ಮುಂಬೈ: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ಸಾವನ್ನಪ್ಪಿದ ಬಳಿಕ ಬಾಲಿವುಡ್‍ನಲ್ಲಿ ನೆಪೋಟಿಸಂ ಕುರಿತು ಮತ್ತೊಮ್ಮೆ ಭಾರೀ ಚರ್ಚೆ ನಡೆಯುತ್ತಿದೆ. ನಟಿ ಕಂಗನಾ ರಣಾವತ್ ಹಲವು ಬಾಲಿವುಡ್‍ನ ಕೆಲ ಗಣ್ಯರ ಮೇಲೆ ವಿಮರ್ಶೆಗಳನ್ನು ಮಾಡಿದ್ದರು. ಸದ್ಯ ಕಂಗನಾ ಅವರಿಗೆ ಟೀಂ ಇಂಡಿಯಾ ಕ್ರಿಕೆಟಿಗ ಮನೋಜ್ ತಿವಾರು ಬೆಂಬಲ ನೀಡಿ ಟ್ವೀಟ್ ಮಾಡಿದ್ದಾರೆ.
Advertisement
ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್‍ನಲ್ಲಿರುವ ನೆಪೋಟಿಸಂ ಕಾರಣ ಎಂದು ಕಂಗನಾ ಆರೋಪಿಸಿದ್ದರು. ಇದಕ್ಕೆ ಬಾಲಿವುಡ್‍ನ ಹಲವರು ಬೆಂಬಲ ನೀಡಿದ್ದರು. ಸದ್ಯ ಈ ಕುರಿತು ಟ್ವೀಟ್ ಮಾಡಿರುವ ಮನೋಜ್ ತಿವಾರಿ, ಸುಶಾಂತ್ ಸಿಂಗ್ ಸಾವಿನ ಕುರಿತು ಕಂಗನಾ ಮಾಡಿರುವ ಆರೋಪಗಳನ್ನು ಟೀಕೆ ಮಾಡುತ್ತಿದ್ದಾರೆ. ಆದರೆ ಎಲ್ಲರೂ ಒಂದು ವಿಚಾರ ನೆನಪಿನಲ್ಲಿಟ್ಟಿಕೊಳ್ಳಬೇಕು. ನಾವು ಮಾಡಿದ ಕರ್ಮ ಎಂದಿಗಾದರೂ ವಾಪಸ್ ಬರುತ್ತದೆ #IndiaWantsSushantTruth ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸುಶಾಂತ್ ಕೇಸ್- ಪೊಲೀಸರಿಂದ ಕಂಗನಾ ವಿಚಾರಣೆ
Advertisement
#Kangana Vs rest will go on forever but let’s hope d focus is not shifted to other subjects. Conveniently people woke up from sleep and started attacking #Kangana only after she came out openly. Y can’t they keep their mouth shut if they cant support her #IndiaWantsSushantTruth
— MANOJ TIWARY (@tiwarymanoj) July 21, 2020
Advertisement
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮನೋಜ್ ತಿವಾರಿ, ಕಂಗನಾ ವಿರುದ್ಧ ಟೀಕೆ ಮಾಡುವವರ ವಿರುದ್ಧ ಆಕೆ ಹೋರಾಟ ಮಾಡುತ್ತಾರೆ. ಬೇರೆ ವಿಚಾರಗಳ ಬಗ್ಗೆ ಕಂಗನಾ ತಲೆಕೆಡಿಸಿಕೊಳ್ಳದೆ ಹೋರಾಟವನ್ನು ಮುಂದುವರಿಸಬೇಕಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸುಶಾಂತ್ ಸಿಂಗ್ ಫೋಟೋ ಶೇರ್ ಮಾಡಿದ್ದ ಮನೋಜ್ ತಿವಾರಿ, ಕೊನೆಗೆ ಶತ್ರುಗಳ ಮಾತುಗಳನ್ನು ಅಲ್ಲ, ಸ್ನೇಹಿತರ ನಿಶಬ್ದವನ್ನು ನೆನಪಿಟ್ಟುಕೊಳ್ಳುತ್ತೇವೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದ ಮಾತನ್ನು ಬರೆದುಕೊಂಡಿದ್ದರು. ಇದನ್ನೂ ಓದಿ: ನನ್ನ ಆರೋಪ ಸುಳ್ಳೆಂದರೆ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡ್ತೇನೆ: ಕಂಗನಾ
Advertisement
D people who al r attacking #KanganaRanaut 4 her statements r exposing themselves of who they r from inside but remember when karma hits back, then it hits back at u wit no menu, u get served what u deserve ????
So brace yourselves, it’s coming at u all ???? #IndiaWantSushantTruth
— MANOJ TIWARY (@tiwarymanoj) July 21, 2020
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ, ಬಾಲಿವುಡ್ ಸ್ಟಾರ್ ನಟ, ನಿರ್ಮಾಪಕರ ಹೆಸರನ್ನು ಉಲ್ಲೇಖಿಸಿ ಸಿನಿಮಾ ಮಾಫಿಯಾ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಲ್ಲದೇ ಸುಶಾಂತ್ ಸಿಂಗ್ ಸಾವಿಗೆ ಮೂವಿ ಮಾಫಿಯಾ ಕಾರಣ ಎಂದು ಆರೋಪಿಸಿದ್ದರು.ಇದನ್ನೂ ಓದಿ: ಸುಶಾಂತ್ ಸಾವಿನ ಬಳಿಕ ವೈರಲ್ ಆಯ್ತು ಕಂಗನಾ ವಿಡಿಯೋ