ಕೋಲ್ಕತ್ತಾ: ಕೊರೊನಾ ವೈರಸ್ ಅಂತ್ಯವಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಪಕ್ಷದ ಅಧ್ಯಕ್ಷ ದಿಲೀಪ್ ಘೋಷ್ ಘೋಷಣೆ ಮಾಡಿದ್ದಾರೆ. ಬೃಹತ್ ರ್ಯಾಲಿಯಲ್ಲಿ ಏರ್ಪಡಿಸಿ ಇಷ್ಟು ಮಂದಿಯನ್ನು ನೋಡಲು ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಹೀಗಾಗಿ ಎಲ್ಲಾ ಪಕ್ಷಗಳು ಚುನಾವಣಾ ಕಾರ್ಯಕ್ರಮಗಳನ್ನು ಆರಂಭಿಸಿದೆ. ಬಿಜೆಪಿ ಕೂಡ ಬುಧವಾರ ಹೂಗ್ಲಿಯಲ್ಲಿ ಬೃಹತ್ ರ್ಯಾಲಿಯನ್ನು ಏರ್ಪಡಿಸಿ ಶಕ್ತಿ ಪ್ರದರ್ಶನ ಮಾಡಿದೆ.
Advertisement
#Corona চলে গেছে!
দিদিমণি শুধু শুধু ঢং করছেন, lockdown করছেন যাতে BJP মিটিং মিছিল না করতে পারে!
Corona is Gone! Didi is uselessly imposing lockdown so that BJP cannot hold meetings and rallies: Dilip Ghosh pic.twitter.com/E20mcfph29
— Indrajit Kundu | ইন্দ্রজিৎ – কলকাতা (@iindrojit) September 10, 2020
Advertisement
ದೀದಿ (ಮಮತಾ ಬ್ಯಾನರ್ಜಿ) ಅವರ ಸಹೋದರರು ಇಲ್ಲಿ ನೆರೆದಿರುವ ಜನರನ್ನು ನೋಡಿ ಅಸ್ವಸ್ಥರಾಗಿದ್ದಾರೆ ಹೊರತು ಕೊರೊನಾ ವೈರಸ್ ಭಯದಿಂದ ಅಲ್ಲ. ಅವರಿಗೆ ಬಿಜೆಪಿ ಪಕ್ಷದ ಭಯವಿದೆ. ಆದರೆ ಕೊರೊನಾದ ವೈರಸ್ ಅವಧಿ ಅಂತ್ಯವಾಗಿದೆ. ದೀದಿ ಅನತ್ಯವಾಗಿ ಲಾಕ್ಡೌನ್ ಹೇರುತ್ತಿದ್ದು, ಇದರಿಂದ ಬಿಜೆಪಿ ಸಭೆ ಹಾಗೂ ರ್ಯಾಲಿಗಳನ್ನು ನಡೆಸಲು ಸಾಧ್ಯವಿಲ್ಲ ಎಂಬುವುದು ಅವರ ಉದ್ದೇಶವಾಗಿದೆ. ಆದರೆ ನಾವು ಎಲ್ಲಿಗೆ ಹೋದರೂ ಅದು ಸ್ವಯಂ ರ್ಯಾಲಿಯಾಗಿ ಬದಲಾಗುತ್ತದೆ ಎಂದು ಘೋಷ್ ಹೇಳಿದ್ದಾರೆ.
Advertisement
ರಾಜ್ಯದಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿದೆ. ಕೊರೊನಾ ಇಲ್ಲದಿದ್ದರೂ ಲಾಕ್ಡೌನ್ ಮಾಡುವ ಮೂಲಕ ದೀದಿ ತಮ್ಮ ನಾಟಕವನ್ನು ಮುಂದುವರಿಸಿದ್ದಾರೆ. ಲಾಕ್ಡೌನ್ ನೆಪದಲ್ಲಿ ಅವರು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಘೋಷ್ ಆರೋಪಿಸಿದ್ದಾರೆ.
Advertisement
From Dhaniakhali (Hooghly zela), while addressing a public meeting this afternoon. pic.twitter.com/Oa7AlnmsVn
— Dilip Ghosh (@DilipGhoshBJP) September 9, 2020
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 95,735 ಹೊಸ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ದೃಢವಾದ ಸಂದರ್ಭದಲ್ಲೇ ದಿಲೀಪ್ ಘೋಷ್ ಈ ಹೇಳಿಕೆಯನ್ನು ನೀಡಿದ್ದಾರೆ. ಬುಧವಾರ ಬಂಗಾಳದಲ್ಲಿ 3,107 ಮಂದಿಗೆ ಕೊರೊನಾ ಪಾಸಿಟಿವ್ ಹಾಗೂ 53 ಮಂದಿಗೆ ಸೋಂಕಿಗೆ ಬಲಿಯಾಗಿದ್ದಾರೆ. ಬಂಗಾಳದಲ್ಲಿ ಕೆಲ ವಾರಗಳಿಂದ ಪ್ರತಿದಿನ 3 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗುತ್ತಿದೆ. ಇದುವರೆಗೂ 3,730 ಮಂದಿ ಸಾವನ್ನಪ್ಪಿದ್ದು, 1.9 ಲಕ್ಷ ಮಂದಿಗೆ ಸೋಂಕು ದೃಢವಾಗಿದೆ.
ದಿಲೀಪ್ ಘೋಷ್ ರ್ಯಾಲಿ ನಡೆಸಿದ್ದ ಹೂಗ್ಲಿ ಜಿಲ್ಲೆಯೂ ಕೊರೊನಾ ತೀವ್ರತೆ ಹೊಂದಿರುವ ಬಂಗಾಳದ 5ನೇ ರಾಜ್ಯವಾಗಿದೆ. ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಂದಿ, ರಾಜಕೀಯ ಮುಖಂಡರು ಫೇಸ್ ಮಾಸ್ಕ್ ಧರಿಸಿರಲಿಲ್ಲ. ಅಲ್ಲದೇ ಸಾಮಾಜಿಕ ಅಂತರ ಪಾಲನೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅಪಾರ ಜನರನ್ನು ಒಟ್ಟುಗೂಡಿಸಿದ್ದರು. ಈ ರ್ಯಾಲಿಯನ್ನು ಏರ್ಪಡಿಸಿದ್ದ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಅವರು ಕೂಡ ಜುಲೈನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದರು.