ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ಪ್ರಾರಂಭಗೊಂಡು ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟ ಕೂಡ ನಡೆಯುತ್ತಿದೆ. ಈ ನಡುವೆ ಈ ಆವೃತ್ತಿಯ ಮೊದಲ ಪಂದ್ಯವನ್ನು ಆಡಲು ಸಜ್ಜಾಗುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರಿಗೆ ವಿಶೇಷ ಸಂದೇಶವೊಂದು ಬಂದಿದೆ.
Advertisement
ಕೊಲ್ಕತ್ತಾ ಎದುರಿನ ಮೊದಲ ಪಂದ್ಯಕ್ಕಾಗಿ ಹೈದರಾಬಾದ್ ತಂಡ ಸಜ್ಜಾಗುತ್ತಿದ್ದಂತೆ, ಡೇವಿಡ್ ವಾರ್ನರ್ ಅವರಿಗೆ ಅವರ ಮಗಳು ಆಸ್ಟ್ರೇಲಿಯಾದಿಂದ ಹೈದರಾಬಾದ್ ತಂಡದ ಜೆರ್ಸಿ ಮತ್ತು ಗ್ಲೌಸ್ ಧರಿಸಿ ಆಲ್ದಿಬೆಸ್ಟ್ ಎಂದು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ.
Advertisement
View this post on Instagram
Advertisement
ಮಗಳು ತಂಡಕ್ಕಾಗಿ ಚಿಯರ್ ಅಪ್ ಮಾಡುತ್ತಿರುವ ಫೋಟೋ ನೋಡಿದ ವಾರ್ನರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮರು ಟ್ವೀಟ್ ಮಾಡಿ, ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ನಮ್ಮ ಮೊದಲ ಪಂದ್ಯಕ್ಕೆ ಸಜ್ಜಾಗಿರಿ. ನನ್ನ ಮೊದಲ ಬೆಂಬಲಿಗರು ಈಗಾಗಲೇ ನನಗೆ ಚಿಯರ್ ಆಪ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
Advertisement
ಈ ಟ್ವೀಟ್ ಬಳಿಕ ಹೈದರಾಬಾದ್ ಫ್ರಾಂಚೈಸ್ ಕೂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಾರ್ನರ್ ಬಳಗ ಪಂದ್ಯಕ್ಕೆ ಸಜ್ಜುಗೊಂಡಿದೆ ಎಂದು ಅಡಿಬರಹ ಹಾಕಿಕೊಂಡಿದೆ.
View this post on Instagram
ಕಳೆದ ಬಾರಿಯ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ನಲ್ಲಿ ನಿರ್ಗಮಿಸಿತ್ತು. ವಾರ್ನರ್ ನಾಯಕತ್ವದಲ್ಲಿ ಮೊದಲ ಬಾರಿಗೆ 2016 ರಲ್ಲಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿದೆ
13ನೇ ಆವೃತ್ತಿಯಲ್ಲಿ ವಾರ್ನರ್ 16 ಪಂದ್ಯಗಳಿಂದ 4 ಅರ್ಧಶತಕ ಸಹಿತ 548 ರನ್ ಬಾರಿಸಿದ್ದರು. ಒಟ್ಟು ಐಪಿಎಲ್ನಲ್ಲಿ 142 ಪಂದ್ಯಗಳಿಂದ 48 ಅರ್ಧಶತಕ ಸಹಿತ 5254 ರನ್ ಗಳಿಸಿದ್ದಾರೆ.
ಈ ಬಾರಿಯು ಎಸ್ಆರ್ಎಚ್ ತಂಡ ಬಲಿಷ್ಠವಾಗಿ ಗೋಚರಿಸುತ್ತಿದ್ದು, ವಿದೇಶಿ ಆಟಗಾರರಾದ ವಾರ್ನರ್, ಜಾನಿ ಬೈರೆಸ್ಟೋ, ಕೇನ್ ವೀಲಿಯಮ್ಸ್ ನ್, ರಶೀದ್ ಖಾನ್ ಮತ್ತು ಜೇಸನ್ ಹೋಲ್ಡರ್ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ದೇಶಿ ಆಟಗಾರರಾಗಿ ಕನ್ನಡಿಗ ಮನೀಷ್ ಪಾಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್ ಮತ್ತು ಖಲೀಲ್ ಅಹಮದ್ ಅವರನ್ನು ತಂಡ ಸರಿಯಾಗಿ ಬಳಸಿಕೊಳ್ಳಬೇಕಿದೆ.