ಚಿಕ್ಕಬಳ್ಳಾಪುರ: ಕಾಂಗ್ರೆಸ್ ನಾಯಕಿ ಮಮತಾ ಮೂರ್ತಿ ಮಗಳ ಅನುಮಾನಸ್ಪದ ಸಾವು ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಮೃತ ಯುವತಿಯ ತಂದೆ ವೆಂಕಟೇಶ್ ಮೂರ್ತಿ ದೂರು ನೀಡಿದ್ದಾರೆ.
ವೆಂಕಟೇಶ್ ಮೂರ್ತಿ ದೂರಿನಲ್ಲೇನಿದೆ?
ನನ್ನ ಮಗಳಾದ ನಿಹಾರಿಕಾ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾಳೆ. ಮಗಳು ಸಿಇಟಿ ಹಾಗೂ ನೀಟ್ ಪರೀಕ್ಷೆಗೆ ತಯಾರಾಗುತ್ತಿದ್ದಳು. ಬೆಳಗಿನ ಜಾವ 3.30ರ ಸಮಯದಲ್ಲಿ ನನ್ನ ಮಗಳು ಒದಿಕೊಳ್ಳುವುದಾಗಿ ಕೋಣೆಗೆ ಹೋಗಿದ್ದಳು. ತದನಂತರ 4.20ರ ಸಮಯದಲ್ಲಿ ನನ್ನ ಪತ್ನಿ ಹಣ್ಣು ಕೊಡಲು ರೂಂ ಬಳಿ ತೆರಳಿದಾಗ ಬಾಗಿಲು ತೆಗೆಯದೆ ಒಳಭಾಗದಲ್ಲಿ ಲಾಕ್ ಮಾಡಿಕೊಂಡಿರುತ್ತಾಳೆ.
Advertisement
Advertisement
ಇತ್ತೀಚೆಗೆ ನೀಟ್ ಪರೀಕ್ಷೆ ನಡೆಯದೆ ಮೂಂದೂಡುತ್ತಿದ್ದರಿಂದ ಬೇಸರ ಮಾಡಿಕೊಂಡು ಹಾಗೂ ಸಿಇಟಿ ಫಲಿತಾಂಶದಲ್ಲಿ ಕಡಿಮೆ ಅಂಕ ಬರುವ ಆತಂಕದಿಂದ ತನ್ನಷ್ಟಕ್ಕೆ ತಾನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಬೇರೆ ಯಾವುದೇ ಕಾರಣವಿಲ್ಲ ಅಂತ ಮೃತ ಯುವತಿಯ ತಂದೆ ಶಿಡ್ಲಘಟ್ಟ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement
Advertisement
ಇಂದು ಬೆಳಗ್ಗೆ ನನ್ನ ಹೆಂಡತಿ ಕರೆ ಮಾಡಿ ಬಾಗಿಲು ತೆರೆಯದ ವಿಷಯ ತಿಳಿಸಿದಾಗ ನಾನು ಶಿಡ್ಲಘಟ್ಟ ಪ್ರವಾಸಿ ಮಂದಿರದಿಂದ ಮನೆಗೆ ಬಂದೆ. ಬಾಗಿಲು ಒಡೆದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ತದನಂತರ ಅಲ್ಪ ಸ್ವಲ್ಪ ಉಸಿರಾಡುತ್ತಿದ್ದನ್ನ ಕಂಡು ಚಿಕಿತ್ಸೆಗಾಗಿ ಮಗಳನ್ನ ಅಂಬ್ಯುಲೆನ್ಸ್ ಮೂಲಕ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆ ಗೆ ಕರೆದುಕೊಂಡು ಹೋದೆ. ಆದರೆ ಮಾರ್ಗ ಮಧ್ಯೆ ಮಗಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಅಂತ ದೂರಿನಲ್ಲಿ ಉಲ್ಲೇಖಿಸಿಲಾಗಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು ಮೃತದೇಹವನ್ನ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆ ಶವಾಗಾರದಿಂದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.