ತಿರುವನಂತಪುರಂ: ಕೆಲಸ ಒತ್ತಡದಿಂದ ಮನನೊಂದ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿರುವ ಮ್ಯಾನೇಜರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೆ. ಸ್ವಪ್ನಾ(38) ಮೃತ ಮಹಿಳೆಯಾಗಿದ್ದಾಳೆ. ಸ್ವಪ್ನಾ ಕಣ್ಣೂರು ಜಿಲ್ಲೆಯ ಕುಥುಪರಂಬರದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯೊಂದರ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಒತ್ತಡದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
Advertisement
ನನಗೆ ಕೆಲಸದ ಒತ್ತಡ ತಡೆಯಲಾಗುತ್ತಿಲ್ಲ. ಆದ್ದರಿಂದ ಹೀಗೆ ಮಾಡಿಕೊಂಡಿದ್ದೇನೆ ಎಂದು ಸ್ವಪ್ನ ಮರಣ ಪತ್ರದಲ್ಲಿ ಬರೆದಿದ್ದಾರೆ. ಕೆನರಾ ಬ್ಯಾಂಕ್ನ ಥೊಕ್ಕಿಲಂಗಡಿ ಶಾಖೆಯಲ್ಲಿ ಸ್ವಪ್ನಾ ನೇಣು ಬಿಗಿದುಕೊಂಡಿದ್ದರು. ಈ ವಿಚಾರ ತಿಳಿದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿಪಿದ್ದಾರೆ.
Advertisement
Advertisement
ಸ್ವಪ್ನಾ ಅವರಿಗೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಈ ಶಾಖೆಗೆ ವರ್ಗಾವಣೆಯಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.