– ಬ್ಯಾರಿಕೇಡ್ ಕಿತ್ತೆಸೆದ ಬಿಜೆಪಿ ಕಾರ್ಯಕರ್ತರು
ಮಂಗಳೂರು: ದೇಶದ ಎಲ್ಲಾ ರಾಜ್ಯದ ಗಡಿಗಳನ್ನು ಓಪನ್ ಮಾಡಿ ಅಂತರ್ ರಾಜ್ಯ ಸಂಪರ್ಕಕ್ಕೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಆದೇಶ ಮಾಡಿದೆ. ಆದರೂ ಕೇರಳ ಸರ್ಕಾರ ಮಾತ್ರ ಕರ್ನಾಟಕದ ಗಡಿ ಬಂದ್ ಮಾಡಿ ಉದ್ಧಟತನ ತೋರಿದೆ.
ಮಂಗಳೂರಿನ ತಲಪಾಡಿಯಲ್ಲಿರುವ ಕೇರಳ ಗಡಿ ಚೆಕ್ ಪೋಸ್ಟ್ ನಲ್ಲಿ ಕೇರಳಕ್ಕೆ ಪ್ರವೇಶಿಸದಂತೆ ಕೇರಳ ಪೊಲೀಸರು ತಡೆಯುತ್ತಿದ್ದಾರೆ. ಕೇರಳದ ಸಿಪಿಎಂ ಸರ್ಕಾರದ ಈ ನಡೆಯಿಂದ ಗಡಿನಾಡ ಕನ್ನಡಿಗರು ಅತಂತ್ರರಾಗಿದ್ದಾರೆ. ತಕ್ಷಣ ಗಡಿಯನ್ನು ಓಪನ್ ಮಾಡಬೇಕೆಂದು ಆಗ್ರಹಿಸಿ ಕಾಸರಗೋಡು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Advertisement
Advertisement
ಈ ವೇಳೆ ಕಾಸರಗೋಡು ಬಿಜೆಪಿ ಕಾರ್ಯಕರ್ತರು ಹಾಗೂ ಕೇರಳ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರು ಬ್ಯಾರಿಕೇಡ್ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ಗಡಿ ಸಂಪೂರ್ಣ ತೆರೆದಿದ್ದು, ಕೇರಳದಿಂದ ಮಂಗಳೂರಿಗೆ ಪ್ರವೇಶಿಸಲು ಅನುಮತಿ ಇದೆ. ಆದರೆ ಕೇರಳಕ್ಕೆ ಪ್ರವೇಶಿಸಲು ಪೊಲೀಸರು ತಡೆಯೊಡ್ಡುತ್ತಿದ್ದಾರೆ. ಕೇರಳ ಸರ್ಕಾರ ತಕ್ಷಣ ಎಲ್ಲಾ ಗಡಿಯನ್ನು ತೆರೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.