ನವದೆಹಲಿ: ದೇಶದಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಕುಸಿಯುತ್ತಿದ್ದು ಹೊಸ ದಾಖಲೆಯನ್ನು ಸೃಷ್ಟಿಸಿದೆ. ಕಳೆದ 24 ಗಂಟೆಯಲ್ಲಿ 36,604 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದು 101 ದಿನಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಜುಲೈ 17ರಂದು 35,065 ಪ್ರಕರಣಗಳು ದಾಖಲಾಗಿದ್ದವು. ಹಲವು ರಾಜ್ಯಗಳಲ್ಲಿ ನಿರಂತರವಾಗಿ ಕನಿಷ್ಠ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಪ್ರಮಾಣದ ಇಳಿಕೆಗೆ ಕಾರಣ ಎನ್ನಲಾಗಿದೆ.
Advertisement
Total 10,44,20,894 samples tested for #COVID19 up to 26th October. Of these 9,58,116 samples were tested yesterday: Indian Council of Medical Research (ICMR) pic.twitter.com/ERv3MslH96
— ANI (@ANI) October 27, 2020
Advertisement
ಓಆರ್ಜಿ ಅಂಕಿ ಅಂಶಗಳ ಪ್ರಕಾರ ಅಕ್ಟೋಬರ್ 25 ರಂದು 9,39,309 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ವಾರದ ಇತರ ದಿನಗಳಿಗೆ ಹೋಲಿಸಿದರೆ ಇದು ಕಡಿಮೆ. ಹಿಂದಿನ ಎರಡು ದಿನಗಳಲ್ಲಿ ತಲಾ 14 ಲಕ್ಷ ಪರೀಕ್ಷೆ ನಡೆದಿತ್ತು. ಭಾನುವಾರ ಪರೀಕ್ಷೆ ನಡೆಸುವ ಸಂಖ್ಯೆ ಕಡಿಮೆಯಾಗಿದ್ದರಿಂದ ಸೋಮವಾರ ಕಡಿಮೆ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದೆ ಎನ್ನಲಾಗಿದ್ದರು, ಹಿಂದಿನ ಹಲವು ಭಾನುವಾರದ ವೇಳೆಯೂ ಕಡಿಮೆ ಸಂಖ್ಯೆಯ ಪರೀಕ್ಷೆ ನಡೆದರೂ, ಸೋಮವಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿತ್ತು.
Advertisement
With 36,469 new #COVID19 infections, India’s total cases surge to 79,46,429. With 488 new deaths, toll mounts to 1,19,502.
Total active cases are 6,25,857 after a decrease of 27,860 in last 24 hrs
Total cured cases are 72,01,070 with 63,842 new discharges in last 24 hrs pic.twitter.com/YYENxUZlay
— ANI (@ANI) October 27, 2020
Advertisement
ಸದಾ ಅಗ್ರಸ್ಥಾನದಲ್ಲಿದ್ದ ಮಹಾರಾಷ್ಟ್ರದಲ್ಲಿ ಸೋಮವಾರ 3,645 ಪ್ರಕರಣಗಳು ಪತ್ತೆಯಾಗಿದ್ದು, ಕೇರಳದಲ್ಲಿ 4,287 ಪಶ್ಚಿಮ ಬಂಗಾಳ 4,121 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದ 3645 ಪ್ರಕರಣಗಳು 125 ದಿನಗಳಲ್ಲೇ ಕನಿಷ್ಠವಾಗಿದ್ದು, 84 ಮಂದಿ ಸೋಮವಾರ ಸಾವನ್ನಪ್ಪಿದ್ದಾರೆ. ಇದು 146 ದಿನಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ.