ಡೆಲ್ಲಿ: ಕೊರೊನಾ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಯುವ ವೈದ್ಯರೊಬ್ಬರು ಬಹಳ ಆತ್ಮೀಯವಾಗಿ ಉಪಚರಿಸಿ ಧೈರ್ಯ ತುಂಬಿರುವ ಘಟನೆ ಡೆಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
Advertisement
ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿ ಹಬ್ಬುತ್ತಿದ್ದಂತೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಆಸ್ಪತ್ರೆಗೆ ಸೇರುತ್ತಿರುವವರ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ. ಡೆಲ್ಲಿ ಆಸ್ಪತ್ರೆಯೊಂದರಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವ ಯುವ ವೈದ್ಯೆ ಡಾ. ಸಂದ್ರಾ ಸೆಬಾಸ್ಟಿಯನ್ ತಾನು ಕಂಡಂತಹ ಕೊರೊನಾ ಸಾವಿನ ಘಟನೆಯೊಂದಿಗೆ ಜನರು ಮಾಡುತ್ತಿರುವ ನಿರ್ಲಕ್ಷದ ಕುರಿತಾಗಿ ಮಾತನಾಡಿದ್ದಾರೆ.
Advertisement
Advertisement
ಸಂದ್ರಾ ಸೆಬಾಸ್ಟಿಯನ್ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಕೊರೊನಾ ರೋಗಿಗಳಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸೆಬಾಸ್ಟಿನ್ ಕೊರೊನಾ ಸೋಂಕಿತರನ್ನು ಬಹಳ ಹತ್ತಿರದಿಂದ ಗಮನಿಸಿದ್ದರು. ಹಾಗಾಗಿ ಇದರ ಭೀಕರತೆ ಅವರಿಗೆ ಸರಿಯಾಗಿ ಅರ್ಥವಾಗಿದೆ. ಈ ಕುರಿತು ತಿಳಿಸಿದ ಸೆಬಾಸ್ಟಿನ್ ತನ್ನ ಕುಟುಂಬದವರೆಲ್ಲರಿಗೂ ಕೊರೊನಾ ಬಂದು ಪಟ್ಟಂತಹ ಕಷ್ಟವನ್ನು ಕಂಡು ಹಾಗೂ ತನ್ನ ಕಣ್ಣಮುಂದೆ ನೂರಾರು ಜನ ಸಾಯುವುದನ್ನು ಕಂಡು ತಾನು ವೈದ್ಯೆಯಾಗಿ ಇತರರನ್ನು ಬದುಕಿಸಬೇಕೆಂಬ ಹಂಬಲದಿಂದ ರಾತ್ರಿ ಹಗಲು ಎನ್ನದೆ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿ ಐಸಿಯುನಲ್ಲಿದ್ದ ರೋಗಿಗಳಿಗೆ ಧೈರ್ಯ ತುಂಬುವ ಮೂಲಕ ಸೋಂಕಿನಿಂದ ಹೊರಬರುವಂತೆ ಮಾಡಿದ್ದಾರೆ.
Advertisement
ಆದರೂ ಕೂಡ ಕೊರೊನಾ ಎರಡನೇ ಅಲೆ ತುಂಬಾ ಕ್ರೂರವಾಗಿದ್ದು ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರ ಸಹಿತ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕು ಎಂದು ಜನರೊಂದಿಗೆ ಮನವಿ ಮಾಡಿಕೊಂಡಿದ್ದಾರೆ.