ನವದೆಹಲಿ: ಕೊರೊನಾ ಎಂಬ ಚೀನಿ ವೈರಸ್ ಗೆ ಇದೀಗ ವಾರಿಯರ್ಸ್ ಗಳು ಕೂಡ ಬಲಿಯಾಗುತ್ತಿದ್ದಾರೆ. ಹೀಗೆ ಬಲಿಯಾದ ವೈದ್ಯರೊಬ್ಬರ ಕುಟುಂಬಕ್ಕೆ ದೆಹಲಿ ಸರ್ಕಾರ 1 ಕೋಟಿ ಪರಿಹಾರ ಘೋಷಿಸಿದೆ.
ಈ ವಾರದ ಆರಂಭದಲ್ಲಿ ಕೋವಿಡ್ 19ಗೆ ಬಲಿಯಾದ ವೈದ್ಯರ ಕುಟುಂಬಕ್ಕೆ ಈ ಪರಿಹಾರ ಘೋಷಿಸಿರುವುದಾಗಿ ಕೊರೊನಾ ವೈರಸ್ ನಿಂದ ಗುಣಮುಖರಾಗಿರುವ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.
Advertisement
Dr Javed Ali working as a doctor with Delhi Govt NRHM, had succumbed to Covid.
Hon CM @ArvindKejriwal has announced that he will be given Corona Warrior status. Delhi govt will gives 1 cr compensation to the family.
— Satyendar Jain (@SatyendarJain) July 22, 2020
Advertisement
ಕೋವಿಡ್ 19 ರೋಗಿಗಳನ್ನು ನೋಡಿಕೊಳ್ಳುತ್ತಿದ್ದ ಹಾಗೂ ದೆಹಲಿ ಸರ್ಕಾರದ ಒಪ್ಪಂದಲ್ಲಿದ್ದ ವೈದ್ಯರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಲು ನಿರ್ಧರಿಸುವುದಾಗಿ ಸತ್ಯೇಂದರ್ ಹೇಳಿದ್ದಾರೆ. ಇದನ್ನೂ ಓದಿ: ಸೋಂಕಿತರ ಸೇವೆ ಮಾಡಿದ ವೈದ್ಯ ಕೊರೊನಾಗೆ ಬಲಿ- ಸರ್ಕಾರದಿಂದ ಸಿಗಲಿಲ್ಲ ನೆರವು
Advertisement
Advertisement
ಸೋಮವಾರ ಡಾ. ಜಾವೇದ್ ಅಲಿ ಅವರು ನಿಧನರಾದರು. ಅವರು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಡಾ. ಅಲಿ ಅವರು ಕೆಲವು ವರ್ಷಗಳ ಹಿಂದೆ ದೆಹಲಿ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ಗೆ ಸೇರಿದ್ದರು. ಇವರು ಮಾರ್ಚ್ನಿಂದ ಕ್ವಾರಂಟೈನ್ ಕೇಂದ್ರ, ಕೋವಿಡ್ 19 ಆರೈಕೆ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೊರೊನಾಗೆ ಬಲಿಯಾದರು.
ಪತಿ ರೋಗಿಗಳ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಮಾರ್ಚ್ ನಿಂದ ಒಂದು ರಜೆ ಪಡೆದಿರಲಿಲ್ಲ. ರಂಜಾನ್ ಹಬ್ಬದ ದಿನವೂ ಆಸ್ಪತ್ರೆಯಲ್ಲಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ 10 ದಿನ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಕೊನೆಯ ಬಾರಿ ನನಗೆ ಮತ್ತು ನನ್ನ ಇಬ್ಬರು ಮಕ್ಕಳಿಗೂ ಅವರ ಮುಖ ನೋಡಲು ಸಹ ಅವಕಾಶ ನೀಡಲಿಲ್ಲ ಎಂದು ಹೇಳುತ್ತಾ ಜಾವೇದ್ ಪತ್ನಿ ಹೀನಾ ಕಣ್ಣೀರು ಹಾಕಿದ್ದರು.