ಬೆಂಗಳೂರು: ನಗರದಲ್ಲಿ ಕೋವಿಡ್ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಆರಂಭಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಚಿಕಿತ್ಸಾ ದರವನ್ನು ನಿರ್ಧರಿಸಿ ಆದೇಶ ಹೊರಡಿಸಿದೆ.
ದರ ನಿಗದಿ ಮಾಡಿ ಆದೇಶ ನೀಡಿರುವ ರಾಜ್ಯ ಸರ್ಕಾರ ಎರಡು ಮಾದರಿಯ ದರ ನಿಗದಿ ಮಾಡಿದೆ. ಖಾಸಗಿ ಆಸ್ಪತ್ರೆಗೆ ನೇರವಾಗಿ ದಾಖಲಾಗುವ ರೋಗಿಗೆ ಒಂದು ಮಾದರಿಯ ದರ ಹಾಗೂ ಸರ್ಕಾರದಿಂದ ರೆಫರ್ ಆದ ರೋಗಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹೈ ಡಿಪೆಂಡೆನ್ಸಿ ಯುನಿಟ್ (ಎಚ್ಡಿಯು), ಐಸಿಯು ಹಾಗೂ ಬೆಡ್ಗಳನ್ನು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮೀಸಲಿಡಲು ಸೂಚಿಸಲಾಗಿದೆ. ಕೊರೊನಾ ರೋಗಿಗಳಿಗಾಗಿ ಮೀಸಲಿಟ್ಟ ಬೆಡ್ಗಳಲ್ಲಿ ಸರ್ಕಾರದಿಂದ ರೇಫರ್ ಮಾಡುವ ರೋಗಿಗಳಿಗೆ ಶೇ.50 ರಷ್ಟು ಬೆಡ್ಗಳನ್ನು ಕಡ್ಡಾಯವಾಗಿ ಮೀಸಲಿರಿಸಬೇಕಿದೆ. ಉಳಿದ ಶೇ.50 ರಷ್ಟು ಬೆಡ್ಗಳನ್ನು ಬೇರೆ ಕೋವಿಡ್ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಮೀಸಲಿರಬಹುದಾಗಿದೆ.
Advertisement
Advertisement
ರಾಜ್ಯ ಸರ್ಕಾರದದ ಸಮಿತಿ ಹಲವು ಭಾರೀ ಚರ್ಚೆ ನಡೆಸಿ ತಜ್ಞರ ಅಭಿಪ್ರಾಯದೊಂದಿಗೆ ದರ ನಿಗದಿ ಮಾಡಿ ಕೋವಿಡ್ ಟಸ್ಕ್ ಪೋರ್ಸ್ ಎದುರು ವರದಿ ನೀಡಿತ್ತು. ಜೂನ್ 18ರಂದು ನಡೆದ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ನೀಡಲಾಗಿತ್ತು. ಸದ್ಯ ಸಮಿತಿಯ ಕೋವಿಡ್-19 ಚಿಕಿತ್ಸಾ ಪ್ಯಾಕೇಜ್ಗೆ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ.
Advertisement
ಸರ್ಕಾರ ಆರೋಗ್ಯ ಇಲಾಖೆ ಶಿಫಾರಸು ಮಾಡಿದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿ ಮಾಡಿರುವ ದರ ಇಂತಿದೆ. ಜನರಲ್ ವಾರ್ಡಿಗೆ 5,200 ರೂ, ಎಚ್ಡಿಯುಗೆ 7,000 ರೂ., ಐಸೋಲೇಶನ್ ವಾರ್ಡಿಗೆ 8,500 ರೂ. ಹಾಗೂ ವೆಂಟಿಲೇಟರ್ ಹೊಂದಿರುವ ಐಸಿಯು ವಾರ್ಡಿಗೆ 10,000 ರೂ. ನಿಗದಿ ಮಾಡಲಾಗಿದೆ.
Advertisement
ಖಾಸಗಿ ಆಸ್ಪತ್ರೆಗಳಲ್ಲಿ ನೆರವಾಗಿ ದಾಖಲಾದ ಕೋವಿಡ್-16 ರೋಗಿಗಳಿಗೆ (ಸರ್ಕಾರಿ ವಿಮೆ ರಹಿತ) ಜನರಲ್ ವಾರ್ಡಿಗೆ 10,000 ರೂ., ಆಕ್ಸಿಜನ್ ವಾರ್ಡಿಗೆ 12,000 ರೂ., ಐಸೋಲೇಷನ್ ವಾರ್ಡಿಗೆ 15,000 ರೂ., ಐಸೋಲೇಷನ್ ಸಹಿತ ವೆಂಟಿಲೇಟರ್ ವಾರ್ಡಿಗೆ 25,000 ರೂ. ದರ ನಿಗದಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆ ಅಡಿ ನೋಂದಣಿಯಾಗಿರುವ ಒಟ್ಟು 600 ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ಲಭ್ಯವಿದೆ. ಆದರೆ ಖಾಸಗಿ ಆಸ್ಪತ್ರೆಗಳಿಂದ ಮತ್ತೆ ದರ ಪರಿಷ್ಕರಣೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ದರ ನಿಗದಿ ಮಾಡಿರುವ ದರ ತುಂಬಾ ಕಡಿಮೆ ಇದೆ. ಈ ದರ ಮತ್ತೆ ಪರಿಷ್ಕರಣೆ ಮಾಡಿ ಎಂದು ಮನವಿ ಮಾಡಿರುವುದಾಗಿ ಪಬ್ಲಿಕ್ ಟಿವಿಗೆ ಫನಾ ಅಧ್ಯಕ್ಷ ಡಾ ಪ್ರಸನ್ನ ಮಾಹಿತಿ ನೀಡಿದ್ದಾರೆ. ಆದರೆ ಹೊರ ರಾಜ್ಯಗಳಿಗೆ ಕೊರೊನಾ ಚಿಕಿತ್ಸಾ ದರವನ್ನು ಹೋಲಿಸಿದರೆ ದುಬಾರಿ ಎಂದು ಹೇಳಬಹುದಾಗಿದೆ.