ನವದೆಹಲಿ: ಭಾರತ ಕ್ರಿಕೆಟ್ ತಂಡದ ವಿಕೆಟ್ಕೀಪಿಂಗ್ ಜವಾಬ್ದಾರಿಗೆ ಕೆ.ಎಲ್.ರಾಹುಲ್ ಕೇವಲ ತಾತ್ಕಾಲಿಕ ಪರಿಹಾರವಷ್ಟೇ ಎಂದು ಟೀಂ ಇಂಡಿಯಾ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ವಿಕೆಟ್ಕೀಪರ್, ಬ್ಯಾಟ್ಸ್ಮನ್ ಖ್ಯಾತಿಯ ಪಾರ್ಥಿವ್ ಪಟೇಲ್ ಹೇಳಿದ್ದಾರೆ.
‘ಲಾಕ್ಡೌನ್ ಬಟ್ ನಾಟೌಟ್’ ಆನ್ಲೈನ್ ಸರಣಿ ಕಾರ್ಯಕ್ರಮದಲ್ಲಿ ವೇಳೆ ಪಾರ್ಥಿವ್, ಟೀಂ ಇಂಡಿಯಾ ಕೀಪಿಂಗ್ ಜವಾಬ್ದಾರಿ ನಿಭಾಯಿಸಲು ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದು ಅಭಿಮಾನಿಗಳ ಕೇಳಿದಾಗ ಈ ರೀತಿ ಉತ್ತರಿಸಿದ್ದಾರೆ.
Advertisement
Advertisement
“ಕೆ.ಎಲ್.ರಾಹುಲ್ ಸದ್ಯದ ಸಂದರ್ಭದಲ್ಲಿ ವಿಕೆಟ್ಕೀಪಿಂಗ್ ಕೆಲಸಕ್ಕೆ ಕೇವಲ ತಾತ್ಕಾಲಿಕ ಪರಿಹಾರವಷ್ಟೇ. ಈ ವಿಚಾರವನ್ನು ಮುಂದಿನ ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಬಹುದು. ವಿಶ್ವಕಪ್ ಟೂರ್ನಿನಲ್ಲಿ ಕೆ.ಎಲ್.ರಾಹುಲ್ ಭಾರತದ ಪರ ಕೀಪಿಂಗ್ ಜವಾಬ್ದಾರಿ ಅತ್ಯುತ್ತಮವಾಗಿ ನಿಭಾಯಿಸಬಲ್ಲರು. ಇದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಪಾರ್ಥಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ಇದೇ ವೇಳೆ ರಿಷಬ್ ಪಂತ್ ವಿಚಾರ ಪ್ರಸ್ತಾಪಿಸಿದ ಪಾರ್ಥಿವ್, “ದೀರ್ಘ ಅವಧಿಗೆ ಕೀಪಿಂಗ್ ಸೇವೆ ನೀಡುವ ಸಾಮರ್ಥ್ಯ ಪಂತ್ಗೆ ಇದೆ. ಅವರನ್ನು ಭೇಟಿಯಾದಾಗಲೆಲ್ಲ ಇದನ್ನೇ ಹೇಳಿದ್ದೇನೆ. ನಿನ್ನಲ್ಲಿರುವ ಪ್ರತಿಭೆಯಿಂದಲೇ ಜನರು ಮಾತನಾಡುತ್ತಿದ್ದಾರೆ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಮತ್ತೆ ಮತ್ತಮ ಫಾರ್ಮ್ ಗೆ ಮರಳಲು ದೇಶಿ ಟೂರ್ನಿಗಳಲ್ಲಿ ಆಡಬೇಕು. ಒಂದು ವೇಳೆ ನಿನ್ನ ಜಾಗದಲ್ಲಿ ನಾನಿದ್ದರೂ ಇದನ್ನೇ ಮಾಡುತ್ತಿದ್ದೆ ಎಂದು ತಿಳಿ ಹೇಳಿರುವೆ. ಪಂತ್ ಉತ್ತಮ ಫಾರ್ಮ್ ನೊಂದಿಗೆ ತಂಡಕ್ಕೆ ಮರಳುತ್ತಾರೆ ಎನ್ನುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಐಪಿಎಲ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಖರೀದಿಸುವಂತೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಸಲಹೆ ನೀಡಿದ್ದ ವಿಚಾರವನ್ನು ಪಾರ್ಥಿವ್ ರಿವೀಲ್ ಮಾಡಿದ್ದಾರೆ. “ಈ ಹುಡುಗನ ಬಗ್ಗೆ ಕೊಹ್ಲಿಗೆ ಹೇಳಿದ್ದೆ. ಆತನನ್ನು ನಮ್ಮ ತಂಡ (ಆರ್ಸಿಬಿ)ಗೆ ಖರೀದಿಸಬೇಕು ಎಂದು ಪ್ಲಾನ್ ಮಾಡಲಾಗಿತ್ತು. ಆದರೆ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಬುಮ್ರಾ ಅವರನ್ನು ತನ್ನ ತೆಕ್ಕೆಗೆ ತೆಗದುಕೊಂಡಿತ್ತು” ಹೇಳಿದ್ದಾರೆ.
ಪಾರ್ಥಿವ್ ಪಟೇಲ್ ಅವರು ತಮ್ಮ 18 ವಯಸ್ಸಿನಲ್ಲಿ (17 ವರ್ಷ, 153 ದಿನ)ಕ್ಕೆ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. 2002ರಲ್ಲಿ ಇಂಗ್ಲೆಂಟ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯದ ಆಡಿದ್ದರು. ಸದ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಮತ್ತು ಗುಜರಾತ್ ರಣಜಿ ತಂಡದ ನಾಯಕನಾಗಿ ಕ್ರಿಕೆಟ್ ಅಂಗಳದಲ್ಲಿ ವೃತ್ತಿ ಜೀವನ ನಡೆಸಿದ್ದಾರೆ.