ಮಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಈ ಬಾರಿ ಹಬ್ಬಹರಿದಿನಗಳ ಮೇಲೂ ಕರಿನೆರಳು ಬಿದ್ದಿದ್ದು, ನಾಗರಪಂಚಮಿ, ಕೃಷ್ಣಾಷ್ಟಮಿ, ಗಣೇಶೋತ್ಸವಗಳು ನಡೆಯೋದೇ ಅನುಮಾನ ಎನ್ನುವಂತಾಗಿದೆ.
ಕರಾವಳಿಯ ತುಳುನಾಡಿನಲ್ಲಿ ಇಂದು ಆಟಿ ಅಮಾವಾಸ್ಯೆಯ ಸಡಗರ ಸಂಭ್ರಮ. ಪ್ರತಿ ವರ್ಷ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ತೀರ್ಥ ಸ್ನಾನ ನಡೆಯುತ್ತಿತ್ತು. ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಪ್ತ ಕೆರೆಗಳಲ್ಲಿ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದಾಗಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದ್ದು, ಭಕ್ತರಿಲ್ಲದೆ ದೇವಸ್ಥಾನ ಸ್ತಬ್ಧವಾಗಿದೆ.
ಅಲ್ಲದೆ ನಾಗರ ಪಂಚಮಿಯಂದು ಹುತ್ತಕ್ಕೆ ಹಾಗೂ ನಾಗ ಮೂರ್ತಿಗೆ ಹಾಲೆರೆದು ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲವೂ ಸ್ತಬ್ಧವಾಗಿದ್ದು, ವಿವಿಧ ಬಗೆಯ ಲಾಡು ಕಟ್ಟುವುದರಲ್ಲಿ ಬ್ಯುಸಿಯಾಗಿರುತ್ತಿದ್ದ ಜನತೆ, ಇದೀಗ ಸರಳವಾಗಿ ಹಬ್ಬ ಆಚರಿಸಲು ಮುಂದಾಗಿದ್ದಾರೆ.