ಮಡಿಕೇರಿ: ಕೊರೊನಾ ಲಾಕ್ಡೌನ್ ನಿಂದ ತಿಂಗಳುಗಟ್ಟಲೆ ಮನೆಯಲ್ಲಿದ್ದ ಜನ ಇದೀಗ ಅನ್ಲಾಕ್ ಆಗುತ್ತಿದ್ದಂತೆ ಹೊರಗೆ ಸುತ್ತಾಡಲು ಆರಂಭಿಸಿದ್ದಾರೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದು, ಬೆಳಗ್ಗೆಯಿಂದಲೂ ಕರ್ನಾಟಕ ಕಾಶ್ಮೀರ ಕೊಡಗು ಜಿಲ್ಲೆಗೆ ಯುವ ಸಮೂಹ ಹರಿದು ಬರುತ್ತಿದೆ.
Advertisement
ಲಾಕ್ಡೌನ್ ನಲ್ಲಿ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಮಂದಿ, ಅನ್ಲಾಕ್ ಬಳಿಕ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ರಾಜ್ಯದ ಬೇರೆ ಕಡೆಗಳಲ್ಲಿ ಲಾಕ್ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೊಡಗಿಗೆ ದಾಂಗುಡಿ ಇಡುತ್ತಿದ್ದಾರೆ. ಆದರೆ ಕೊಡಗಿನಲ್ಲಿ ಜುಲೈ 5ರ ವರೆಗೆ ಲಾಕ್ಡೌನ್ ಮುಂದುವರಿಸಲಾಗಿದೆ. ಇದಾವುದನ್ನೂ ಲೆಕ್ಕಿಸದ ಜನ, ಬೆಂಗಳೂರು, ಕೋಲಾರ ಕಡೆಯಿಂದ ಆಗಮಿಸಿ ಕೊಡಗಿನಲ್ಲಿ ವಾಹನದಲ್ಲಿ ಸುತ್ತಾಡುತ್ತಿದ್ದಾರೆ.
Advertisement
Advertisement
ಕೊಡಗಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರದಿರುವುದರಿಂದ ಜುಲೈ 5ರ ವರೆಗೂ ಲಾಕ್ಡೌನ್ ಮುಂದುವರಿದಿದೆ. ಆದರೆ ಯುವ ಸಮೂಹ ಎಂದಿನಂತೆ ಕೊಡಗಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ರಸ್ತೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿರುವ ದೃಶ್ಯಗಳು ಕಂಡುಬಂದವು.
Advertisement
ಈ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಓಡಾಡುತ್ತಿರುವ ವಾಹನಗಳ ತಪಾಸಣೆಗೆ ಮಡಿಕೇರಿ ನಗರದ ಪೊಲೀಸರು ಫೀಲ್ಡಿಗಿಳಿದಿದ್ದು, ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಜನರು ಕೊಡಗಿಗೆ ಪ್ರವಾಸಕ್ಕೆ ಬಂದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮಡಿಕೇರಿ ನಗರ ಸಿಪಿಐ ವೆಂಕಟೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ವೇಳೆಯಲ್ಲಿ ಪ್ರವಾಸಕ್ಕೆ ಬಂದಿರುವ ವಾಹನಗಳಿಗೆ ದಂಡ ಹಾಕಿದ್ದಾರೆ. ಬೆಳಗ್ಗೆಯಿಂದ ಇದುವರೆಗೆ 20 ಸಾವಿರಕ್ಕೂ ಹೆಚ್ಚು ದಂಡ ಸಂಗ್ರಹಣೆ ಮಾಡಿದ್ದಾರೆ.