ಜೈಪುರ: ಕೊರೊನಾ ಲಾಕ್‍ಡೌನ್ ಸಡಿಲಿಕೆ ಮಾಡಿದ ನಂತರ ಅನೇಕ ಪ್ರವಾಸಿ ಕಾರ್ಮಿಕರು ಬೇರೆ ದಾರಿಯಿಲ್ಲದೆ ನಡೆದುಕೊಂಡೇ ತಮ್ಮ ತಮ್ಮ ಗ್ರಾಮಗಳಿಗೆ ತಲುಪುತ್ತಿದ್ದಾರೆ. ಇದೀಗ ಕಾಲ್ನಡಿಗೆಯಲ್ಲಿ ತಮ್ಮ ಮನೆಗಳಿಗೆ ಮರಳುತ್ತಿದ್ದ ಪ್ರವಾಸಿ ಕಾರ್ಮಿಕರಿಗೆ ರಾಜಸ್ಥಾನ ಪೊಲೀಸರು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾಲ್ನಡಿಗೆ ಮೂಲಕ ಹೋಗುವ ಕಾರ್ಮಿಕರಿಗೆ ಅನೇಕರು ಊಟ, ನೀರಿನ ಸಹಾಯ ಮಾಡಿದ್ದಾರೆ. ಇದೀಗ ರಾಜಸ್ಥಾನ ಪೊಲೀಸರ ತಂಡವೊಂದು ಕಾರ್ಮಿಕರಿಗೆ ಬಿಸ್ಕೆಟ್ ಮತ್ತು ನೀರಿನ ಬಾಟಲಿಗಳ ಪ್ಯಾಕೆಟ್‍ಗಳನ್ನು ನೀಡಿದ್ದಾರೆ. ಜೊತೆಗೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಚಪ್ಪಲಿಯನ್ನು ಪೂರೈಕೆ ಮಾಡಿದ್ದಾರೆ.
ಲಾಕ್‍ಡೌನ್‍ನಿಂದ ಉದ್ಯೋಗ ಮತ್ತು ಹಣವಿಲ್ಲದ ಕಾರಣ ಸಾವಿರಾರು ಪ್ರವಾಸಿ ಕಾರ್ಮಿಕರು ಜೈಪುರ-ಆಗ್ರಾ ಹೆದ್ದಾರಿ ಮೂಲಕ ತಮ್ಮ ರಾಜ್ಯಗಳಿಗೆ ಮರಳುತ್ತಿದ್ದರು. ಅದರಲ್ಲೂ ಇಂತಹ ಬಿಸಿಲಿನಲ್ಲಿ ಕಾರ್ಮಿಕರು ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಪೊಲೀಸರ ಗುಂಪೊಂದು ಹೆದ್ದಾರಿಯಲ್ಲಿ ನಿಂತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಹೊಸ ಚಪ್ಪಲಿಗಳನ್ನು ಒದಗಿಸಿದೆ. ಪೊಲೀಸ್ ತಂಡದ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Rajasthan: Policemen provide food, slippers to migrants returning home on foot. #IndiaFightsCoronavirus #COVID19 pic.twitter.com/nKFcNwjJWd
— The Times Of India (@timesofindia) May 16, 2020