ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಹೌಸಿಂಗ್ ಬೋರ್ಡ್ ಡಿಜಿ ಆಗಿರುವ ಆರ್ಪಿ ಶರ್ಮಾ ತಮ್ಮ ರಿವಾಲ್ವರ್ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಸಂಜೆ ತಮ್ಮ ನಿವಾಸದಲ್ಲೇ 2 ಬಾರಿ ಕುತ್ತಿಗೆಗೆ ಆರ್ಪಿ ಶರ್ಮಾ ಫೈರ್ ಮಾಡಿಕೊಂಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
Advertisement
ಕೊತ್ತನೂರಿನ ಮನೆಯಲ್ಲೇ ತಮಗೆ ತಾವೇ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಕೂಡಲೇ ಮನೆಯಲ್ಲಿದ್ದವರು ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಶರ್ಮಾ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ನೀಡಿದ್ದಾರೆ.
Advertisement
Advertisement
ಗಂಭೀರವಾಗಿ ಗಾಯಗೊಂಡ ಆರ್ ಪಿ ಶರ್ಮಾ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ್ಮಹತ್ಯೆಗೆ ಯತ್ನಿಸಿದ್ರಾ ಅಥವಾ ಆಕಸ್ಮಿಕವಾಗಿ ಗುಂಡು ಸಿಡಿಯಿತೇ ಎಂಬ ಪ್ರಶ್ನೆ ಎದ್ದಿದೆ.
Advertisement
ಉತ್ತರ ಪ್ರದೇಶ ಮೂಲದ 1977 ರ ಬ್ಯಾಚ್ ಅಧಿಕಾರಿಯಾಗಿರುವ ಆರ್ ಪಿ ಶರ್ಮ ಬಿಎಂಟಿಎಫ್ನಲ್ಲಿ ಎಡಿಜಿಯಾಗಿದ್ದ ವೇಳೆ ಸಾಕಷ್ಟು ಹೆಸರು ಮಾಡಿದ್ದರು.