CrimeKarnatakaKolarLatestMain Post

ಕುರಿ ಕಳವು ಮಾಡಲು ಬಂದು ಕುರಿಗಾಯಿಯನ್ನೇ ಕೊಂದರು

Advertisements

– ಮಗ ಆಗಮಿಸುತ್ತಿದ್ದಂತೆ ಆಟೋ ಬಿಟ್ಟು ಪರಾರಿ

ಕೋಲಾರ: ಕುರಿ ಕಳವು ಮಾಡಲು ಬಂದು ಕುರಿಗಾಯಿಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಜಿಲ್ಲೆಯ ಮುಳಬಾಗಿಲು ತಾಲೂಕಿನ ಪಳ್ಳಿಗರಪಾಳ್ಯದಲ್ಲಿ ಘಟನೆ ನಡೆದಿದ್ದು, ದೊಡ್ಡಮುನಿಸ್ವಾಮಿ(60) ಕೊಲೆಯಾದ ಕುರಿಗಾಯಿ. ರಾತ್ರಿ ವೇಳೆ ಕುರಿ ವ್ಯಾಪರಕ್ಕೆಂದು ಬಂದು ಕುರಿಗಾಯಿಯನ್ನು ಕೊಂದು ಕುರಿಗಳ ಕಳ್ಳತನಕ್ಕೆ ಯತ್ನಿಸಿದ್ದಾನೆ. ಈ ವೇಳೆ ಕೊಲೆಯಾದವನ ಮಗ ಸ್ಥಳಕ್ಕೆ ಧಾವಿಸಿದ್ದು, ಕಿರುಚಿದಾಗ ಕಳ್ಳರು ಆಟೋ ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದಾಗಿ ಸ್ಥಳೀಯ ಕುರಿಗಾಯಿಗಳು ಬೆಚ್ಚಿ ಬಿದ್ದಿದ್ದು, ಕೊಲೆಯಿಂದಾಗಿ ತೀವ್ರ ಭಯಭೀತರಾಗಿದ್ದಾರೆ.

ಘಟನೆ ಬಳಿಕ ದೊಡ್ಡಮುನಿಸ್ವಾಮಿ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊಲೆ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Back to top button