DistrictsKarnatakaLatestMain PostMandya

ಕೊಕ್ಕರೆ ಬೆಳ್ಳೂರಿನಲ್ಲಿ 6 ಹೆಜ್ಜಾರ್ಲೆ ಸಾವು – ರಂಗನತಿಟ್ಟಿನಲ್ಲಿ ಹಕ್ಕಿ ಜ್ವರದ ಭೀತಿ

Advertisements

ಮಂಡ್ಯ: ದೇಶದ ನಾನಾ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಇದೀಗ ಸಕ್ಕರೆ ನಾಡಿನ ಪ್ರಸಿದ್ಧ ಪಕ್ಷಿಧಾಮದಲ್ಲಿ ಕೊಕ್ಕರೆಗಳು ನಿಗೂಢ ಸಾನ್ನಪ್ಪಿದೆ. ಅಲ್ಲದೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ.

ರಾಜಸ್ಥಾನ, ಮಧ್ಯಪ್ರದೇಶದ, ಹಿಮಾಚಲ ಪ್ರದೇಶದ, ಗುಜರಾತ್ ಕೇರಳ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ನಡುವೆ ಮಂಡ್ಯ ಜಿಲ್ಲೆಯ ಪ್ರಸಿದ್ಧ ಪಕ್ಷಿಧಾಮದಲ್ಲಿ ಹೆಜ್ಜಾರ್ಲೆ ಪ್ರಬೇಧದ ಕೊಕ್ಕರೆಗಳು ಸಾವನ್ನಪ್ಪಿದ್ದು, ಜನರ ಆತಂಕಕ್ಕೆ ಕಾರಣವಾಗಿದ್ದರೆ, ಮತ್ತೊಂದು ಪ್ರಸಿದ್ಧ ಪಕ್ಷಿಧಾಮದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ಕೊಕ್ಕರೆ ಬೆಳ್ಳೂರಿನಲ್ಲಿ ಕಳೆದ 20 ದಿನಗಳಿಂದ 6 ಹೆಜ್ಜಾರ್ಲೆ ಸಾವನ್ನಪ್ಪಿದೆ. ಅಂದಹಾಗೆ ವಿಶಿಷ್ಟ ಪಕ್ಷಧಾಮವಾಗಿದ್ದು, ಮಾನವರ ನಡುವೇಯೇ ಬದುಕುವ ಹಕ್ಕಿಗಳು ಜೀವಿಸುತ್ತಿರುವ ಸುಂದರ ಪ್ರಾಕೃತಿಕ ಸ್ಥಳ. ಸಾಮಾನ್ಯವಾಗಿ ಚಳಿಗಾಲದಲ್ಲಿ ದೇಶ ಹಾಗೂ ವಿದೇಶಗಳಿಂದ ವಿವಿಧ ಪ್ರಭೇದದ ಪಕ್ಷಿಗಳು ಸಂತಾನೋತ್ಪತಿಗಾಗಿ ಬರುತ್ತವೆ. ಅದ್ರಲ್ಲಿ ಹೆಜ್ಜಾರ್ಲೆ ಹಾಗೂ ಪೇಂಟೆಡ್ ಸ್ಟ್ರೋಕ್ ಹೆಚ್ಚು ಬರುತ್ತವೆ. ಇಲ್ಲಿನ ನಿವಾಸಿಗಳೂ ಕೂಡ ಪಕ್ಷಿಗಳ ಬಗ್ಗೆ ಬಹಳ ಕಾಳಜಿಹೊಂದಿದ್ದು, ಅವುಗಳ ರಕ್ಷಣೆ ಮಾಡುತ್ತಿದ್ದಾರೆ. ಈ ನಡವೆ ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹೊತ್ತಲ್ಲೇ ಕೊಕ್ಕರೆಗಳು ಸಾವನ್ನಪ್ಪುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೇತ್ತುಕೊಳ್ಳಬೇಕಿದೆ.

ಸಾವನ್ನಪ್ಪಿರುವ 6 ಹೆಜ್ಜಾರ್ಲೆಗಳ ಮರಣೋತ್ತರ ಪರೀಕ್ಷೆ ನಡೆಸಿರುವ ಕೊಕ್ಕರೆ ಬೆಳ್ಳೂರು ಪಶುವೈದ್ಯರು, ಸ್ಯಾಂಪಲ್ ಗಳನ್ನು ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ 5 ಸ್ಯಾಂಪನ್ ರಿಪೋರ್ಟ್ ವೈದ್ಯರ ಕೈಸೇರಿದ್ದು, ಜಂತು ಹುಳು ಸಮಸ್ಯೆಯಿಂದ ಪಕ್ಷಿಗಳು ಸಾವನ್ನಪಿರುವುದು ದೃಢಪಟ್ಟಿದೆ. ಮಂಗಳವಾರ ಮೃತಪಟ್ಟಿರುವ ಪಕ್ಷಿಯ ಸ್ಯಾಂಪಲ್ ರಿಪೋರ್ಟ್ ಬರಬೇಕಿದ್ದು, ಹಕ್ಕಿ ಜ್ವರದ ಚಿಹ್ನೆಗಳು ಇಲ್ಲಿದಿರುವುದರಿಂದ ಆತಂಕಪಡುವ ಅವಶ್ಯಕತೆ ಇಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

ಇತ್ತ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲೂ ಸಹ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಕೇರಳದಲ್ಲಿ ಹೀಗಾಗಲೇ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಇದು ಈ ಭಾಗಕ್ಕೂ ಸಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಇಂದು ಡಿಸಿಎಫ್ ಪ್ರಶಾಂತ್‍ಕುಮಾರ್ ಪಕ್ಷಿ ಧಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ರಂಗನತಿಟ್ಟು ಪಕ್ಷಿಧಾಮದ್ಯಾಂತ ಹೈಪರ್ ಕ್ಲೋರೈಡ್‍ನ್ನು ಸಹ ಸಿಂಪಡಣೆ ಮಾಡಲಾಗಿದೆ. ಮುಂದುವರಿದು ಪ್ರತಿ ವಾರ ಪಕ್ಷಿಗಳ ಸ್ಯಾಂಪಲ್‍ನ್ನು ಸಂಗ್ರಹ ಮಾಡಿ ಲ್ಯಾಬ್‍ಗೆ ಸಹ ಕಳಿಸಿಕೊಡಲಾಗುವುದು ಎಂದು ಡಿಸಿಎಫ್ ಪ್ರಶಾಂತ್‍ಕುಮಾರ್ ತಿಳಿಸಿದ್ದಾರೆ.

ಸದ್ಯ ದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಇದೆ ಸಮಯದಲ್ಲೇ ಕೊಕ್ಕರೆ ಬೆಳ್ಳೂರಿನಲ್ಲಿ ಕೊಕ್ಕರೆಗಳು ಸಾವನ್ನಪ್ಪಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಇನ್ನೊಂಡೆ ರಂಗನತಿಟ್ಟು ಪಕ್ಷಿಧಾಮದ ಅಧಿಕಾರಿಗಳಿಗೆ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳಿಗೂ ಸಹ ಮುಂದಾಗಿದ್ದಾರೆ.

Leave a Reply

Your email address will not be published.

Back to top button