ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರದಿಂದಲೇ ಮುಂಗಾರು ಮಳೆ ಚುರುಕಾಗಿದ್ದು, ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆ ಈ ಕುರಿತು ಜನರಿಗೆ ಎಚ್ಚರಿಕೆಯನ್ನೂ ನೀಡಿದೆ. ಸೋಮವಾರ (ಇಂದು) ಮತ್ತು ಮಂಗಳವಾರ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಹವಾಮಾನ ಇಲಾಖೆಯ ಸೂಚನೆಯ ಪ್ರಕಾರ ಜಿಲ್ಲೆಯಲ್ಲಿ 64.5 ರಿಂದ 115.5 ಮಿ.ಮೀ ಗಳವರೆಗೆ ಮಳೆ ಆಗಲಿದೆ. ದಿನಾಂಕ 4 ರಿಂದ 7 ರ ಬೆಳಗ್ಗೆವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, 104.5 ರಿಂದ 215.5 ಮಿ.ಮೀ ಮಳೆಯಾಗುವ ಸಂಭವವಿದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
Advertisement
ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೂ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ನಲುಗಿ ಹೋಗಿದ ಕೊಡಗಿನಲ್ಲಿ ಇದೀಗ ಆಶ್ಲೇಷ ಮಳೆ ಬರುತ್ತಿರುವುದರಿಂದ ನದಿ ಪಾತ್ರದ ಜನರು ಸೇರಿದಂತೆ ಬೆಟ್ಟ ಪ್ರದೇಶಗಳಲ್ಲಿ ವಾಸ ಇರುವ ಜನರು ಚಿಂತೆಯಲ್ಲಿದ್ದಾರೆ. ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ ತಾಲೂಕಿನ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಮೂರ್ನಾಡ್ ಸೇರಿದಂತೆ ದಕ್ಷಿಣ ಕೊಡಗಿನಲ್ಲೂ ಮಳೆಯ ಅರ್ಭಟ ಜೋರಾಗಿದ್ದು, ನದಿ ತೋಡುಗಳು ಎಲ್ಲಾವು ತುಂಬಿ ಹರಿಯುತ್ತಿದೆ.
Advertisement
Advertisement
ಈಗಾಗಲೇ ಜಿಲ್ಲಾಡಳಿತ ಮಳೆಗಾಲ ಎದುರಿಸಲು ಸಕಾಲ ರೀತಿಯಲ್ಲಿ ಸಿದ್ಧತೆಗಳು ನಡೆಸಿದೆ. ಜಿಲ್ಲೆಯಲ್ಲಿ ಈಗಾಗಲೇ ಎನ್.ಡಿ.ಆರ್.ಎಫ್ ಟೀಂ ಜಿಲ್ಲೆಯಲ್ಲಿ ಬೀಡುಬೀಟ್ಟಿದೆ. ಒಟ್ನಲ್ಲಿ ಕಳೆದ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೊಡಗಿನ ಜನರು ಅತಂಕ ಪಡುವಂತೆ ಅಗಿದೆ.
Advertisement