ಬೆಂಗಳೂರು: ಕೊರೊನಾಗೆ 8 ತಿಂಗಳ ತುಂಬು ಗರ್ಭಿಣಿ ಬಲಿಯಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಮಗವನ್ನು ಹೊರ ತೆಗೆದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಬೌರಿಂಗ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಉಳಿಸಿದ್ದಾರೆ. ಆದರೆ 8 ತಿಂಗಳಿಗೆ ಕಣ್ಣುಬಿಟ್ಟ ಕೂಸು ಅನಾಥವಾಗಿದೆ. 10 ದಿನದ ಹಸುಗೂಸನ್ನು ನೋಡಿದರೆ ಎಂತಹವರ ಕಣ್ಣಲ್ಲೂ ನೀರು ಜಿನುಗುತ್ತದೆ. ಸದ್ಯ ವೆಂಟಿಲೇಟರ್ ನಲ್ಲಿ ಹಸುಗೂಸಿಗೆ ಚಿಕಿತ್ಸೆ ಮುಂದುವರಿಸಿದ್ದು, ತಾಯಿಯನ್ನು ಕಳೆದುಕೊಂಡು 3 ವರ್ಷದ ಇನ್ನೊಂದು ಹೆಣ್ಣು ಮಗು ಸಹ ಅನಾಥವಾಗಿದೆ.
Advertisement
Advertisement
ತುಂಬು ಗರ್ಭಿಣಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು, ಬಳಿಕ 4 ದಿನ ಮನೆಯಲ್ಲೇ ಇದ್ದಳು. ಉಸಿರಾಟದ ಸಮಸ್ಯೆ ತೀವ್ರಗೊಂಡಾಗ ಕುಟುಂಬಸ್ಥರು ದೊಡ್ಡಬಳ್ಳಾಪುರದ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನಲೆ ಅಲ್ಲಿನ ವೈದ್ಯರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕಳುಹಿಸಿದ್ದರು. ಬಳಿಕ ಬೌರಿಂಗ್ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನ ತೆಗೆದಿದ್ದಾರೆ. ಮಗು ತೆಗೆದು 3 ದಿನಗಳ ನಂತರ ತಾಯಿ ಮೃತಪಟ್ಟಿದ್ದಾಳೆ.