ದಾವಣಗೆರೆ: ಕೊರೊನಾ ಎರಡನೇ ಅಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ತನ್ನ ಆರ್ಭಟವನ್ನು ಜಾಸ್ತಿ ಮಾಡಿದ್ದು, ದಾವಣಗೆರೆಯಲ್ಲಿ ಶೇ.70 ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ ದಾವಣಗೆರೆಯ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗೆ ಗ್ರಾಮದಲ್ಲಿ ಯುವಕರ ಪಡೆಯೊಂದು ತನ್ನ ಗ್ರಾಮವನ್ನು ಕೋವಿಡ್ ನಿಂದ ರಕ್ಷಣೆ ಮಾಡಿಕೊಳ್ಳಲು ಕಂಕಣ ಕಟ್ಟಿ ನಿಂತಿದ್ದಾರೆ. ಗ್ರಾಮ ಪಂಚಾಯತಿ ಸದ್ಯಸ್ಯ ಹಾಗೂ ಪಬ್ಲಿಕ್ ಹೀರೋ ಆಗಿರುವ ಪ್ರಶಾಂತ್ ಗ್ರಾಮದಲ್ಲಿರುವ ಯುವಕರನ್ನು ಸೇರಿಸಿ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
Advertisement
ದಿದ್ದಿಗೆ ಗ್ರಾಮದ ಪ್ರತಿ ಏರಿಯಾಗೆ ಒಬ್ಬರನ್ನು ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ಈ ಸ್ವಯಂ ಸೇವಕರು ಏರಿಯಾಗಳಲ್ಲಿ ಯಾರಿಗಾದ್ರು ಆನಾರೋಗ್ಯವಾದರೆ ಅಂತವರ ಮೇಲೆ ನಿಗಾ ಇಟ್ಟು ಆಸ್ಪತ್ರೆಗೆ ಕಳುಹಿಸುವುದು ಕೋವಿಡ್ ಟೆಸ್ಟ್ ಮಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಹೋಗಿ ಸಾವನ್ನಪ್ಪುವ ಪ್ರಕರಣಗಳು ಬಾರದಂತೆ ನೋಡಿಕೊಳ್ಳುತ್ತಿದ್ದಾರೆ.
Advertisement
Advertisement
ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ 2 ಸಾವಿರ ಮೌಲ್ಯದ ಕೊರೊನಾ ಮೆಡಿಕಲ್ ಕಿಟ್ ಗಳನ್ನು ಸೋಂಕಿನ ಲಕ್ಷಣಗಳು ಇರುವ ಕಡೆಗಳಲ್ಲಿ ಸಂಘಸಂಸ್ಥೆಗಳ ಸಹಾಯದಿಂದ ಉಚಿತವಾಗಿ ನೀಡುತ್ತಿದ್ದಾರೆ. ಎರಡು ದಿನಗಳಿಗೆ ಒಮ್ಮೆ ಮೈಕ್ ನಲ್ಲಿ ಜನರಿಗೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ್ರೆ ಆಶಾ ಕಾರ್ಯಕರ್ತರಿಗೆ ಹಾಗೂ ನಮಗೆ ತಿಳಿಸುವಂತೆ ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಮನೆ ಮನೆಗೆ ಹೋಗಿ ಕಿಟ್ ನೀಡಿ ಕೋವಿಡ್ ನಿಂದ ಜಾಗೃತರಾಗಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
Advertisement
ಈ ಮೆಡಿಕಲ್ ಕಿಟ್ ನಲ್ಲಿ ಪಲ್ಸ್ ಆಕ್ಸಿಮೀಟರ್, ಥರ್ಮಾ ಮೀಟರ್, ಕೊರೊನಾ ಸಂಬಂಧಿಸಿದ ಟ್ಯಾಬ್ಲೆಟ್ಸ್, ಓಆರ್ ಎಸ್, ವಿಟಮಿನ್ ಸಿ ಹಾಗು ಡಿ ಟ್ಯಾಬ್ಲೆಟ್ ಗಳ ಲಭ್ಯ ಇವೆ. ಇನ್ನು ನೀಡಿದ ಮಾತ್ರೆಗಳನ್ನು ಯಾವ ರೀತಿ ಬಳಕೆ ಮಾಡಬೇಕೆಂಬುದಕ್ಕೆ ಒಂದು ಕರ ಪತ್ರವನ್ನು ಕೂಡ ಮಾಡಲಾಗಿದೆ. ಈ ಯುವಕರ ತಂಡಕ್ಕೆ ಇಡೀ ಗ್ರಾಮದ ಜನರು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಕೂಡ ಸಾಥ್ ನೀಡಿದ್ದು, ಇದೊಂದು ಇಡೀ ಜಿಲ್ಲೆಗೆ ಆದರ್ಶ ಗ್ರಾಮವಾಗಿದೆ.