ನವದೆಹಲಿ: ನಿರ್ಮಾಪಕ ಕರಣ್ ಜೋಹರ್ಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ವಾಪಸ್ ಪಡೆಯಬೇಕೆಂದು ನಟಿ ಕಂಗನಾ ರಣಾವತ್ ಮನವಿ ಮಾಡಿದ್ದಾರೆ.
ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಬಾಲಿವುಡ್ ಸ್ವಜನಪಕ್ಷಪಾತದ ಬಗ್ಗೆ ಧ್ವನಿ ಎತ್ತುತ್ತಿರುವ ಕಂಗನಾ ಈಗ ನೇರವಾಗಿಯೇ ಕರಣ್ ಜೋಹರ್ ವಿರುದ್ಧ ಸಿಡಿದೆದ್ದಿದ್ದಾರೆ.
Advertisement
Advertisement
ಟ್ವೀಟ್ ಮಾಡಿರುವ ಕಂಗನಾ, ಕರಣ್ ಜೋಹರ್ ಅವರಿಗೆ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ವಾಪಸ್ ಪಡೆದುಕೊಳ್ಳಬೇಕು. ಅಂತರಾಷ್ಟ್ರೀಯ ವೇದಿಕೆಯಲ್ಲೇ ಸಿನಿಮಾ ರಂಗವನ್ನು ತೊರೆಯುವಂತೆ ನನಗೆ ಬೆದರಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ವಿರುದ್ಧ ಪಿತೂರಿ ನಡೆಸಿ ಅವರ ವೃತ್ತಿಜೀವನವನ್ನು ನಾಶಮಾಡಲು ಪ್ರಯತ್ನಿಸಿದ್ದಾರೆ. ಉರಿ ಹೋರಾಟದ ಸಮಯದಲ್ಲಿ ಪಾಕಿಸ್ತಾನ ಪರವಾಗಿದ್ದ ಕರಣ್ ಈಗ ರಾಷ್ಟ್ರ ವಿರೋಧಿ ಸಿನಿಮಾ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.
Advertisement
Advertisement
ನೆಟ್ ಫ್ಲಿಕ್ಸ್ನಲ್ಲಿ ತೆರೆ ಕಂಡಿರುವ ಗುಂಜನ್ ಸಕ್ಸೆನಾ ಸಿನಿಮಾವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ನಿರ್ಮಿಸಿದೆ. ಈ ಚಿತ್ರದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಚಿತ್ರದ ಬಗ್ಗೆ ಸೌಮ್ಯದೀಪ್ತ ಎಂಬವರು, ಫ್ಲೈಟ್ ಲೆಫ್ಟಿನೆಂಟ್ ಶ್ರೀ ವಿದ್ಯಾ ರಾಜನ್ ಗುಂಜನ್ ಸಕ್ಸೆನಾ ಅವರ ಜೊತೆ ಸಹಪಾಠಿ ಆಗಿದ್ದರು. ಕಾರ್ಗಿಲ್ ಮೇಲೆ ವಿಮಾನ ಹಾರಿಸಿದ ಮೊದಲ ಮಹಿಳೆ ಶ್ರೀವಿದ್ಯಾ ಆಗಿದ್ದ ಗುಂಜನ್ ಸಕ್ಸೆನಾ ಅಲ್ಲ. ಗುಂಜನ್ ಸಕ್ಸೆನಾ ಸಿನಿಮಾದಲ್ಲಿ ವಿಷಯಗಳನ್ನು ತಿರುಚಲಾಗಿದೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿ ಕರಣ್ ಜೋಹರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರಾವಳಿಯ ಪತ್ರೋಡೆ ಸವಿದ ನಟಿ ಕಂಗನಾ ಫಿದಾ
My issue is not Karan Johar and his minions army,my issue is their prejudices,harassment,humiliation of outsiders/small town people and abuse of power, my issue is not their mediocrity but their insecurity with exceptional talent, I am only trying to awaken them to our pain????
— Kangana Ranaut (@KanganaTeam) August 17, 2020
ಕರಣ್ ಜೋಹರ್ ಮತ್ತು ಕಂಗನಾ ರಣಾವತ್ ಅವರಿಗೆ ಈ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪುರಸ್ಕರಿಸಿದ್ದರು.