ಯಾದಗಿರಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದಿರೋದು ಕುತೂಹಲಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಕಲಬುರಗಿಯಲ್ಲಿ ನಿಂಬೆಹಣ್ಣು ಕೊಟ್ಟ ಸಿದ್ದರಾಮಯ್ಯ
Advertisement
ಯಾದಗಿರಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಬಳಿಕ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಅಭಿವೃದ್ಧಿಗಾಗಿ ಈ ವರ್ಷ ಒಂದು ರೂಪಾಯಿ ಖರ್ಚು ಮಾಡಿಲ್ಲ. ಮುಂದಿನ ವರ್ಷವೂ ಸಹ ಖರ್ಚು ಮಾಡಲ್ಲ. ಕಳೆದ ವರ್ಷ ಬೇರೆ ಸರ್ಕಾರ ಅಭಿವೃದ್ಧಿಗಾಗಿ ನೀಡಿದ ಹಣವನ್ನು ಸಿಎಂ ಯಡಿಯೂರಪ್ಪ ವಾಪಸ್ಸು ಪಡೆದಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರೇವಣ್ಣನಿಗೆ ನೀವು ನಿಂಬೆಹಣ್ಣು ಕೊಟ್ಟು ಸಿಎಂ ಆದ್ರಾ? ಬಿಎಸ್ವೈ ಕಾಲೆಳೆದ ರಮೇಶ್ ಕುಮಾರ್
Advertisement
Advertisement
ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ಎಲ್ಲ ಮನೆಗಳಿಗೆ ಸಮಾನಾದ ಪರಿಹಾರ ನೀಡಬೇಕು. ಬೆಂಗಳೂರಿನಲ್ಲಿ 25 ಸಾವಿರ, ಯಾದಗಿರಿಗೆ 10 ಸಾವಿರ ಅಂತ ಧೋರಣೆ ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಸರ್ಕಾರದ ಹತ್ತಿರ ಸಂಬಳ ನೀಡದಕ್ಕೂ ಹಣವಿಲ್ಲ. ಈ ಬಾರಿ ಬಜೆಟ್ ನಲ್ಲಿ ಘೋಷಣೆ ಮಾಡಿರುವುದಕ್ಕಿಂತ ಇನ್ನೂ ಹೆಚ್ಚಿನ ಸಾಲ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಯೋ.. ನಂಗೊಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೇದಾಗ್ಲಿ- ರೇವಣ್ಣರ ಕಾಲೆಳೆದ ಸಿದ್ದರಾಮಯ್ಯ
Advertisement
ಪ್ರವಾಹ ಪೀಡಿತರ ಗೋಳು ಕೇಳೋದು ಬಿಟ್ಟು ಭರ್ಜರಿ ರೋಡ್ ಶೋ ನಡೆಸಿದ ಸಿದ್ದರಾಮಯ್ಯ https://t.co/QsaAN40gUa#Siddaramaiah #KannadaNews #Flood #Yadagiri #Karnataka
— PublicTV (@publictvnews) October 26, 2020