– ಎರಡು ತಿಂಗಳ ಬಳಿಕ ರಾಜಧಾನಿಯಲ್ಲಿ ಸಾವಿರಕ್ಕೂ ಕಡಿಮೆ ಪ್ರಕರಣ
– ಪಾಸಿಟಿವಿಟಿ ರೇಟ್ ಶೇ.3.8ಕ್ಕೆ ಇಳಿಕೆ
ಬೆಂಗಳೂರು: ರಾಜ್ಯದಲ್ಲಿಂದು ದೊಡ್ಡ ಪ್ರಮಾಣದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಇಂದು 5,041 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದದು, 115 ಜನ ಸಾವನ್ನಪ್ಪಿದ್ದಾರೆ.
Advertisement
ರಾಜಧಾನಿ ಬೆಂಗಳೂರಿನಲ್ಲಿಯೂ ಕೊರೊನಾ ರೌದ್ರ ಆರ್ಭಟ ತಗ್ಗಿದ್ದು, ಎರಡು ತಿಂಗಳ ಬಳಿಕ ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 1,32,600 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು 14,785 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ 1,62,282 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ 27,77,010 ಕೊರೊನಾ ಪ್ರಕರಣಗಳು ವರದಿಯಾಗಿವೆ.
Advertisement
Advertisement
ಬೆಂಗಳೂರಿನಲ್ಲಿ 985 ಜನಕ್ಕೆ ಸೋಂಕು ತಗುಲಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇದುರವರೆಗೂ 15,335 ಜನ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ 83,195 ಸಕ್ರಿಯ ಪ್ರಕರಣಗಳಿವೆ. ಇನ್ನುಳಿದಂತೆ ಜಿಲ್ಲೆಗಳಲ್ಲಿಯೂ ಮಹಾಮಾರಿಯ ಅಬ್ಬರ ತಗ್ಗಿದೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 23, ಬಳ್ಳಾರಿ 122, ಬೆಳಗಾವಿ 95, ಬೆಂಗಳೂರು ಗ್ರಾಮಾಂತರ 133, ಬೆಂಗಳೂರು ನಗರ 985, ಬೀದರ್ 2, ಚಾಮರಾಜನಗರ 79, ಚಿಕ್ಕಬಳ್ಳಾಪುರ 65, ಚಿಕ್ಕಮಗಳೂರು 224, ಚಿತ್ರದುರ್ಗ 95, ದಕ್ಷಿಣ ಕನ್ನಡ 482, ದಾವಣಗೆರೆ 183, ಧಾರವಾಡ 65, ಗದಗ 21, ಹಾಸನ 522, ಹಾವೇರಿ 29, ಕಲಬುರಗಿ 26, ಕೊಡಗು 64, ಕೋಲಾರ 162, ಕೊಪ್ಪಳ 30, ಮಂಡ್ಯ 213, ಮೈಸೂರು 490, ರಾಯಚೂರು 5, ರಾಮನಗರ 25, ಶಿವಮೊಗ್ಗ 282, ತುಮಕೂರು 329, ಉಡುಪಿ 107, ಉತ್ತರ ಕನ್ನಡ 122, ವಿಜಯಪುರ 50 ಮತ್ತು ಯಾದಗಿರಿಯಲ್ಲಿ 11 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.