ಚಿತ್ರದುರ್ಗ: ಕೊರೊನಾ ಲಾಕ್ಡೌನ್ ಬಳಿಕ ಬೆಂಗಳೂರಿನಿಂದ ತಮ್ಮ ಊರಿಗೆ ಮರಳಿ ಕಾರು ಬಾಡಿಗೆ ನೀಡಿ ಹೇಗೋ ಬದುಕು ಕಟ್ಟಿಕೊಂಡಿದ್ದ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಕಾರಿನ ಮಾಲೀಕರಿಗೆ ಖತರ್ನಾಕ್ ಚಾಲಕನೋರ್ವ ಬಾಡಿಗೆಗೆಂದು ಕಾರು ಪಡೆದು ಬೇರೆಯವರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಆಘಾತಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
Advertisement
ಚಿತ್ರದುರ್ಗ ತಾಲೂಕು ಕವಾಡಿಗರಹಟ್ಟಿ ಗ್ರಾಮದ ವಾಸಿ ಮಧು ಅಲಿಯಾಸ್ ಮಧುಕುಮಾರ ಕಾರಿನ ಚಾಲಕನಾಗಿದ್ದಾನೆ. ಸ್ನೇಹಿತರು, ಸಂಬಂಧಿಕರ ಬಳಿ ಸಾಲ ಮಾಡಿಕೊಂಡಿದ್ದು, ಇದನ್ನು ತೀರಿಸಲು ತನ್ನ ಇನ್ನೋವಾ ಕಾರನ್ನು ಸಹ ಮಾರಾಟಮಾಡಿದ್ದನು. ಆದರೂ ಆತನ ಸಮಸ್ಯೆ ಬಗೆಹರೆಯದ ಹಿನ್ನಲೆಯಲ್ಲಿ, ತನಗೆ ಪರಿಚಯವಿರುವ ಕಾರಿನ ಮಾಲೀಕರಿಂದ ಕಾರುಗಳನ್ನು ಬಾಡಿಗೆಯಂತೆ ಪಡೆದು, ನಂಬಿಸಿ ಕಾರುಗಳನ್ನು ಅಡಮಾನ ಇಡುತ್ತಿದ್ದ. ಇದರಿಂದ ಹಣ ಪಡೆದುಕೊಂಡು, ಇದೇ ಹಣದಲ್ಲಿ ಕಾರುಗಳ ಮಾಲೀಕರಿಗೆ ಸ್ವಲ್ಪ ನೀಡಿ, ಉಳಿದ ಹಣವನ್ನು ತಾನೇ ಇಟ್ಟುಕೊಂಡು ಸಾಲ ತೀರಿಸುವ ಪ್ಲಾನ್ ಮಾಡಿ, ವಂಚಿಸುತ್ತಿದ್ದ.
Advertisement
Advertisement
ಈ ವರ್ಷದ ಫೆಬ್ರವರಿ ತಿಂಗಳಿನಿಂದ ಈವರೆಗೆ ಕೆಎ-17-ಬಿ-4249, ಕೆಎ-31-ಎಂ-6343, ಕೆಎ-18-ಬಿ-8476, ಕೆಎ-03-ಎಸಿ-7399, ಕೆಎ-17-ಪಿ-4566, ಕೆಎ-02-ಎಎಫ್-5118, ಕೆಎ-03-ಎಎ-1143, ಕೆಎ-17-ಡಿ-9222, ಕೆಎ-16-ಸಿ-9113, ಕೆಎ-16-ಡಿ-1936, ಕೆಎ-03-ಎಬಿ-9618, ಕೆಎ-17 ಡಿ-2767 ಈ ನಂಬರಿನ ಒಟ್ಟು 12 ಕಾರುಗಳನ್ನು ತಿಂಗಳಿಗೆ 30,000 ರೂ.ನಂತೆ ಬಾಡಿಗೆ ಹಣ ಕೊಡುತ್ತೇನೆ ಎಂದು ನಂಬಿಸಿ ಮಾಲೀಕರಿಗೆ ಮೋಸ ಮಾಡಿದ್ದಾನೆ. ನನಗೆ ದೊಡ್ಡ ಕಂಪನಿಯಲ್ಲಿ ಬಾಡಿಗೆಗೆ ಸಿಕ್ಕಿದೆ ಪ್ರತಿ ತಿಂಗಳು ಹಣ ಕೊಡುತ್ತಾರೆ ಎಂದು ಕಾರುಗಳ ಮಾಲೀಕರಿಗೆ ನಂಬಿಸಿದ್ದನು.
Advertisement
ಸುಮಾರು 70 ಲಕ್ಷ ರೂ. ಬೆಲೆ ಬಾಳುವ ಕಾರುಗಳನ್ನು ಬೇರೆ ಸ್ಥಳಗಳಿಗೆ ಕರೆಸಿಕೊಂಡು ಗ್ರಾಹಕರನ್ನು ನಂಬಿಸಿ ಕಾರುಗಳನ್ನು ಅಡಮಾನ ಇಟ್ಟು ಒಟ್ಟು 12,20,000 ರೂ.ಗಳನ್ನು ಪಡೆದುಕೊಂಡು ಕಾರುಗಳ ಮಾಲೀಕರಿಗೆ ಉಂಡೆನಾಮ ಹಾಕಿ, ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದನು. ಈ ಬಗ್ಗೆ ದಾವಣಗೆರೆಯ ನಿವಾಸಿ ಬಸವರಾಜ ರವರು ನೀಡಿದ ದೂರಿನ ಮೇರೆಗೆ ಭರಮಸಾಗರ ಪೊಲೀಸರು ಐಪಿಸಿ ಸೆಕ್ಷನ್ 196/2020 ಕಲಂ.406, 420 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ವಂಚನೆ ಪ್ರಕರಣ ಬೇಧಿಸಲು ಭರಮಸಾಗರ ಪೊಲೀಸ್ ಠಾಣೆಯ ಪಿಎಸ್ಐ ಟಿ.ರಾಜು ಮತ್ತು ಸಿಬ್ಬಂದಿಯವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಅಕ್ಟೋಬರ್ 31ರಂದು ಮಧುಕುಮಾರ್ನನ್ನು ಬಂಧಿಸಿ, ಒಟ್ಟು 12 ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.