ಬೆಂಗಳೂರು: ಕೆ. ಮಂಜು ಅಂದರೆ ಯಾರೂ ಅಂತಾನೆ ನನಗೆ ಗೊತ್ತಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸುಧಾಕರ್, ಎಲ್ಲವನ್ನೂ ನಾನೇ ಮಾಡಲು ಸಾಧ್ಯವಿಲ್ಲ. ಸರ್ಕಾರದ ಮಾರ್ಗಸೂಚಿ ಸರಿಯಾಗಿ ಪಾಲನೆಯಾಗುತ್ತಿಲ್ಲ. ಬಸ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದಾರೆ ಎಂದು ಹೇಳಿದರು.
Advertisement
ಈ ವೇಳೆ ಸುಧಾಕರ್ ಅವರಿಂದ ಆರೋಗ್ಯ ಖಾತೆಯನ್ನು ಬದಲಾಯಿಸಿ ಎಂಬ ನಿರ್ಮಾಪಕ ಕೆ.ಮಂಜು ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಕೆ. ಮಂಜು ಅಂದ್ರೆ ಯಾರೂ ಅಂತಾನೆ ನನಗೆ ಗೊತ್ತಿಲ್ಲ. ನಾನು ಯಾರ ಟೀಕೆಗಳಿಗೂ ತಲೆ ಕೆಡಿಸಿಕೊಳ್ಳೋದಿಲ್ಲ. ಆರೋಗ್ಯ ಸಚಿವನಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ನಮಗೆ ಜನರ ರಕ್ಷಣೆ ಬಹಳ ಮುಖ್ಯ. ಟೀಕೆಗಳಿಗೆ ತಲೆಕೆಡಿಕೊಳ್ಳುವುದಿಲ್ಲ ಎಂದರು.
Advertisement
it wasn’t my decision alone. Hope you understand? I have limitations.. still I regret if temporary rollback decision has let you down!
— Dr Sudhakar K (@mla_sudhakar) April 4, 2021
Advertisement
ಸಿಎಂ ಚಿತ್ರರಂಗದ ಮನವಿಗೆ ಸ್ಪಂದಿಸಿದ್ದಾರೆ. ಇದು ತಪ್ಪು ಅಂತಾನೂ ಹೇಳೋದಿಲ್ಲ. ಆದರೆ, ಈಗ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಜಿಮ್ ಮಾಲೀಕರು, ಶಿಕ್ಷಣ ಸಂಸ್ಥೆಗಳಿಂದ ಒತ್ತಡ ಬರುತ್ತಿದೆ. ನಮಗೆ ಜನರ ಜೀವ, ಜೀವನೋಪಾಯ ಎರಡೂ ಮುಖ್ಯ ಎಂದು ತಿಳಿಸಿದರು.
Advertisement
ಯಾರನ್ನೋ ಮೆಚ್ಚಿಸಲು ತೀರ್ಮಾನ ಬದಲಿಸಲು ಸಾಧ್ಯವಿಲ್ಲ. ನಮಗೆ ರಾಜ್ಯದ ಜನರ ಆರೋಗ್ಯ ಮುಖ್ಯ. ಕೆಲವರು ನನ್ನನ್ನ ಟೀಕೆ ಮಾಡುತ್ತಿದ್ದರೂ ಬೇಜಾರಿಲ್ಲ. ರಾಜ್ಯದ ಜನರ ಆರೋಗ್ಯ ಕಾಪಾಡೋದು ಮೊದಲ ಆದ್ಯತೆ. ಕೆಲವರಿಗೆ ರಿಯಾಯಿತಿ ಕೊಟ್ಟಿದ್ದಾರೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.
ಕಳೆದ 2 ತಿಂಗಳಿನಲ್ಲಿ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 6 ಪಟ್ಟು ಹೆಚ್ಚಾಗಿದೆ.
ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 50% ಪ್ರಕರಣಗಳು ಕೇವಲ 10 ಜಿಲ್ಲೆಗಳಲ್ಲಿದ್ದು ಬೆಂಗಳೂರು ನಗರ ಜಿಲ್ಲೆ ಈ ಪೈಕಿ ಒಂದಾಗಿದೆ.
ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 77% ಪ್ರಕರಣಗಳು 5 ರಾಜ್ಯಗಳಲ್ಲಿದ್ದು ಈ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ.
1/2 pic.twitter.com/SOLBD6vdG2
— Dr Sudhakar K (@mla_sudhakar) April 3, 2021
ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಕೊರೊನಾ ಸೋಂಕಿನ ಹೊಡೆತ ಹೆಚ್ಚಾಗಿದ್ದು ನಿನ್ನೆ ಒಂದೇ ದಿನ 50 ಸಾವಿರ ಪ್ರಕರಣ ದಾಖಲಾಗಿದೆ. 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ರೀತಿಯ ಪರಿಸ್ಥಿತಿ ರಾಜ್ಯದಲ್ಲಿ ಆಗದಂತೆ ನೋಡಿಕೊಳ್ಳಬೇಕಿದೆ. ಇಲ್ಲದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ. ಆರೋಗ್ಯ ಇಲಾಖೆ, ಕೋವಿಡ್ ತಾಂತ್ರಿಕ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಅದರಂತೆ ಕಠಿಣ ಕ್ರಮ ಅನಿವಾರ್ಯ ಎಂದು ಸರ್ಕಾರದ ಮಾರ್ಗಸೂಚಿಯನ್ನು ಸಮರ್ಥಿಸಿಕೊಂಡರು.
ಶಿಕ್ಷಣ ಸಂಸ್ಥೆಗಳು, ಚಿತ್ರರಂಗದ ಅಭಿಮಾನಿಗಳು ಹಾಗೂ ಜಿಮ್ ಮಾಲೀಕರಿಂದ ಒತ್ತಡ ಬಂದಿದೆ. ಹಾಗಂತ ಎಲ್ಲರಿಗೂ ರಿಯಾಯಿತಿ ಕೊಡಲು ಸಾಧ್ಯವಿಲ್ಲ. ಈಗಿರುವ 8 ಲಕ್ಷ ಡೋಸ್ ಇನ್ನು ಮೂರು ದಿನಕ್ಕೆ ಮುಗಿಯುತ್ತದೆ. ಈಗಾಗಲೇ 25 ಲಕ್ಷ ಡೋಸ್ ಗೆ ಬೇಡಿಕೆ ಇಟ್ಟಿದ್ದೇನೆ. ಎರಡು ಕಂತುಗಳಲ್ಲಿ ಡೋಸ್ ಪೂರೈಸುವುದಾಗಿ ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ಎರಡು ದಿನಗಳಲ್ಲಿ ಮೊದಲ ಕಂತು ನಂತರ ಉಳಿದದ್ದು ಕಳುಹಿಸುವ ಭರವಸೆ ಸಿಕ್ಕಿದೆ ಎಂದರು.