ಬೆಂಗಳೂರು: ಕೊರೊನಾದಿಂದ ಬಹುತೇಕ ಎಲ್ಲಾ ಉದ್ಯಮಕ್ಕೂ ನಷ್ಟವಾಗಿದೆ. ಅದರಲ್ಲಿ ಕೇಬಲ್ ಉದ್ಯಮವೂ ಒಂದಾಗಿದೆ. ಕೋವಿಡ್ ಸಮಯದಲ್ಲಿ ಕೇಬಲ್ ಆಪರೇಟರ್ ಗಳು ತಮ್ಮ ಜೀವವನ್ನು ಪಣಕಿಟ್ಟು ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಲಭ್ಯವಾಗಿರೋ ಮಾಹಿತಿ ಪ್ರಕಾರ ರಾಜ್ಯಾದ್ಯಂತ 45ಕ್ಕೂ ಹೆಚ್ಚು ಕೇಬಲ್ ಆಪರೇಟರ್ ಗಳು ಕೊರೊನಾ ಮಹಾಮಾರಿಯಿಂದ ಮರಣ ಹೊಂದಿದ್ದಾರೆ.
Advertisement
ಕೋವಿಡ್ ನಿಂದ ಮೃತಪಟ್ಟ ಕೇಬಲ್ ಆಪರೇಟರ್ ಕುಟುಂಬಗಳಿಗೆ ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ನೆರವಾಗುತ್ತಿದೆ. ಇಂದು ಕೋವಿಡ್ ನಿಂದ ಮರಣ ಹೊಂದಿದ ಕೇಬಲ್ ಆಪರೇಟರ್ಸ್ ಕುಟುಂಬಗಳಿಗೆ ತಲಾ 25,000 ರೂಪಾಯ ಚೆಕ್ ನೀಡಿ,ಧನ ಸಹಾಯ ನೀಡಲಾಯಿತು. ಇದನ್ನೂ ಓದಿ: ಮಾಧ್ಯಮ, ಕೇಬಲ್ ಸಿಬ್ಬಂದಿಗೆ ವ್ಯಾಕ್ಸಿನ್ ಅಭಿಯಾನಕ್ಕೆ ಡಿಸಿಎಂ ಚಾಲನೆ
Advertisement
Advertisement
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು, ಕೇಬಲ್ ಆಪರೇಟರ್ ಗಳು ಸಾಕಷ್ಟು ಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಕೇಬಲ್ ಉದ್ಯಮಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಮನವಿ ಸಲ್ಲಿಸಿದ್ದೇವೆ. ಕೇಬಲ್ ಆಪರೇಟರ್ ಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಆಗಿ ಗುರ್ತಿಸಲು ಸಹಾಯ ಮಾಡಿದ ಪತ್ರಕರ್ತ ಸಂಘಕ್ಕೆ ಧನ್ಯವಾದ ಸಲ್ಲಿಸಿದ್ರು. ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಂದ ತಗಡೂರು ಸುದ್ದಿಮನೆಯಲ್ಲಿ ಕೊಂಡಿಯಾಗಿ ಕೇಬಲ್ ಆಪರೇಟರ್ ಗಳು ಕೆಲಸ ಮಾಡುತ್ತಾರೆ. ಮುಖ್ಯಮಂತ್ರಿಗಳು ಕೇಬಲ್ ಟಿವಿ ಆಪರೇಟರ್ ಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಆಗಿ ಘೋಷಣೆ ಮಾಡಿದ್ದಾರೆ. ಎಲ್ಲಾ ಕೇಬಲ್ ಟಿವಿ ಆಪರೇಟರ್ ಗಳು ವ್ಯಾಕ್ಸಿನ್ ಪಡೆದುಕೊಳ್ಳಲಿ ಎಂದ್ರು.