ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಶುರುವಾಗುವುದಕ್ಕೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರೇ ಕಾರಣವಾಗುವ ಸಾಧ್ಯತೆಗಳು ದಟ್ಟವಾಗಿವೆ.
Advertisement
ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈಗಾಗಲೇ ಅಲ್ಲಿನ ಸರ್ಕಾರ ಮೂರನೇ ಅಲೆಯ ಅಬ್ಬರ ಅಂತಾ ಎಚ್ಚರಿಕೆವಹಿಸುವ ಕ್ರಮಗಳನ್ನು ಜಾರಿಗೆ ತರುತ್ತಿದ್ದಾರೆ.
Advertisement
Advertisement
ಆದರೆ ಅಲ್ಲಿಂದ ನಮ್ಮ ರಾಜ್ಯಕ್ಕೆ ಬರುತ್ತಿರುವ ಸಾವಿರಾರು ಜನ ರಾಜ್ಯಕ್ಕೆ ಮೂರನೇ ಅಲೆಯನ್ನು ಬಳುವಳಿಯಾಗಿ ತರುವ ಸಾಧ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟಿಂಗ್‍ಗೆ ಒಳಪಡಿಸುವಂತೆ ಸೂಚನೆ ನೀಡಿದೆ. ಜೊತೆಗೆ ಈ ರಾಜ್ಯಗಳಿಂದ ಬರುವವರು 72 ಗಂಟೆಗಳ ಅವಧಿಯಲ್ಲಿ ಮಾಡಿಸಿರುವ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದೆ. ಆದರೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರದಿಂದ ಪ್ರಯಾಣಿಕರು ಬರುತ್ತಿದ್ದಾರೆ.
Advertisement
ಇದರಲ್ಲಿ ಶೇ.10 ರಷ್ಟು ಜನ ಮಾತ್ರ ಕೋವಿಡ್ ಟೆಸ್ಟಿಂಗ್‍ಗೆ ಒಳಪಡುತ್ತಿದ್ದರೆ, ಉಳಿದ ಶೇ90 ರಷ್ಟು ಜನ ನೆಗೆಟಿವ್ ರಿಪೋರ್ಟ್ ಇಲ್ಲದೇ ಇದ್ದರೂ ಟೆಸ್ಟಿಂಗ್ ಮಾಡಿಸಿಕೊಳ್ಳದೇ ಬಿಬಿಎಂಪಿ ಸಿಬ್ಬಂದಿ ಜೊತೆ ವಾಗ್ವಾದ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದಾರೆ. ಈ ಕುರಿತಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಈ ಪ್ರಯಾಣಿಕರು ರಾಜ್ಯಕ್ಕೆ ಮಹಾ ಗಂಡಾಂತರವನ್ನು ತಂದು ಮೂರನೇ ಅಲೆಯ ಅಬ್ಬರಕ್ಕೆ ಕಾರಣವಾಗಲಿದ್ದಾರೆ. ಇದನ್ನೂ ಓದಿ:1,875 ಪಾಸಿಟಿವ್ ಕೇಸ್ – ಬೆಂಗಳೂರಿಗಿಂತ ದಕ್ಷಿಣ ಕನ್ನಡದಲ್ಲೇ ಜಾಸ್ತಿ