CoronaDistrictsKarnatakaLatestMain Post

ಕಲಬುರಗಿಯ ಖಾಸಗಿ ಶಾಲೆಯಲ್ಲಿ 18 ವಿದ್ಯಾರ್ಥಿಗಳಿಗೆ ಕೊರೊನಾ

ಕಲಬುರಗಿ: ರಾಜ್ಯದ ಟಾಪ್ 8 ಜಿಲ್ಲೆಗಳ ಪೈಕಿ ಕಲಬುರಗಿ ಜಿಲ್ಲೆ ಸಹ ಅಗ್ರ ಸ್ಥಾನದಲ್ಲಿದೆ. ಹೀಗಾಗಿ ಆ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ರ್ಯಾಂಡಮ್ ಟೆಸ್ಟ್ ಮಾಡುತ್ತಿದ್ದು, ನಗರದ ಪ್ರತಿಷ್ಟಿತ ನಗರೇಶ್ವರ ಶಾಲೆಯ 9 ಮತ್ತು 10 ನೇ ತರಗತಿಯ 19 ವಿದ್ಯಾರ್ಥಿನಿಯರಿಗೆ ಕೊರೊನಾ ವಕ್ಕರಿಸಿದೆ.

ಕಳೆದ ನಾಲ್ಕು ದಿನಗಳಿಂದ ನಗರೇಶ್ವರ್ ಶಾಲೆಯಲ್ಲಿ ಕೊರೊನಾ ಡ್ರೈವ್ ಟೆಸ್ಟ್ ಮಾಡ್ತಿರೋ ಆರೋಗ್ಯ ಇಲಾಖೆ ವಿದ್ಯಾರ್ಥಿನಿಯರಿಗೆ ಸೋಂಕು ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 505 ಜನರ ಸ್ಯಾಂಪಲ್ ಕಲೆಕ್ಷನ್ ಮಾಡಿದೆ. ಉಳಿದ ವಿದ್ಯಾರ್ಥಿಗಳ ವರದಿ ಕೈ ಸೇರಿದ್ದು ಯಾರಿಗೂ ಸೋಂಕು ತಗುಲಿಲ್ಲ ಅಂತ ಸ್ಪಷ್ಟಪಡಿಸಿದೆ.

ಇಡೀ ಶಾಲೆಯನ್ನ ಆರೋಗ್ಯ ಸಿಲ್‍ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ಆರೋಗ್ಯ ಇಲಾಖೆ ಅನುಮತಿ ನೀಡುವ ತನಕ ಶಾಲೆ ಆರಂಭಿಸದಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.

ಸದ್ಯ ಜಿಲ್ಲೆಯಲ್ಲಿ ಇದುವರೆಗೆ 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೊನಾ ಎರಡನೇ ಅಲೇಯ ಸೋಂಕು ವಕ್ಕರಿಸಿದ್ದು, ಮುಂಬರುವ ದಿನಗಳಲ್ಲಿ ತ್ವರಿತ ಗತಿಯಲ್ಲಿ ಟೆಸ್ಟಿಂಗ್ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.

Leave a Reply

Your email address will not be published.

Back to top button