DistrictsKarnatakaLatestMain PostUdupi

ಕಾಂಗ್ರೆಸ್ ಮರಿಮೊಮ್ಮಕ್ಕಳಿಗೆ ಸಾವರ್ಕರ್ ಅಂದ್ರೆ ಗೌರವ ಇಲ್ಲ- ಸುನಿಲ್ ಕುಮಾರ್

ಉಡುಪಿ: ವೀರ ಸಾವರ್ಕರ್‌ಗೆ ಕಾಂಗ್ರೆಸ್ ಯಾವತ್ತೂ ಗೌರವ ಕೊಟ್ಟಿಲ್ಲ. ಕಾಂಗ್ರೆಸ್‍ನ ಮರಿಮೊಮ್ಮಕ್ಕಳು ಕೂಡ ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಂಡಮಾನ್ ನಿಕೋಬಾರ್‌ನಲ್ಲಿರುವ ಸಾವರ್ಕರ್ ಹೆಸರನ್ನು ತೆಗೆದು ಹಾಕಲು ಕಾಂಗ್ರೆಸ್ ನಿರ್ಧರಿಸಿತ್ತು. ಮಣಿಶಂಕರ್ ಅಯ್ಯರ್ ಈ ಕೃತ್ಯಕ್ಕೆ ಮುಂದಾಗಿದ್ದರು. ಹೋರಾಟದಲ್ಲಿ ನೂರಾರು ದಿನಗಳ ಕಾಲ ಜೈಲಿನಲ್ಲಿದ್ದ ವ್ಯಕ್ತಿ ಸಾವರ್ಕರ್. ಸಾವರ್ಕರ್‌ಗೆ ಕಾಂಗ್ರೆಸ್ ಯಾವತ್ತೂ ಗೌರವ ಕೊಟ್ಟಿಲ್ಲ. ಕಾಂಗ್ರೆಸ್‍ನ ಮರಿಮೊಮ್ಮಕ್ಕಳು ಕೂಡ ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಸ್ವಾತಂತ್ರ ಹೋರಾಟಗಾರರಿಗೆ ಇವರು ಗೌರವ ಕೊಡಲ್ಲ. ದೇಶ ಮೊದಲು ಎಂಬ ಕಲ್ಪನೆಯನ್ನು ಇವರಿಂದ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್, ಬೇಕಾದ್ರೆ ನೆಹರು ಹುಕ್ಕಾ ಬಾರ್ ತೆರೆಯಲಿ : ಸಿಟಿ ರವಿ

ಸಿಟಿ ರವಿ, ಪ್ರಿಯಾಂಕ್ ಖರ್ಗೆ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ಟೀಕೆಗಳು ಎಲ್ಲೆಯನ್ನು ಮೀರಬಾರದು. ಟೀಕಿಸುವಾಗ ಬಳಸುವ ಶಬ್ದ ಪ್ರಯೋಗಗಳನ್ನು ಜನ ಗಮನಿಸುತ್ತಾರೆ. ಮಾತಿನಿಂದ ನಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವಾಜಪೇಯಿ ವ್ಯಕ್ತಿತ್ವ ಯಾವ ರೀತಿಯದ್ದು ಎಲ್ಲರಿಗೂ ಗೊತ್ತಿದೆ. ಅಜಾತಶತ್ರು ಎಂದು ಅವರೇ ಅವರನ್ನು ಕರೆಸಿಕೊಂಡದ್ದಲ್ಲ. ಜನ ಅವರನ್ನು ಅಜಾತ ಶತ್ರು ಎಂದು ಕರೆಯುತ್ತಿದ್ದರು. ವಾಜಪೇಯಿ ಬಗ್ಗೆ ಮಾತನಾಡಿದರೆ ಅವರ ವ್ಯಕ್ತಿತ್ವ ತೋರಿಸುತ್ತದೆ. ವಾಜಪೇಯಿಗೆ ಇದರಿಂದ ಯಾವುದೇ ನಷ್ಟವಿಲ್ಲ. ಟೀಕಿಸುವ ಪ್ರತಿಯೊಬ್ಬರಿಗೂ ಈ ಮಾತು ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

Leave a Reply

Your email address will not be published. Required fields are marked *

Back to top button