವಿ, ದಾವಣಗೆರೆ ತಲಾ 1 ಸಾವಿನ ಪ್ರಕರಣ ವರದಿಯಾಗಿದೆ.
Advertisement
ರಾಜ್ಯದಲ್ಲಿ 15,297 ಸಕ್ರಿಯ ಕೋವಿಡ್ ಸೋಂಕಿನ ಪ್ರಕರಣಗಳಿದ್ದು, 279 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಐಸಿಯುನಲ್ಲಿ 175 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಸಾವನ್ನಪ್ಪಿದವರ ವಿವರ:
1) ರೋಗಿ-25344: ಬಾಗಲಕೋಟೆಯ 30 ವರ್ಷದ ಪುರುಷ. ಗೋವಾ ಪ್ರಯಾಣದ ಹಿನ್ನೆಲೆ. ಜುಲೈ 5 ರಂದು ಸಾವನ್ನಪ್ಪಿದ್ದರು.
Advertisement
2) ರೋಗಿ-25416: ಮೈಸೂರಿನ 80 ವರ್ಷದ ವೃದ್ಧ. ತೀವ್ರ ಉಸಿರಾಟ ತೊಂದರೆ (ಸಾರಿ) ಮತ್ತು ಜ್ವರ, ಕೆಮ್ಮನಿಂದ ಬಳುತ್ತಿದ್ದರು. ಜುಲೈ 4 ರಂದು ಆಸ್ಪತೆಗೆ ದಾಖಲಾಗಿದ್ದರು. ಜುಲೈ 6 ರಂದು ಸಾವನ್ನಪ್ಪಿದ್ದರು.
3) ರೋಗಿ-25418: ಮೈಸೂರಿನ 48 ವರ್ಷದ ಪುರುಷ. ಸಾರಿ, ಜ್ವರ, ಅಧಿಕ ರಕ್ತದೊತ್ತಡ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಜುಲೈ 4 ರಂದು ಆಸ್ಪತೆಗೆ ದಾಖಲಾಗಿದ್ದರು. ಜುಲೈ 6 ರಂದು ಸಾವನ್ನಪ್ಪಿದ್ದರು.
4) ರೋಗಿ-25419: ಮೈಸೂರಿನ 68 ವರ್ಷದ ವೃದ್ಧ. ಸಾರಿ, ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಜುಲೈ 6 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 7 ರಂದು ಸಾವನ್ನಪ್ಪಿದ್ದರು.
5) ರೋಗಿ-25421: ಮೈಸೂರಿನ 75 ವರ್ಷದ ವೃದ್ಧೆ. ಸಾರಿ, ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಜುಲೈ 5 ರಂದು ಆಸ್ಪತ್ರೆಗೆ ದಾಖಲಾಗಿದ್ದವರು ಜುಲೈ 7 ರಂದು ಸಾವನ್ನಪ್ಪಿದ್ದರು.
6) ರೋಗಿ-25466: ಹಾಸನದ 47 ವರ್ಷದ ಪುರುಷ. ಕೆಮ್ಮಿನಿಂದ ಬಳಲುತ್ತಿದ್ದವರನ್ನು ಜುಲೈ 6 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 7 ರಂದು ಸಾವನ್ನಪ್ಪಿದ್ದರು.
7) ರೋಗಿ-25517: ಧಾರವಾಡದ 52 ವರ್ಷದ ಪುರುಷ. ವಿಷಮ ಶೀತ ಜ್ವರದ (ಐಎಲ್ಐ) ಮತ್ತು ಶೀತ, ಕೆಮ್ಮನಿಂದ ಬಳಲುತ್ತಿದ್ದರು. ಜುಲೈ 7 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಂದೇ ಸಾವನ್ನಪ್ಪಿದ್ದರು.
8) ರೋಗಿ-25567: ಬೆಳಗಾವಿಯ 55 ವರ್ಷದ ಮಹಿಳೆ. ಸಾರಿ, ಉಸಿರಾಟದ ಸಮಸ್ಯೆ, ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಜುಲೈ 6 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಂದೇ ಸಾವನ್ನಪ್ಪಿದ್ದರು.
9) ರೋಗಿ-25830: ದಾವಣಗೆರೆಯ 55 ವರ್ಷದ ಪುರುಷ. ಸಾರಿ, ಉಸಿರಾಟದ ಸಮಸ್ಯೆ, ಜ್ವರ ಮತ್ತು ಎದೆನೋವು, ಕೆಮ್ಮಿನಿಂದ ಬಳಲುತ್ತಿದ್ದರು. ಜುಲೈ 6 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 7 ರಂದು ಸಾವನ್ನಪ್ಪಿದ್ದರು.
10) ರೋಗಿ-26671: ಕಲಬುರಗಿಯ 71 ವರ್ಷದ ಪುರುಷ. ಸಾರಿ, ಉಸಿರಾಟದ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಜುಲೈ 5 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಂದೇ ಸಾವನ್ನಪ್ಪಿದ್ದರು.
11) ರೋಗಿ-26681: ಕಲಬುರಗಿಯ 40 ವರ್ಷದ ಪುರುಷ. ಸಾರಿ, ಉಸಿರಾಟದ ಸಮಸ್ಯೆ, ಯಕೃತ್ಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಜುಲೈ 3 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 5 ರಂದು ಸಾವನ್ನಪ್ಪಿದ್ದರು.
12) ರೋಗಿ-26812: ಬೀದರ್ 68 ವರ್ಷದ ವೃದ್ಧೆ. ಸಾರಿ, ಜ್ವರ, ಉಸಿರಾಟದ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು. ಜುಲೈ 4 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 5 ರಂದು ಸಾವನ್ನಪ್ಪಿದ್ದರು.
13) ರೋಗಿ-26813: ಬೀದರ್ 70 ವರ್ಷದ ವೃದ್ಧ. ಸಾರಿ ಮತ್ತು ಅಧಿಕ ರಕ್ತದೊತ್ತಟ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜುಲೈ 4 ರಂದು ಸಾವನ್ನಪ್ಪಿದ ಬಳಿಕ ಆಸ್ಪತ್ರೆಗೆ ಕರೆತರಲಾಗಿತ್ತು.
14) ರೋಗಿ-26814: ಬೀದರ್ 70 ವರ್ಷದ ವೃದ್ಧೆ. ಜೂನ್ 29 ರಂದು ಸಾವನ್ನಪ್ಪಿದ ಬಳಿಕ ಆಸ್ಪತ್ರೆ ಕರೆತರಲಾಗಿತ್ತು. ಸೋಂಕಿನ ಮೂಲವನ್ನು ಮತ್ತೆ ಮಾಡಲಾಗುತ್ತಿದೆ.
15) ರೋಗಿ-26815: ಬೀದರ್ 60 ವರ್ಷದ ವೃದ್ಧ. ಸಾರಿ, ಅಧಿಕ ರಕ್ತದೊತ್ತಡ ಮತ್ತು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜುಲೈ 5 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಂದೇ ಸಾವನ್ನಪ್ಪಿದ್ದರು.