ಬೆಂಗಳೂರು: ಕೊರೊನಾ ನಡುವೆ ರಾಜ್ಯದಲ್ಲಿ ಶಾಲಾ ಕಾಲೇಜು ಓಪನ್ ವಿಚಾರದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದ ಎಲ್ಲಾ ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಇದು ಸ್ವಾಗತಾರ್ಹ ಎಂದು ಬೆಂಗಳೂರು ಹೊರವಲಯ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಪಬ್ಲಿಕ್ ಟಿವಿ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಾಲಾ, ಕಾಲೇಜುಗಳ ಆರಂಭ – ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಸುರೇಶ್ ಕುಮಾರ್
ಮಹಾಮಾರಿ ಕೊರೊನಾದಿಂದ ಜನಸಾಮಾನ್ಯರು ಸೇರಿದಂತೆ ನಮ್ಮಲ್ಲಿ ರೈಲ್ವೇ ಮಂತ್ರಿ, ಒಬ್ಬರು ಶಾಸಕರು ಇತ್ತೀಚೆಗೆ ತೀರಿಕೊಂಡಿದ್ದಾರೆ. ನನ್ನ ಅಭಿಪ್ರಾಯದಂತೆ ಈ ಮಹಾಮಾರಿ ಕೊರೊನಾಗೆ ಲಸಿಕೆ ಬರುವವರೆಗೂ ಶಾಲೆಗಳನ್ನ ತೆರೆಯದೆ ಇರುವುದೇ ಒಳ್ಳೆಯದು ಎಂದಿದ್ದಾರೆ.
ಇತ್ತ ಈಗಾಗಲೇ ಶಿಕ್ಷಕರು ಮನೆಮನೆಗೆ ಹೋಗಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅದನ್ನು ಇನ್ನೂ ಎರಡು ತಿಂಗಳು ಮುಂದುವರಿಸುವುದು ಒಳ್ಳೆಯದು. ಕೊರೊನಾಗೆ ಲಸಿಕೆ ಕಂಡು ಹಿಡುಯುವುದು ಒಳ್ಳೆಯದು. ಶಾಲಾ ಮಕ್ಕಳಿಗೆ ಒಬ್ಬರಿಗೆ ಬಂದರೆ ಇಡೀ ಶಾಲೆ ನಾಶ ಆಗಬಿಡುತ್ತೆ. ಈ ಕೊರೊನಾ ಒಂದು ದಾರಿದ್ರ್ಯ ಕಾಯಿಲೆಯಾಗಿದೆ ಎಂದು ಶ್ರೀನಿವಾಸಮೂರ್ತಿ ಹೇಳಿದರು.
ಸಚಿವರ ಅಭಿಪ್ರಾಯ ಜೊತೆಯಲ್ಲಿ ನಮ್ಮ ತಾಲೂಕಿನ ಶಿಕ್ಷಕರು ಮತ್ತು ಪೋಷಕರ ಜೊತೆ ಮಾತನಾಡುತ್ತೀನಿ. ಶಾಲೆಗಳು ಆರಂಭ ಮಾಡಲೇಬೇಕಾದರೆ ಬೆಳಗ್ಗೆ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಾಹ್ನದ ನಂತರ 6, 7ನೇ ವಿದ್ಯಾರ್ಥಿಗಳಿಗೆ ತರಗತಿ ಮಾಡಲಿ. ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸ್ ಮಾಡಿ ತರಗತಿ ಪ್ರಾರಂಭ ಮಾಡಲಿ. ಆದರೂ ಇದು ಕಷ್ಟವಾಗುತ್ತದೆ. ಹೀಗಾಗಿ ಕೊರೊನಾಗೆ ಲಸಿಕೆ ಬರುವವರೆಗೂ ಶಾಲೆ ತೆರೆಯುವುದು ಬೇಡ ಎಂಬುದು ನನ್ನ ಅಭಿಪ್ರಾಯ ಎಂದರು.