Connect with us

Bengaluru City

ಕರ್ನಾಟಕದಲ್ಲಿ ದಾಖಲೆಯ 4,764 ಮಂದಿಗೆ ಸೋಂಕು – 55 ಸೋಂಕಿತರು ಬಲಿ

Published

on

– ಒಟ್ಟು ಸೋಂಕಿತರ ಸಂಖ್ಯೆ 75,833ಕ್ಕೆ ಏರಿಕೆ
– 618 ಮಂದಿಗೆ ಐಸಿಯು ಚಿಕಿತ್ಸೆ

ಬೆಂಗಳೂರು: ರಾಜ್ಯದಲ್ಲಿಇಂದು ಇಲ್ಲಿಯವರೆಗಿನ ಅತಿ ಹೆಚ್ಚು 4,764 ಮಂದಿಗೆ ಸೋಂಕು ಬಂದಿದ್ದು,  55 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು 1,780 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು 2,050 ಮಂದಿಗೆ ಸೋಂಕು ಬಂದಿದ್ದರೆ 15 ಮಂದಿ ಮೃತಪಟ್ಟಿದ್ದಾರೆ. ಉಡುಪಿಯಲ್ಲಿ 281, ಬೆಳಗಾವಿಯಲ್ಲಿ 219, ಕಲಬುರಗಿಯಲ್ಲಿ 175, ದಕ್ಷಿಣ ಕನ್ನಡದಲ್ಲಿ 162 ಮಂದಿಗೆ ಸೋಂಕು ದೃಢಪಟ್ಟಿದೆ.

ಇಲ್ಲಿಯವರೆಗೆ ಒಟ್ಟು 75,833 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 47,069 ಸಕ್ರಿಯ ಪ್ರಕರಣಗಳಿದ್ದು, 27,239 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಒಟ್ಟು 1,519 ಮಂದಿ ಮೃತಪಟ್ಟಿದ್ದು, 618 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ 812, ಬೀದರ್‌ 186, ಧಾರವಾಡ 135, ಉತ್ತರ ಕನ್ನಡ 96, ಚಿಕ್ಕಬಳ್ಳಾಪುರ 92 ಮಂದಿ ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ 336, ಕಲಬುರಗಿ 37, ಧಾರವಾಡ 35, ಬಳ್ಳಾರಿ 21, ಹಾಸನ 18, ಮಂಡ್ಯ ಮತ್ತು ರಾಯಚೂರಿನಲ್ಲಿ 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ ಚೇತರಿಕೆ ಪ್ರಮಾಣ ಶೇ.35.92 ಇದ್ದರೆ ಮರಣ ಪ್ರಮಾಣ ಶೇ.2 ರಷ್ಟಿದೆ. ಇಂದು ಒಟ್ಟು 48,140 ಮಂದಿಗೆ ಪರೀಕ್ಷೆ ನಡೆಸಿದ್ದು ಒಟ್ಟು ರಾಜ್ಯದಲ್ಲಿ 11,12,874 ಮಂದಿಗೆ ಪರೀಕ್ಷೆಯನ್ನು ನಡೆಸಲಾಗಿದೆ.

ಬೆಂಗಳೂರಿನಲ್ಲಿ ಇಂದಿನ 2,050 ಸೇರಿ ಒಟ್ಟು 36,993 ಮಂದಿಗೆ ಸೋಂಕು ಬಂದಿದೆ. ಇಂದು 812 ಮಂದಿ ಬಿಡುಗಡೆಯಾಗಿದ್ದು ಒಟ್ಟು 8,288 ಬಿಡುಗಡೆಯಾಗಿದ್ದಾರೆ. 27,969 ಸಕ್ರಿಯ ಪ್ರಕರಣಗಳಿದ್ದು ಒಟ್ಟು 735 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *