ಬೆಂಗಳೂರು: ಕಿಚ್ಚನ ಕೋಟಿಗೊಬ್ಬ-3 ಅಡ್ಡಕ್ಕೆ ಮಾದಕ ಚೆಲುವೆ ಸನ್ನಿ ಲಿಯೋನ್ ಎಂಟ್ರಿ ಕೊಡುತ್ತಿದ್ದಾರೆ ಎಂಬ ಕುರಿತ ಬಿಸಿ ಬಿಸಿ ಚರ್ಚೆ ಇದೀಗ ಆರಂಭವಾಗಿದೆ. ಫ್ಯಾಂಟಮ್ ಚಿತ್ರದ ಶೂಟಿಂಗ್ನಲ್ಲೇ ಕಿಚ್ಚ ಬ್ಯುಸಿಯಾಗಿದ್ದು, ಇತ್ತ ಕೋಟಿಗೊಬ್ಬ-3 ಚಿತ್ರಕ್ಕೆ ಸೇಸಮ್ಮ ಸದ್ದಿಲ್ಲದೇ ಎಂಟ್ರಿ ಕೊಟ್ಟಿದ್ದಾರೆ.
Advertisement
ಹೌದು ಇತ್ತೀಚೆಗಷ್ಟೇ ಫ್ಯಾಂಟಮ್ ತಂಡ ಸಿನಿಮಾ ಶೂಟಿಂಗ್ ಆರಂಭಿಸಿದ ಕುರಿತು ಮಾಹಿತಿ ನೀಡಿತ್ತು. ಅಲ್ಲದೆ ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವ ವಿಕ್ರಾಂತ್ ರೋಣನ ಫಸ್ಟ್ ಲುಕ್ ಪೋಸ್ಟರ್ನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ ತುಂಬಾ ದಿನಗಳಿಂದ ಕೋಟಿಗೊಬ್ಬ-3 ಅಪ್ಡೇಟ್ ಸಿಕ್ಕಿರಲಿಲ್ಲ. ಈ ಕುರಿತು ಕಿಚ್ಚ ಸುದೀಪ್ ಸಹ ಎಲ್ಲೂ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ ಇದೀಗ ಸಿನಿಮಾ ಅಂಗಳದಿಂದ ಹಾಟ್ ನ್ಯೂಸ್ ಹೊರಬಿದ್ದಿದೆ.
Advertisement
Advertisement
ಕಿಚ್ಚನ ಕೋಟಿಗೊಬ್ಬ-3 ಸಿನಿಮಾದ ಹಾಡೊಂದರಲ್ಲಿ ಮಾದಕ ಚೆಲುವೆ ಸನ್ನಿ ಲಿಯೋನ್ ಹೆಜ್ಜೆ ಹಾಕಲಿದ್ದಾರಂತೆ. ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ವತಃ ನಟಿ ಸನ್ನಿ ಲಿಯೋನ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ಕಿಚ್ಚನ ಜೊತೆ ಸೊಂಟ ಬಳುಕಿಸುವುದಾಗಿ ತಿಳಿಸಿದ್ದಾರೆ. ಕೇವಲ ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡುತ್ತಿರುವ ಕುರಿತು ತಿಳಿಸಿದ್ದಾರೆ. ಆದರೆ ಯಾವ ಹಾಡು ಎಂಬುದನ್ನು ಬಹಿರಂಗಪಡಿಸಿಲ್ಲ.
Advertisement
ಕೋಟಿಗೊಬ್ಬ-3 ಸಿನಿಮಾದ ಐಟೆಮ್ ಸಾಂಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಹಾಡು, ನೃತ್ಯವನ್ನು ಸೊಗಸಾಗಿ ಚಿತ್ರಿಸಲಾಗಿದೆ. ರಾಗಿಣಿ ಎಂಎಂಎಸ್ 2 ಸಿನಿಮಾದ ಬೇಬಿ ಡೋಲ್ ರೀತಿಯಲ್ಲೇ ಈ ಹಾಡು ಸಹ ಹಿಟ್ ಆಗಲಿದೆ ಎಂಬ ಭರವಸೆ ಇದೆ ಎಂದು ಸಂದರ್ಶನದಲ್ಲಿ ಸನ್ನಿ ಲಿಯೋನ್ ತಿಳಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಅಂದಹಾಗೆ ಕೋಟಿಗೊಬ್ಬ ಹೆಸರಿನ 2 ಸರಣಿ ಸಿನಿಮಾಗಳು ಕಿಚ್ಚ ಸುದೀಪ್ಗೆ ಸಾಕಷ್ಟು ಯಶಸ್ಸು ತಂದುಕೊಟ್ಟಿವೆ. ಕೋಟಿಗೊಬ್ಬ-2 ಸಿನಿಮಾ ಸಹ ಸಖತ್ ಹಿಟ್ ಆಗಿದೆ. ಹೀಗಾಗಿ ಸುದೀಪ್ ಇದೀಗ ಕೋಟಿಗೊಬ್ಬ-3 ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಸಹ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಯಾವ ರೀತಿಯ ಕಥೆ ಹೆಣೆಯಲಾಗಿದೆ ಎಂದು ಅಭಿಮಾನಿಗಳು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಆದರೆ ಸಿನಿಮಾ ತಂಡ ಕೋಟಿಗೊಬ್ಬ-3 ಸಿನಿಮಾ ಕುರಿತು ಅಷ್ಟೇನು ಅಪ್ಡೇಟ್ ನೀಡುತ್ತಿಲ್ಲ.