ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ, ಕನ್ನಡ ಭಾಷೆಗಿಂತ ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುವುದೇ ಮುಖ್ಯವೇ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.
ಶಿವಸೇನೆ ಪಕ್ಷದ ವಕ್ತಾರರೂ ಆದ ರಾಜ್ಯಸಭಾ ಸದಸ್ಯ ಸಂಜಯ್ ರಾವತ್, ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರಿಗೆ ಮುಂದೆ ವ್ಯಾಪಾರ ಮತ್ತು ವಹಿವಾಟು ನಡೆಸಲು ಕಷ್ಟವಾಗಬಹುದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
Advertisement
ಕರೋನದಂತಹ ಈ ಸಂಕಷ್ಟದ ಸಂದರ್ಭದಲ್ಲಿ ದೇಶವು ಒಂದಾಗಿ ಹೋರಾಡಬೇಕಾದ ಸನ್ನಿವೇಶದಲ್ಲಿ, ದೇಶ ಒಡೆಯುವ ಈ ರೀತಿಯ ಹೇಳಿಕೆಗಳನ್ನು ಶ್ರೀ @DKShivakumar , ಶ್ರೀ @siddaramaiah ಹಾಗೂ @INCKarnataka ಇದನ್ನು ಖಂಡಿಸುವುದಿಲ್ಲವೇ?
ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ, ಕನ್ನಡ ಭಾಷೆಗಿಂತ ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುವುದೇ ಮುಖ್ಯವೇ? pic.twitter.com/iTG6SNHnQ5
— Tejasvi Surya (@Tejasvi_Surya) April 20, 2021
Advertisement
ಈ ವಿಚಾರವನ್ನು ಪ್ರಸ್ತಾಪ ಮಾಡಿದ ತೇಜಸ್ವಿ ಸೂರ್ಯ, ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ದೇಶವು ಒಂದಾಗಿ ಹೋರಾಡಬೇಕಾದ ಸನ್ನಿವೇಶದಲ್ಲಿ, ದೇಶ ಒಡೆಯುವ ಈ ರೀತಿಯ ಹೇಳಿಕೆಗಳನ್ನು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಖಂಡಿಸುತ್ತಿಲ್ಲ ಯಾಕೆ ಎಂದು ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದಾರೆ.
Advertisement
Shiv Sena-NCP-Congress Govt is proving to be disgrace to the country everyday.
When country has to stand united in hour of distress, MVP leaders are dividing people on issues of language.@INCKarnataka’s silence shows their love for power is more than love for Karnataka. https://t.co/9RszRaDLym pic.twitter.com/8TGEOE0sgk
— Tejasvi Surya (@Tejasvi_Surya) April 20, 2021
Advertisement
ಶಿವಸೇನೆ ಪಕ್ಷದ ಮುಖವಾಣಿ ‘ಸಾಮ್ನಾ’ದ ತಮ್ಮ ಅಂಕಣದಲ್ಲಿ ಸಂಜಯ್ ರಾವತ್ ಅವರು ಕರ್ನಾಟಕದ ವಿರುದ್ಧ ಮತ್ತೆ ವಿವಾದಾತ್ಮಕ ಬರಹ ಪ್ರಕಟಿಸಿದ್ದಾರೆ.
ಮರಾಠಿ ಭಾಷಿಗರ ರಕ್ಷಣೆಗಾಗಿ ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿಗರಿಗೆ ರಕ್ಷಣೆ ಇಲ್ಲದಾಗಿದ್ದು ಮರಾಠಿಗರ ಮೇಲೆ ದಾಳಿ ಮಾಡಲಾಗಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರ್ಕಾರದ ಕಚೇರಿಯನ್ನು ಸ್ಥಾಪಿಸಬೇಕು. ಕನ್ನಡಿಗರ ಈ ಕೆಲಸಕ್ಕೆ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಗಳ ಮೇಲೆ ದಾಳಿ ಮಾಡುವ ಮೂಲಕ ಶಿವಸೇನೆ ಪಕ್ಷದ ಕಾರ್ಯಕರ್ತರು ತಕ್ಕ ಉತ್ತರ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.