ಬೆಂಗಳೂರು: ಕೀಚಕರ ಹೆಡೆಮುರಿ ಕಟ್ಟುವಲ್ಲಿ ಬಿಜೆಪಿ ಸರ್ಕಾರ ಸಮರ್ಥವಿದೆ. ಕಾಂಗ್ರೆಸ್ಸಿನವರಿಗೆ ಈಗಾದರೂ ಸತ್ಯದ ಅರಿವಾಯಿತೇ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪ್ರಶ್ನಿಸಿದ್ದಾರೆ.
Advertisement
ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು, ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿದೆ. ಕ್ರೌರ್ಯದ ಮನಃಸ್ಥಿತಿಯ ದ್ಯೋತಕವಾಗಿ ಪುಂಡಾಟಿಕೆ ಮೆರೆದಿದ್ದ ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಪತಿ ಕಲೀಂಪಾಷರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೀಚಕರ ಹಡೆಮುರಿಕಟ್ಟುವಲ್ಲಿ ನಮ್ಮಸರ್ಕಾರ ಸಮರ್ಥವಿದೆ. ಕಾಂಗ್ರೆಸ್ಸಿನವರಿಗೆ ಈಗಲಾದ್ರೂ ನಿಜಸತ್ಯದ ಅರಿವಾಯಿತೇ ಎಂದು ಪ್ರಶ್ನಿಸಿ ಬರೆದುಕೊಂಡಿದ್ದಾರೆ.
Advertisement
ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆಯಲ್ಲಿಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿದೆ. ಕ್ರೌರ್ಯದ ಮನಃಸ್ಥಿತಿಯ ದ್ಯೋತಕವಾಗಿ ಪುಂಡಾಟಿಕೆ ಮೆರೆದಿದ್ದ ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಪತಿ ಕಲೀಂಪಾಷರನ್ನುಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೀಚಕರ ಹಡೆಮುರಿಕಟ್ಟುವಲ್ಲಿ ನಮ್ಮಸರ್ಕಾರ ಸಮರ್ಥವಿದೆ. ಕಾಂಗ್ರೆಸ್ನವರಿಗೆ ಈಗಲಾದ್ರೂ ನಿಜಸತ್ಯದ ಅರಿವಾಯಿತೇ pic.twitter.com/jwEdHiYQ7M
— Dr Sudhakar K (@mla_sudhakar) August 14, 2020
Advertisement
ಬೆಂಗಳೂರು ಗಲಭೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಖಲೀಂ ಪಾಷಾನನ್ನು ಮಧ್ಯರಾತ್ರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಖಲೀಂ ಪಾಷಾ ಗಲಭೆಯ ಉದ್ರಿಕ್ತರಿಗೆ ಪ್ರಚೋದನೆ ನೀಡುತ್ತಿದ್ದನು. ಗಲಭೆಕೋರರಿಗೆ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದನು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಹೀಗಾಗಿ ಮಧ್ಯರಾತ್ರಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
Advertisement
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ, ಡಿಜೆ ಹಳ್ಳಿ ಪೊಲೀಸರು ಸುಮಾರು 15 ಗಂಟೆಗೆ ಆಪರೇಷನ್ ಕಾರ್ಯಾಚರಣೆ ಮಾಡಲು ಶುರು ಮಾಡಿದ್ದರು. ಅದೇ ರೀತಿ ಡಿಜೆ ಹಳ್ಳಿ, ಕೆಜಿ ಹಳ್ಳಿಯ ಗಲ್ಲಿಗಲ್ಲಿಯಲ್ಲೂ ಮಧ್ಯರಾತ್ರಿ ಪೊಲೀಸರು ಸುತ್ತಾಡಿದ್ದಾರೆ. ರಾತ್ರಿ 12ರಿಂದ ಬೆಳಗ್ಗಿನ ಜಾವ 4 ಗಂಟೆವರೆಗೆ ಮಿಡ್ನೈಟ್ ಆಪರೇಷನ್ ಮಾಡಿದ್ದಾರೆ.