– ಬಹಳಷ್ಟು ಜನರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ
– ಸೆಲೆಬ್ರಿಟಿಯಾಗಿ ಎಷ್ಟುಂತ ತಪ್ಪು ಮಾಡ್ತೀರಿ..?
– ಸಿಸಿಟಿವಿ ದೃಶ್ಯ ಡಿಲೀಟ್ ಮಾಡಿದ್ದು ಯಾಕೆ..?
ಬೆಂಗಳೂರು: ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕಿಡಿಕಾರಿದ್ದಾರೆ.
ದರ್ಶನ್ ವೇಟರ್ ಮೇಲೆ ಹಲ್ಲೆ ಮಾಡಿರುವ ಆರೋಪ ಸಂಬಂಧ ಮತ್ತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ ಇಲ್ಲ. ಆದ್ರೆ ತಪ್ಪನ್ನು ತಪ್ಪು ಅಂತ ಒಪ್ಪಿಕೊಳ್ಳಬೇಕು. ಎಷ್ಟು ಅಂತ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತೀರಾ..? ಓರ್ವ ಸೆಲೆಬ್ರಿಟಿಯಾಗಿದ್ದುಕೊಂಡು ನಿರ್ದೇಶಕ, ನಿರ್ಮಾಪಕ, ವಾಚ್ ಮ್ಯಾನ್ ಗೆ ಅಥವಾ ಸಾಮಾನ್ಯ ನಾಗರಿಕನಿಗೆ ಹೊಡೆಯುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಜುಲೈ 3ರಂದು ಗೋಪಾಲ್ ರಾಜ್ ಅರಸು(ಪಪ್ಪು) ಅವರಿಗೆ ಸೋಶಿಯಲ್ ನಲ್ಲಿ ಹೊಡೆದಿದ್ದಾರೆ. ನಿಮ್ಮ ತೋಟದಲ್ಲಿದ್ದ ವಾಚ್ ಮ್ಯಾನ್ ಗೂ ಒದೆ ಬಿದ್ದಿದೆ. ಅವನು ಕೆಲಸನೇ ಬಿಟ್ಟು ಹೋಗಿದ್ದಾನೆ. ಏನಿದು ಇಷ್ಟೊಂದು ಹೊಡೆಯುವುದು, ಇದೇನು ಪಾಳೇಗಾರಿಕೆನಾ..? ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ ಎಂದು ದರ್ಶನ್ ವಿರುದ್ಧ ಇಂದ್ರಜಿತ್ ಕಿಡಿಕಾರಿದರು.
Advertisement
Advertisement
ಅರುಣಾ ಕುಮಾರಿ ವಿಚಾರ, ಸಂದೇಶ್ ನಾಗರಾಜ್ ಹೋಟೆಲ್ ನಲ್ಲಿ ಜಗಳದ ಬಗ್ಗೆ ಮಾತಾಡಿದ್ದೆ. ಆ ಬಳಿಕ ದರ್ಶನ್ ಅವರು, ಹೌದು ಹೊಡೆದೆ. ಕೋಪ ಬಂತು ಹೊಡೆದಿದ್ದು ನಿಜ ಅಂದ್ರು. ಈ ಘಟನೆಗೆ ನಾನು ಬದ್ಧ, ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಕೊಡ್ತೀನಿ. ಸದ್ಯ ಆ ಹುಡುಗ ಕೆಲಸ ಕಳೆದುಕೊಂಡಿದ್ದಾನೆ. ಬರೇ ಇದೊಂದೆ ಅಲ್ಲ, ಇಂತಹ ಪ್ರಕರಣಗಳು ತುಂಬಾ ಇದ್ದಾವೆ ಎಂದು ಹೇಳಿದರು. ಇದನ್ನೂ ಓದಿ: ‘ಏನಯ್ಯಾ ದರ್ಶನ್ಗೆ ತಲೆ ಇಲ್ವೇನಯ್ಯಾ, ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ’
ನಾನು ಒಂಟಿ ಸಲಗ, ನಾನು ಮಾತಾಡ್ತೀನಿ. ನಂಗೆ ಕೆಲ ಮಾಹಿತಿಗಳು ಬರುತ್ತವೆ. ಇನ್ನೂ ಕೆಲವು ವಿಚಾರ ತಿಳಿದ್ರೆ ನೀವು ಶಾಕ್ ಆಗ್ತೀರಿ. ಘಟನೆ ನಡೆದ ಸಮಯ, ಸ್ಥಳ ಎಲ್ಲವನ್ನೂ ಹೇಳಿದ್ದೀನಿ. ಪೊಲೀಸರು ಏನ್ ಮಾಡ್ತಾರೋ ನೋಡೋಣ. ನಾನೊಬ್ಬ ಪತ್ರಕರ್ತ, ನಾನು ಇನ್ವೆಷ್ಟಿಗೇಷನ್ ಮಾಡ್ತೀನಿ. ಹರ್ಷ, ಪಾಪಣ್ಣ ಮೆಲಂಟಾ, ದರ್ಶನ್, ಇಬ್ಬರು ಹುಡುಗಿಯರು, ರಾಕೇಶ್, ಪವಿತ್ರ ಗೌಡ ಕೂಡ ಇದ್ದರು ಎಂದು ಇಂದ್ರಜಿತ್ ಮತ್ತೆ ಹೇಳಿದರು. ಇದನ್ನೂ ಓದಿ: ಸಣ್ಣ ಗಲಾಟೆ ನಡೆದಿದ್ದು ನಿಜ, ಆದ್ರೆ ದರ್ಶನ್ ಹೊಡೆದಿಲ್ಲ: ಸಂದೇಶ್ ನಾಗರಾಜ್ ಪುತ್ರ
ಜೂನ್ 24 ಮತ್ತು 25 ರಂದು ಲಾಕ್ ಡೌನ್ ಇತ್ತು. ಈ ಸಮಯದಲ್ಲಿ ಘಟನೆ ನಡೆದಿದೆ. ಬಡವರಿಗೆ ಒಂದು ನ್ಯಾಯ, ಸೆಲೆಬ್ರಿಟಿಗೆ ಒಂದು ನ್ಯಾಯನಾ..? ಇನ್ನೂ ತುಂಬಾ ವಿಚಾರಗಳಿವೆ ಅದರ ಜೊತೆಗೆ ಮತ್ತೆ ಬರುತ್ತೇನೆ. ಫೋಟೋ, ವೀಡಿಯೋಗಳು ಕೂಡ ನನ್ನ ಬಳಿ ಇವೆ. ಪೊಲೀಸರು ಕೇಳಿದ್ರೆ ಕೊಡ್ತೀನಿ. ಆಗಾಗ ಈ ರೀತಿಯ ಘಟನೆಗಳು ನಡೆದು ಅಲ್ಲಲ್ಲೆ ಸೆಟ್ಲ್ ಮೆಂಟ್ ಗಳು ಆಗುತ್ತಿವೆ ಎಂದು ಮತ್ತೆ ಇಂದ್ರಜಿತ್ ಆರೋಪಿಸಿದರು.
ಡ್ರಗ್ಸ್ ವಿಚಾರದಲ್ಲಿ ಕೆಲ ಸೆಲೆಬ್ರಿಟಿಗಳು ತಪ್ಪಿಸಿಕೊಂಡರು. ಹೋಟೆಲ್ ನಲ್ಲಿ ಏಟು ತಿಂದ ಗಂಗಾಧರ್ನ ಕೆಲಸದಿಂದ ಬಿಡಿಸಿದ್ರು. ಈಗ ದರ್ಶನ್ ಸಣ್ಣ ಗಲಾಟೆ ಅಂತ ಒಪ್ಪಿಕೊಂಡಿದ್ದಾರೆ. ಹಿಂದುಳಿದವರಿಗೆ ಅನ್ಯಾಯ ಆಗ್ತಿದೆ. ಇಂದಿನ ಕಾಲದಲ್ಲೂ ಅದೇ ಅನ್ಯಾಯ ಆಗ್ತಿದೆ. ಅದಕ್ಕೆ ದಲಿತ ಅಂತಾ ಹೇಳಿದೆ. ಬಡವರಿಗೆ, ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ನೀವೆಲ್ಲಾ ಸೇರಿದ್ದೀರಿ, ನಿಮ್ಮ ಜಾತಿಯನ್ನು ನಾವು ಕೇಳ್ತೀವಾ – ಇಂದ್ರಜಿತ್ಗೆ ದರ್ಶನ್ ತಿರುಗೇಟು
ಸಿಡಿ ಲೇಡಿ, ಅರುಣಾ ಕುಮಾರಿ ಇಬ್ಬರ ವಿಚಾರನೂ ನೋಡಿ, ಇಬ್ಬರಿಗೂ ಅನ್ಯಾಯ ಆಗ್ತಿದೆ. ನನ್ನ ಪ್ರಕಾರ ದರ್ಶನ್ ಹಲ್ಲೆ ಮಾಡಿ ಮೂರು ಗಂಟೆ ರಾತ್ರಿ ಸಂಧಾನ ಮಾಡಿದ್ರು. ಸಂದೇಶ್ ನಾಗರಾಜು, ಮಧ್ಯ ಪ್ರವೇಶ ಮಾಡಿ ದರ್ಶನ್ ರನ್ನು ಹೊರ ದಬ್ಬಿದ್ರು. ಇಲ್ಲಿವರೆಗೂ ಅವರಿಬ್ಬರು ಮಾತಾಡ್ತಿಲ್ಲ. ಹೊಟೆಲ್ ನ ಇಡೀ ಸಿಬ್ಬಂದಿ, ದರ್ಶನ್ ವಿರುದ್ಧ ಗಲಾಟೆ ಮಾಡಿದರು ಎಂದರು.
ಇದು ಮೊದಲನೇಯದಲ್ಲ, ಚಿತ್ರ ರಂಗದ ಸಾಕಷ್ಟು ಜನರಿಗೆ ಈ ಅನುಭವ ಆಗಿದೆ. ಬಹಳಷ್ಟು ಜನರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ. ಹೋಟೆಲ್ ನ ಹಾರ್ಡ್ ಡಿಸ್ಕ್ ತೆಗೆದ್ರೆ ಎಲ್ಲವು ಹೊರಬರುತ್ತೆ. ಹಲ್ಲೆಗೊಳಾದ ಯುವಕ ಗಂಗಾಧರ್ ಕನ್ನಡಿಗರು. ಸಮಯ ನೋಡ್ಕೊಂಡು, ಖಂಡಿತ ನಾನು ಎಲ್ಲವನ್ನೂ ಬಹಿರಂಗ ಪಡಿಸ್ತೀನಿ. ನಮ್ಮದೇ ಆದ ತನಿಖಾ ತಂಡ ಇದೆ, ಆ ಮೂಲಕ ನಮಗೆ ಬರುತ್ತೆ ಎಂದು ಹೇಳಿದರು.
ಯಾಕೆ ಹೋಟೆಲ್ ನ ಸಿಸಿಟಿವಿ ಡಿಲೀಟ್ ಮಾಡ್ತಿರಿ. 2 ತಿಂಗಳು, ಕಾಲ ಡಿಲೀಟ್ ಮಾಡಬಾರದು ಅಂತಾ ನಿಯಮ ಇದೆ. ಪತ್ರಕರ್ತನಾಗಿ ನಾನು ಜನರಿಗೆ ಮಾಹಿತಿ ನೀಡಿದ್ದೇನೆ. ಮುಂದಿನದ್ದು ಪೊಲೀಸರ ಕೆಲಸ. ನಾವು ಹೋಗಿ ತನಿಖೆ ಮಾಡೋಕೆ ಆಗಲ್ಲ. ಪೊಲೀಸರು ತನಿಖೆ ಆಗಲಿ. ಮುಂದೆ ಯಾವಾಗ ಏನು ಕೊಡಬೇಕು ಅದು ತರ್ತಿನಿ. ಮೈಸೂರು ಪೊಲೀಸರು ಏನ್ ಮಾಡ್ತಾರೆ ನೋಡೋಣ ಎಂದು ತಿಳಿಸಿದ್ದಾರೆ.