ಬೆಂಗಳೂರು: ಕೊರೊನಾ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಲಾಕ್ಡೌನ್ನಿಂದ ತಿಮ್ಮಪ್ಪನ ಲಡ್ಡು ಪ್ರಸಾದದ ಬೆಲೆ ಕಡಿಮೆಯಾಗಿದೆ.
ಲಾಕ್ಡೌನ್ ಇದ್ದರೂ ಗ್ರೀನ್ ಝೋನ್ ವಾರ್ಡ್ ಗಳಲ್ಲಿ ರಿಯಾಯಿತಿ ಸಿಕ್ಕಿದೆ. ಆದರೂ ದೇವಾಲಯಗಳಲ್ಲಿ ಜನ ಸಮೂಹ ಸೇರಲು ಅವಕಾಶ ಇಲ್ಲ. ಹೀಗಾಗಿ ದೇವಾಲಯಗಳಲ್ಲಿ ಈಗ ಪ್ರಸಾದ ದರ ಕಡಿಮೆ ದರಕ್ಕೆ ಸಿಗುತ್ತಿದೆ. ಅದರಲ್ಲೂ ತಿರುಪತಿ ಲಡ್ಡು ಪ್ರಸಾದ ಯಾರಿಗೆ ಇಷ್ಟ ಇಲ್ಲ ಹೇಳಿ ಈ ಲಡ್ಡು ಎಲ್ಲರ ಅಚ್ಚುಮೆಚ್ಚು. ಈಗ ಈ ಲಡ್ಡುವಿನ ಬೆಲೆ ಕಡಿಮೆಯಾಗಿದೆ.
Advertisement
Advertisement
ಈ ಬಗ್ಗೆ ಅಧಿಕೃತವಾಗಿ ಟಿಟಿಡಿ ಮೂಲಗಳೇ ಮಾಹಿತಿಯನ್ನು ಹೊರಹಾಕಿವೆ. ಈ ಪ್ರಕಾರ ಬೆಂಗಳೂರಿನಲ್ಲೇ 50 ರೂ. ಇದ್ದ ಒಂದು ಲಡ್ಡು, ಈಗ 25 ರೂ. ಗೆ ಸಿಗುತ್ತದೆ. ಇದು ಲಾಕ್ಡೌನ್ ಸಡಿಲಿಕೆಯ ಎಫೆಕ್ಟ್ ಆಗಿದ್ದು, ಲಾಕ್ಡೌನ್ ಮುನ್ನ ಲಡ್ಡು ಪ್ರಸಾದಕ್ಕಾಗಿ ಬೇಕಾದ ಎಲ್ಲ ಸಾಮಗ್ರಿಗಳ ಸಂಗ್ರಹವಾಗಿದೆ. ಈಗ ಕಾಲಕ್ರಮೇಣ ವಸ್ತುಗಳು ಕೆಡುತ್ತಿದೆ. ಜನರು ದೇವಾಲಯಕ್ಕೆ ಕಡಿಮೆಯಾಗಿದ್ದಾರೆ. ಹೀಗಾಗಿ ನಷ್ಟ ತಪ್ಪಿಸಲು ಈ ಪ್ಲಾನ್ ನಡೆದಿದೆ. ಈ ಪ್ರಕಾರ ಚೆನ್ನೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಲಡ್ಡು ಕಡಿಮೆ ದರಕ್ಕೆ ಸಿಗಲಿದೆ.
Advertisement
Advertisement
ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ವೈ.ವಿ ಸುಬ್ಬಾ ರೆಡ್ಡಿ, ಈ ಕೊರೊನಾ ಲಾಕ್ಡೌನ್ನಿಂದ ನಾವು ಯಾವಾಗ ಭಕ್ತರಿಗೆ ದೇವಸ್ಥಾನದಲ್ಲಿ ದರ್ಶನ ಕಲ್ಪಿಸಿಕೊಡುತ್ತೇವೆ ಎಂದು ನಮಗೇ ತಿಳಿದಿಲ್ಲ. ಹೀಗಾಗಿ ಮನವಿ ಮಾಡಿಕೊಂಡ ಭಕ್ತರಿಗಾಗಿ ದೇವರ ಪ್ರಸಾದವನ್ನು ತಲುಪಿಸುವ ಕೆಲಸ ಮಾಡಬೇಕಿದೆ. ಆದ್ದರಿಂದ ಈ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದ್ದಾರೆ.
ಇಂಡಿಯಾ ಪೋಸ್ಟ್ ಮತ್ತು ಕೊರಿಯರ್ ಸೇವೆಗಳು ಇನ್ನೂ ಆರಂಭವಾಗಿಲ್ಲ. ಈ ಕಾರಣದಿಂದ ನಾವು ಕೊರಿಯರ್ ಮಾಡಲು ಆಗುವುದಿಲ್ಲ. ಹೀಗಾಗಿ ನಮ್ಮ ತಿರುಮಲ ಅಡುಗೆ ಮನೆಯಲ್ಲಿ ತಯಾರದ ಲಡ್ಡುವನ್ನು ವಿವಿಧ ನಗರಗಳಲ್ಲಿ ಇರುವ ನಮ್ಮ ಟ್ರಸ್ಟಿನ ಕೇಂದ್ರಗಳಿಗೆ ಕಳುಹಿಸಿರುತ್ತೇವೆ. ಪ್ರಸಾದ ಬೇಕಾದ ಭಕ್ತರು ಅಲ್ಲಿಗೆ ಬಂದು ತೆಗೆದುಕೊಂಡು ಹೋಗಬೇಕು ಎಂದು ಸುಬ್ಬಾ ರೆಡ್ಡಿ ಮಾಹಿತಿ ನೀಡಿದ್ದಾರೆ.
ಲಡ್ಡುವನ್ನು ಆರ್ಡರ್ ಮಾಡಲು ಭಕ್ತರು ತಿರುಮಲ ದೇವಸ್ಥಾನದ ಉಪ ಕಾರ್ಯನಿರ್ವಾಹಕ ಅಧಿಕಾರಿ ಹರಿಂದ್ರ ನಾಥ್ ಅವರಿಗೆ (9849575952) ಮತ್ತು ಪೊಟು ಪೀಷ್ಕರ್ ಶ್ರೀನಿವಾಸನ್ ಅವರಿಗೆ (9701092777) ಕರೆ ಮಾಡಬಹುದು ಎಂದು ತಿರುಮಲದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮರೆಡ್ಡಿ ತಿಳಿಸಿದ್ದಾರೆ. ಜೊತೆಗೆ ನಾವು ಪ್ರತಿದಿನ 3-4 ಲಕ್ಷ ಲಾಡುಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದ್ದೇವೆ. ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ಹೊರತುಪಡಿಸಿ ಆಂಧ್ರಪ್ರದೇಶದ 13 ಜಿಲ್ಲೆಯಲ್ಲಿರುವ ಕೇಂದ್ರಗಳಿಗೆ ಲಡ್ಡುವನ್ನು ಕಳುಹಿಸಲಾಗುವುದು ಎಂದರು.