ಕಲಬುರಗಿ: ಮೃತ 60 ವರ್ಷದ ವೃದ್ಧ ಸೇರಿ ಬುಧವಾರ ಕಲಬುರಗಿ ನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.
ಕಲಬುರಗಿ ನಗರದ ರೋಗಿ ಸಂಖ್ಯೆ-848 ಸಂಪರ್ಕದಲ್ಲಿದ್ದ ಖೂಬಾ ಫ್ಲಾಟ್ ಪ್ರದೇಶದ 45 ವರ್ಷದ ಪುರುಷ(ರೋಗಿ-926) ಮತ್ತು ಮೋಮಿನಪುರ ಕಂಟೈನ್ಮೆಂಟ್ ಝೋನ್ನಲ್ಲಿದ್ದ 60 ವರ್ಷದ ವೃದ್ಧ(ಮೃತ ರೋಗಿ-927) ಕೊರೊನಾ ಸೋಂಕಿಗೆ ತುತ್ತಾಗಿರುವುದು ವರದಿಯಾಗಿದೆ.
Advertisement
Advertisement
ಮೋಮಿನಪುರ ಕಂಟೈನ್ಮೆಂಟ್ ಝೋನ್ನ ನಿವಾಸಿ 60 ವರ್ಷದ ವೃದ್ಧ ಮೇ 11ರಂದೇ ಆಸ್ಪತ್ರೆಗೆ ಬರುವ ಮುನ್ನವೆ ನಿಧನರಾಗಿದ್ದಾರೆ. ಆದರೆ ಮರಣೋತ್ತರವಾಗಿ ಕೋವಿಡ್-19 ಪರೀಕ್ಷಿಸಲಾಗಿದ್ದು, ಇಂದು ಅವರ ವರದಿ ಕೊರೊನಾ ಪಾಸಿಟಿವ್ ಎಂದು ಬಂದಿದೆ.
Advertisement
ಜಿಲ್ಲೆಯಲ್ಲಿ ಕೊರೊನಾ ಪೀಡಿತ 75 ರೋಗಿಗಳಲ್ಲಿ 7 ಮಂದಿ ನಿಧನರಾಗಿದ್ದು, 44 ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಉಳಿದಂತೆ 24 ರೋಗಿಗಳಿಗೆ ಚಿಕಿತ್ಸೆ ಮುಂದುವರೆದಿದೆ.
Advertisement
ಇಂದು ಕರ್ನಾಟಕದಲ್ಲಿ 26 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 951ಕ್ಕೆ ಏರಿದೆ. ಈವರೆಗೆ 442 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಗುಣಮುಖರಾಗಿದ್ದು, ಸಾವಿನ ಸಂಖ್ಯೆ 32 ಕ್ಕೆ ತಲುಪಿದೆ.