ಬೆಂಗಳೂರು: ರಾಜ್ಯದಲ್ಲಿ 10 ಸಾವಿರಕ್ಕೂ ಕಡಿಮೆ ಕೊರೊನಾ ಪ್ರಕರಣಗಳು ಇಂದು ವರದಿಯಾಗಿದೆ. ಇಂದು 9,808 ಜನಕ್ಕೆ ಸೋಂಕು ತಗುಲಿದ್ದು, ಪಾಸಿಟಿವಿಟಿ ರೇಟ್ ಶೇ.7.53ಕ್ಕೆ ಇಳಿಕೆಯಾಗಿದೆ. ಇಂದು ಕೊರೊನಾಗೆ 179 ಜನರು ಸಾವನ್ನಪ್ಪಿದ್ದು, ಮರಣ ಪ್ರಮಾಣ ದರ ಶೇ.1.85ಕ್ಕೆ ಇಳಿಕೆ ಕಂಡಿದೆ.
Advertisement
ಸದ್ಯ ರಾಜ್ಯದಲ್ಲಿ 2,25,004 ಸಕ್ರಿಯ ಪ್ರಕರಣಗಳಿವೆ. ಇಂದು 23,449 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇದುವರೆಗೂ 27,17,289 ಕೊರೊನಾ ಪ್ರಕರಣಗಳು ವರದಿಯಾಗಿವೆ.
Advertisement
Advertisement
ಒಟ್ಟು 1,30,224 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇತ್ತ ಬೆಂಗಳೂರಿನಲ್ಲಿ 2,028 ಜನಕ್ಕೆ ಸೋಂಕು ತಗುಲಿದ್ದು, 44 ಸೋಂಕಿತರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸದ್ಯ 1,01,965 ಸಕ್ರಿಯ ಪ್ರಕರಣಗಳಿವೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 46, ಬಳ್ಳಾರಿ 212, ಬೆಳಗಾವಿ 443, ಬೆಂಗಳೂರು ಗ್ರಾಮಾಂತರ 125, ಬೆಂಗಳೂರು ನಗರ 2,028, ಬೀದರ್ 10, ಚಾಮರಾಜನಗರ 106, ಚಿಕ್ಕಬಳ್ಳಾಪುರ 173, ಚಿಕ್ಕಮಗಳೂರು 287, ಚಿತ್ರದುರ್ಗ 196, ದಕ್ಷಿಣ ಕನ್ನಡ 525, ದಾವಣಗೆರೆ 384, ಧಾರವಾಡ 275, ಗದಗ 78, ಹಾಸನ 659, ಹಾವೇರಿ 211, ಕಲಬುರಗಿ 63, ಕೊಡಗು 196, ಕೋಲಾರ 298, ಕೊಪ್ಪಳ 165, ಮಂಡ್ಯ 387, ಮೈಸೂರು 974, ರಾಯಚೂರು 56, ರಾಮನಗರ 42, ಶಿವಮೊಗ್ಗ 703, ತುಮಕೂರು 589, ಉಡುಪಿ 205, ಉತ್ತರ ಕನ್ನಡ 187, ವಿಜಯಪುರ 152 ಮತ್ತು ಯಾದಗಿರಿಯಲ್ಲಿ 33 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.