ಕಳೆದ ಲಾಕ್‍ಡೌನ್‍ನಲ್ಲಿ ನನ್ನ ಮದುವೆಯಾಯ್ತು: ಸಂಜನಾ ಗಲ್ರಾಣಿ

Public TV
3 Min Read
SANJJANA

– ಭಗವಂತ ಶಕ್ತಿ ಕೊಟ್ರೆ ಕನ್ನಡ ಇಂಡಸ್ಟ್ರಿಯೇ ಮೊದಲ ಆದ್ಯತೆ

ಬೆಂಗಳೂರು: ಡ್ರಗ್ಸ್ ಆರೋಪದ ಮೇಲೆ ಬಂಧಿತರಾಗಿದ್ದ ಸಂದರ್ಭದಲ್ಲಿ ನಟಿ ಗಲ್ರಾಣಿ ಮದುವೆ ವಿಚಾರ ಭಾರೀ ಸುದ್ದಿ ಮಾಡಿತ್ತು. ಆದರೆ ನಟಿ ಮಾತ್ರ ತಮ್ಮ ಮದುವೆ ವಿಚಾರವನ್ನು ಅಲ್ಲಗೆಳೆದಿದ್ದರು. ಇದೀಗ ತಾನು ಮದುವೆಯಾಗಿದ್ದೇನೆ ಎಂಬ ಸತ್ಯ ಬಾಯ್ಬಿಟ್ಟಿದ್ದಾರೆ.

SANJANA MARRIAGE copy

ಹೌದು. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ನಟಿ ಲೈಟ್ ಮೆನ್ ಸಂಘ ಮತ್ತು ಪ್ರೊಡಕ್ಷನ್ ಯೂನಿಟ್ ನ ಸದಸ್ಯರಿಗೆ ರೇಶನ್ ಕಿಟ್ ವಿತರಣೆ ಮಾಡಿದರು. ಈ ವೇಳೆ ಮಾತನಾಡುತ್ತಾ ತಮ್ಮ ಮದುವೆ ವಿಚಾರ ಬಿಚ್ಚಿಟ್ಟರು. ಕಳೆದ ಲಾಕ್ ಡೌನ್ ನಲ್ಲಿ ನನ್ನ ಮದುವೆಯಾಯ್ತು. ನಾನಾ ಕಾರಣಗಳಿಂದ ಮದುವೆ ಸಂಭ್ರಮವನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಕೆ ಆಗಲಿಲ್ಲ. ದೊಡ್ಡದಾಗಿ ಸೆಲೆಬ್ರೇಷನ್ ಮಾಡಬೇಕು ಅನ್ಕೊಂಡಿದ್ದೆ ಎಂದರು.

ಚಿತ್ರರಂಗದ ಅಣ್ಣ-ತಮ್ಮಂದಿರಿಗೆ ಊಟ ಹಾಕಿಸೋಕೆ ಆಗಲಿಲ್ಲ ಅನ್ನೋ ಕೊರಗಿದೆ. ಆದರೆ ಪ್ಯಾಂಡಮಿಕ್ ಕಾಲದಲ್ಲಿ ಕುಟುಂಬದ ಜೊತೆ ಚರ್ಚಿಸಿ ಕೈಲಾದ ಸಹಾಯ ಮಾಡೋಕೆ ನಿರ್ಧರಿಸಿದ್ದೇವೆ. ಸಂಜನಾ ಗಲ್ರಾಣಿ ಫೌಂಡೇಷನ್ ವತಿಯಿಂದ ಕೈಲಾದ ಸಹಾಯ ಮಾಡ್ತಿದ್ದೀವಿ. ಎಲ್ಲರಿಗೂ ಕಿಟ್ ಕೊಡಲು ಆಗಲಿಲ್ಲ. ಭಗವಂತ ಶಕ್ತಿ ಕೊಟ್ರೆ ಕನ್ನಡ ಇಂಡಸ್ಟ್ರಿಯೇ ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

ಬಯಲಾಗಿದ್ದ ಮದುವೆ ವಿಚಾರ:
ನಟಿ ಸಂಜನಾರನ್ನು ಪೊಲೀಸರು ಬಂಧಿಸಿದ್ದ ಸಂದರ್ಭದಲ್ಲಿ ಅವರ ಡ್ರಗ್ಸ್ ನಂಟಿನ ಜೊತೆ ಮದುವೆ ವಿಚಾರವೂ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಂಧನವಾಗುವ ಒಂದು ದಿನಕ್ಕೂ ಮೊದಲು ಬಾರಿ ನನಗಿನ್ನೂ ಮದುವೆಯಾಗಿಲ್ಲ. ನಾನು ಹುಡುಗಿ. ನನ್ನ ಬಗ್ಗೆ ಸುಳ್ಳು ವರದಿ ಮಾಡಬೇಡಿ ಎಂದು ಹೇಳಿ ಮದುವೆ ಸುದ್ದಿಗೆ ಬ್ರೇಕ್ ಹಾಕಿ ನುಣುಚಿಕೊಳ್ಳಲು ಸಂಜನಾ ಪ್ರಯತ್ನಿಸಿದ್ದರು.  ಇದನ್ನೂ ಓದಿ: ಇಬ್ಬರ ಜೊತೆ ಬಂದು ಸಂಜನಾ ಮತಾಂತರ: ಮೌಲ್ವಿ ಮಹಮ್ಮದ್ ಜಲಾಲುದ್ದಿನ್

Sanjjanaa Galrani Islam Convert 6

ಮಾಧ್ಯಮಗಳ ಎದುರು ತನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಬೇಡಿ ಎಂದು ಕಣ್ಣೀರಿಟ್ಟಿದ್ದರು. ಆದರೆ ಒಂದು ವರ್ಷದ ಹಿಂದೆಯೇ ನಟಿ ಸಂಜನಾಗೆ ಮದುವೆ ಆಗಿದೆ ಎಂಬ ಸುದ್ದಿ ಈಗ ಹರಿದಾಡಲು ಆರಂಭವಾಗಿತ್ತು. ನಟಿ ಸಂಜನಾ ಒಂದು ವರ್ಷದ ಹಿಂದೆಯೇ ಮುಸ್ಲಿಂ ಸಂಪ್ರದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪೂರಕ ಎಂಬಂತೆ ಮದುವೆಯ ಫೋಟೋ ಕೂಡ ವೈರಲ್ ಆಗಿತ್ತು. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಆಗಾಗ ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಬರುತ್ತಿದ್ದರು. ಮದುವೆಯ ಬಳಿಕ ಒಂದು ವರ್ಷದಿಂದ ಗಂಡನ ಜೊತೆಗೆ ಸಂಜನಾ ಇದ್ದರು. ಅಲ್ಲದೇ ಸಂಜನಾ ಮಾಡುತ್ತಿದ್ದ ಪಾರ್ಟಿಗಳಲ್ಲಿ ಅಜೀಜ್ ಪಾಷ ಭಾಗಿಯಾಗುತ್ತಿದ್ದರು ಎನ್ನಲಾಗಿತ್ತು.  ಇದನ್ನೂ ಓದಿ: ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?

SANJJANAA 2 1

ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಸೆ.8 ರಂದು ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ದಾಳಿದ್ದರು. ಈ ವೇಳೆ ಸಂಜನಾ ನಟಿ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಅದೇ ಅಪಾರ್ಟ್ ಮೆಂಟ್ ಅಲ್ಲಿ ಡಾಕ್ಟರ್ ವಾಸಿಸುತ್ತಿದ್ದು, ಆತನ ಜೊತೆ ಸಂಜನಾ ಸ್ನೇಹ ಇಟ್ಟುಕೊಂಡಿದ್ದಾರೆ ಎಂದು ತಿಳಿದಿತ್ತು. ಅಲ್ಲದೇ ಅವರಿಬ್ಬರು ಅಮೆರಿಕಾಗೆ ಹೋಗಿ ಮದುವೆ ಆಗಿದ್ದಾರೆ ಎಂದು ಗುಮಾನಿ ಸಹ ಕೇಳಿ ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *