– ಮಠಾಧೀಶರ ಅಭಿಪ್ರಾಯ ತಪ್ಪು ಅಂತ ಹೇಳಲ್ಲ
ಮಂಗಳೂರು: ಯಾರಾದರೂ ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ರೆ ಮೊದಲು ಅರ್ಜಿ ಹಾಕಲಿ. ಆ ಬಳಿಕ ಕೂತು ಮಾತಾಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಸರ್ಕಾರ ಕೊಡಲು ಆಗದ ಕಾರಣ ಮುಖ್ಯಮಂತ್ರಿ ಬದಲಾವಣೆ ಆಗುತ್ತಿದೆ. ಎರಡು ವರ್ಷದಲ್ಲಿ ಡಬಲ್ ಇಂಜಿನ್ ಸರ್ಕಾರ ಇಟ್ಟುಕೊಂಡು ಒಳ್ಳೆ ಆಡಳಿತ ಕೊಡಲು ಆಗಿಲ್ಲ. ಆಡಳಿತ ಸರಿ ಇಲ್ಲ, ಅಧಿಕಾರಿಗಳಿಂದ ಹಿಡಿದು ಗ್ರಾ.ಪಂ, ವಿಧಾನಸೌಧದವರೆಗೆ ಯಾರೂ ಮಾತು ಕೇಳ್ತಿಲ್ಲ. ಈಗ ತರಾತುರಿಯಲ್ಲಿ ಅನುದಾನ ಬಿಡುಗಡೆಯಾಗ್ತಿದೆ, ಫೈಲ್ ಗಳಿಗೆ ಸಹಿ ಆಗುತ್ತಿದೆ ಎಂದು ಆರೋಪಿಸಿದರು.
Advertisement
Advertisement
ನೀರಾವರಿ ಇಲಾಖೆ ಸೇರಿ ಬೇರೆ ಬೇರೆ ಇಲಾಖೆಯ ಫೈಲ್ ಗಳು ಕ್ಲಿಯರ್ ಆಗುತ್ತಿದೆ. ಬಜೆಟ್ ನಲ್ಲಿ ಎಷ್ಟು ದುಡ್ಡು ಇಟ್ಟಿದ್ರೀ? ಈಗ ಎಷ್ಟು ಕ್ಲಿಯರ್ ಆಗ್ತಿದೆ? ಎರಡು ವರ್ಷದಿಂದ ಎಷ್ಟಾಗಿದೆ? ಈ ಬಗ್ಗೆ ಅಸೆಂಬ್ಲಿಯಲ್ಲಿ ದಾಖಲೆ ಸಮೇತ ನಾನು ಮಾತನಾಡ್ತೇನೆ ಎಂದರು. ಇದನ್ನೂ ಓದಿ: ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಳೆಂದು ಹುಡುಗಿಯ ಕೊಲೆ ಮಾಡಿದ್ರು!
Advertisement
ಹಣಕಾಸು ಇಲಾಖೆ ದುಡ್ಡಿಲ್ಲ ಅಂತ ಪ್ರಾಜೆಕ್ಟ್ ಕ್ಲಿಯರ್ ಆಗ್ತಿರಲಿಲ್ಲ, ಈಗ ದುಡ್ಡು ಎಲ್ಲಿಂದ ಬಂತು?. ಇವೆಲ್ಲಾ ಕೂಡ ದೊಡ್ಡ ಚರ್ಚೆಯಾಗಬೇಕು, ಇದನ್ನ ನಾನು ಚರ್ಚೆ ಮಾಡ್ತೀನಿ. ಕಾಂಗ್ರೆಸ್ಸಿಗೆ ಯಾರಾದ್ರೂ ಬರೋರಿದ್ರೆ ಅರ್ಜಿ ಹಾಕಲಿ, ಆ ಮೇಲೆ ಕೂತು ಮಾತನಾಡೋಣ. ಈಗ ಇದರ ಬಗ್ಗೆ ಸುಮ್ಮನೆ ಮಾತನಾಡಲ್ಲ, ಹೋದವರು, ಇರೋರು ಬರ್ತಾರೆ ಅನ್ನೋದಲ್ಲ ಎಂದು ಹೇಳಿದರು.
Advertisement
ಯಾವುದೇ ಇದ್ದರೂ ಪಕ್ಷದ ಕಾನೂನಿನಡಿ ನಿರ್ಧಾರ ತೆಗೆದುಕೊಳ್ತೇವೆ. ಬಿಜೆಪಿಗೆ ವೋಟ್ ಹಾಕಿಲ್ಲ ಯಡಿಯೂರಪ್ಪನವರಿಗೆ ಅಂತ ಮಠಾಧೀಶರು ಅವರ ಅಭಿಪ್ರಾಯ ಹೇಳ್ತಿದ್ದಾರೆ. ಹೀಗಾಗಿ ನಾನು ಅವರ ನಡೆಯನ್ನು ತಪ್ಪು ಅಂತ ಹೇಳಲ್ಲ ಎಂದರು.