Bengaluru CityCinemaDistrictsKarnatakaLatestMain PostSandalwood

‘ಕಾಟನ್ ಪೇಟೆ ಗೇಟ್’ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಲಿದ್ದಾರೆ ಸನ್ನಿ..!

ಬೆಂಗಳೂರು: ಈಗಾಗಲೇ ಸ್ಯಾಂಡಲ್‍ವುಡ್ ನಟ ಸೃಜನ್ ಲೋಕೇಶ್ ಹಾಗೂ ಪ್ರೇಮ್ ಜೊತೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದ ಮಾದಕ ನಟಿ ಸನ್ನಿ ಲಿಯೋನ್ ಇದೀಗ ಕನ್ನಡ ಮತ್ತೊಂದು ಸಿನಿಮಾದಲ್ಲಿ ಸೊಂಟ ಬಳುಕಿಸೋಕೆ ರೆಡಿಯಾಗಿದ್ದಾರೆ.

ಹೌದು. ಈಗಾಗಲೇ ಮೂರು ಬಾರಿ ಕನ್ನಡದಲ್ಲಿ ನಟಿಸಿರುವ ನಟಿ ಇದೀಗ ಕಾಟನ್ ಪೇಟೆ ಗೇಟ್ ನಲ್ಲಿ ತಮ್ಮ ಸೊಂಟ ಬಳುಕಿಸಲು ರೆಡಿಯಾಗಿದ್ದಾರೆ. ಈ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಲು ಸನ್ನಿ ಮತ್ತೊಮ್ಮೆ ಸಜ್ಜಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಹೆಚ್‍ಡಿಕೆ ಪ್ರತಿಯೊಂದು ಕೆಲಸದಲ್ಲಿ ಡೀಲ್ ಮಾಡುವ ಮಾಸ್ಟರ್: ಸುಮಲತಾ ಅಂಬರೀಶ್

ಸ್ಯಾಂಡಲ್ ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡಿರೋ ಸಿನಿಮಾದಲ್ಲಿ ಸನ್ನಿ ಹೆಜ್ಜೆ ಹಾಕಲಿದ್ದಾರೆ. ಈ ಚಿತ್ರ ತೆಲುಗಿನಲ್ಲಿ ಸೀತಣ್ಣ ಪೇಟೆ ಗೇಟ್ ಆಗಿ ರೆಡಿಯಾಗುತ್ತಿದೆ. ಇದೀಗ ಈ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದೆ. ಚಿತ್ರದ ಸ್ಪೆಷಲ್ ಐಟಂ ಸಾಂಗ್ ನಲ್ಲಿ ಮಾದಕ ಬೆಡಗಿ ಡ್ಯಾನ್ಸ್ ಮಾಡಲಿದ್ದಾರೆ. ಸನ್ನಿ ಜೊತೆ ಶ್ರೀನಿವಾಸ್ ಕೂಡ ಹೆಜ್ಜೆ ಹಾಕಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಅಂದು ಬೆಸ್ಟ್ ಫ್ರೆಂಡ್ ಹೆಂಡ್ತಿಯಾದ್ರು, ಇಂದು ಪತ್ನಿಯೇ ಬೆಸ್ಟ್ ಫ್ರೆಂಡ್: ರಮೇಶ್

ಈ ಸಿನಿಮಾದ ಹಾಡಿನ ಚಿತ್ರೀಕರಣ ಮೂರು ದಿನಗಳ ಕಾಲ ನಡೆಯಲಿದೆ. ಇದೇ ತಿಂಗಳು 29 – 30 ರಂದು ಸನ್ನಿಲಿಯೋನ್ ಹಾಡಿನ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ. ಈ ಚಿತ್ರಕ್ಕೆ ನಟಿಗೆ 50 ಲಕ್ಷದಷ್ಟು ಸಂಭಾವನೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Back to top button