ತಿರುವನಂತಪುರ: ಕೇರಳದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೆ ತಂದಿದ್ದ ಲಾಕ್ಡೌನನ್ನು 1 ವಾರ ಕಾಲ ವಿಸ್ತರಣೆ ಮಾಡಲಾಗಿದೆ. ಪ್ರಸ್ತುತ ಕೇರಳದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಮೇ 8ರಿಂದ 16ರವರೆಗೆ ಲಾಕ್ಡೌನ್ ಘೋಷಿಸಿತ್ತು. ಆದರೆ ಲಾಕ್ಡೌನ್ ಇದ್ದರೂ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನೆಲೆಯಲ್ಲಿ ಮತ್ತೆ 1 ವಾರ ಕಾಲ ವಿಸ್ತರಣೆ ಮಾಡಿದ್ದು, ಮೇ 23ರವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
Kerala Essential Articles Control Act, 1986 is being invoked to control prices of articles required for treating #COVID19.
PPE Kits ₹273
N95 Mask ₹22
Triple Layer Mask ₹3.90
Face Shield ₹21
Disposable Apron ₹12
Surgical Gown ₹65
Inspection Gloves ₹5.75
— CMO Kerala (@CMOKerala) May 14, 2021
Advertisement
ಟ್ರಿಪಲ್ ಲಾಕ್ಡೌನ್: ತಿರುವನಂತಪುರ, ತ್ರಿಶೂರ್, ಎರ್ನಾಕುಳಂ ಹಾಗೂ ಮಲಪ್ಪುರಂ ಜಿಲ್ಲೆಗಳನ್ನು ಟ್ರಿಪಲ್ ಲಾಕ್ಡೌನ್ ಮಾಡಲಾಗುವುದು. ಕೋವಿಡ್ ಹರಡುವಿಕೆ ತಡೆಯಲು ಮತ್ತಷ್ಟು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು. ಈ ನಾಲ್ಕು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಈ ಕ್ರಮ ಅನಿವಾರ್ಯ ಎಂದು ಸಿಎಂ ಹೇಳಿದರು
Advertisement
Lockdown is extended till 23 May.
Triple lockdown in Thiruvananthapuram, Ernakulam, Thrissur, Malappuram.
Free food kits in June too.
₹823.23Cr will be distributed as Welfare Pensions in May.
Financial assistance of ₹1,000 for all members of Welfare Boards.
— Pinarayi Vijayan (@vijayanpinarayi) May 14, 2021
Advertisement
ಎಷ್ಟು ಪ್ರಕರಣ?: ಇಂದು ಕೇರಳದಲ್ಲಿ 34,694 ಹೊಸ ಪ್ರಕರಣಗಳು ದಾಖಲಾಗಿದೆ. ರಾಜ್ಯದ ಒಟ್ಟಾರೆ ಟೆಸ್ಟ್ ಪಾಸಿಟಿವಿಟಿ ಪ್ರಮಾಣ ಶೇ.26.41ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1,31,375 ಸ್ಯಾಂಪಲ್ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಸದ್ಯ ಕೇರಳದಲ್ಲಿ ಒಟ್ಟು 844 ಹಾಟ್ಸ್ಪಾಟ್ಗಳಿವೆ.