ಇಸ್ಲಾಮಾಬಾದ್: ಪಾಕಿಸ್ತಾನ ಕರಾಚಿಯಲ್ಲಿ ಸಂಭವಿಸಿದ್ದ ಘೋರ ವಿಮಾನ ದುರಂತಕ್ಕೆ ಪೈಲಟ್ಗಳ ನಿರ್ಲಕ್ಷ್ಯವೇ ಕಾರಣ ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. 97 ಮಂದಿ ಈ ದುರಂತದಲ್ಲಿ ಸಾವನ್ನಪ್ಪಿದ್ದರು.
ಲಾಹೋರ್ ನಿಂದ ಹೊರಟ್ಟಿದ್ದ ಏರ್ಬಸ್ ಎ320 ವಿಮಾನ ಕರಾಚಿಯಲ್ಲಿ ಲ್ಯಾಂಡಿಂಗ್ ವೇಳೆ ಪೈಲಟ್, ಏರ್ ಟ್ರಾಫಿಕ್ ಕಂಟ್ರೋಲರ್ ನಿರ್ಲಕ್ಷ್ಯದಿಂದ ಕೊರೊನಾ ವೈರಸ್ ಕುರಿತು ಮಾತನಾಡುತ್ತಿದ್ದರು ಎಂದು ಪಾಕ್ ವಿಮಾನಯಾನ ಸಚಿವ ಗುಲಾಮ್ ಸರ್ವಾರ್ ಖಾನ್, ಪಾರ್ಲಿಮೆಂಟ್ನಲ್ಲಿ ಜೂನ್ 24 ರಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಘಟನೆಯ ಕುರಿತು ತನಿಖೆ ಕೈಗೊಂಡಿದ್ದ ತಂಡ, ಪೈಲಟ್ ಹಾಗೂ ಏರ್ ಟ್ರಾಫಿಕ್ ಕಂಟ್ರೋಲರ್ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ದೃಢಪಡಿಸಿದೆ. ಪೈಲಟ್, ಕೋ-ಪೈಲೆಟ್ ಇಬ್ಬರು ವಿಮಾನದ ಲ್ಯಾಂಡಿಂಗ್ ಮೇಲೆ ಗಮನ ನೀಡಿರಲಿಲ್ಲ. ಕೊರೊನಾ ಮಹಾಮಾರಿಯ ಕುರಿತ ಚರ್ಚೆಯ ಮುಳುಗಿದ್ದರು. ವಿಮಾನ ಹಾರಾಟ ನಡೆಸಲು 100 ರಷ್ಟು ಫಿಟ್ ಆಗಿತ್ತು. ಯಾವುದೇ ತಾಂತ್ರಿಕ ಸಮಸ್ಯೆ ಇರಲಿಲ್ಲ ಎಂದು ಸಚಿವರು ವಿವರಿಸಿದ್ದಾರೆ.
Advertisement
Advertisement
ಪಾಕಿಸ್ತಾನದಲ್ಲಿ ಮೇ 22ರಂದು ನಡೆದ ಈ ದುರ್ಘಟನೆಯಲ್ಲಿ 97 ಮಂದಿ ಸಾವನ್ನಪ್ಪಿದ್ದರು. ಇಬ್ಬರು ಮಾತ್ರ ಜೀವಂತವಾಗಿ ಬದುಕುಳಿದಿದ್ದರು. ಘಟನೆಯ ಕುರಿತು ಪಾಕ್ ಸರ್ಕಾರ ಉನ್ನತ ತನಿಖೆಗೆ ಆದೇಶ ನೀಡಿತ್ತು. ಈ ತನಿಖೆಯಲ್ಲಿ ಪಾಕ್ನ ಉನ್ನತ ಅಧಿಕಾರಿಗಳ ಜೊತೆಗೆ ಫ್ರಾನ್ಸ್ ದೇಶದ ತಜ್ಞರು ಕೂಡ ಭಾಗಿಯಾಗಿದ್ದರು. ವಿಮಾನ ಪತನದ ಬಳಿಕ ಲಭಿಸಿದ ವಾಯ್ಸ್ ರೆಕಾರ್ಡ್, ಡೇಟಾ ಪರಿಶೀಲನೆ ನಡೆಸಿದ ಬಳಿಕ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿತ್ತು.
97 dead, 2 survivors from yesterday’s Pakistan International Airlines (PIA) plane crash in Karachi: AFP news agency #PIA
— ANI (@ANI) May 23, 2020