ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕೋವಿಡ್ ವ್ಯಾಕ್ಸಿನ್ ಸೆಂಟರ್ ಗಳತ್ತ ಮುಗಿಬಿದ್ದಿದ್ದಾರೆ. ಆದರೆ ನೂರಾರು ಜನರು ದಿನಗಟ್ಟಲೇ ಕಾದರೂ ಜನರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ.
Advertisement
ಕರಾವಳಿ ಜಿಲ್ಲೆಗಳಲ್ಲಿ ಕರೋನಾ ಸೋಂಕಿನ ಪ್ರಮಾಣ ಏರಿಕೆಯತ್ತ ಸಾಗಿದೆ. ಇತ್ತ ಗೋವಾ ಭಾಗದ ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಭಾಗದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಇದೀಗ ಏರಿಕೆಯತ್ತ ಸಾಗಿದೆ. ಇಂದು 41 ಜನರಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದ್ದು, ಇಬ್ಬರು ಬಲಿಯಾಗಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ
Advertisement
Advertisement
ಇಡೀ ಜಿಲ್ಲೆಯಲ್ಲಿ ಇಂದು 3830 ವ್ಯಾಕ್ಸಿನ್ ಡೋಸ್ ಮಾತ್ರಬಂದಿದೆ. ಭಟ್ಕಳ, ಸಿದ್ದಾಪುರ, ಕುಮಟಾ, ದಾಂಡೇಲಿ ಭಾಗದಲ್ಲಿ ಎರಡು ದಿನದಿಂದ ವ್ಯಾಕ್ಸಿನ್ ಖಾಲಿಯಾಗಿ ದೂರದೂರಿನಿಂದ ಬಂದ ಜನರು ವ್ಯಾಕ್ಸಿನ್ ಸಿಗದೇ ಮರಳುವಂತಾಗಿದೆ. ಕಾರವಾರದಲ್ಲೂ ಸಹ ಇಡೀ ಕೇಂದ್ರಕ್ಕೆ ಇಂದು 300 ಡೋಸ್ ಮಾತ್ರ ಲಭ್ಯವಿದ್ದು, ಕೆಲವೇ ಗಂಟೆಯಲ್ಲಿ ಖಾಲಿಯಾಗಿದ್ದರಿಂದ ವ್ಯಾಕ್ಸಿನ್ ಸೆಂಟರ್ ನಲ್ಲಿ ನೂರಾರು ಜನರು ಕಾದು ಮರಳಿ ಹೋಗುವಂತಾಗಿದೆ. ಇದನ್ನೂ ಓದಿ: ಹೊಸ ಸ್ವರೂಪ ಪಡೆದ ಕೊರೊನಾ-ಕಣ್ಣೀರಿನಿಂದಲೂ ಸೋಂಕು ಹಬ್ಬುತ್ತೆ, ಎಚ್ಚರ..!