Bengaluru CityCinemaKarnatakaLatestMain PostSandalwood

ಕನ್ನಡಿಗಳೆಂದು ತಮಿಳುನಾಡಿನಲ್ಲಿ ನನ್ನ ಸಹಾಯಕ್ಕೆ ಯಾರೂ ಬರ್ತಿಲ್ಲ: ವಿಜಯಲಕ್ಷ್ಮಿ

– ರಜನಿ, ಕಮಲ್ ಹಾಸನ್ ಯಾಕೆ ನಂಗೆ ಸಹಾಯ ಮಾಡ್ತಿಲ್ಲ?
– ಶಿಮಾನ್ ಮಾತಿನಿಂದಲೇ ಯಾವ ನಟರೂ ಸಹಾಯಕ್ಕೆ ಮುಂದಾಗಿಲ್ಲ

ಬೆಂಗಳೂರು: ನಟಿ ವಿಜಯಲಕ್ಷ್ಮಿ, ಇದೀಗ ತಮಿಳರ ಅಂಧಕಾರದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಅವರ ಅಕ್ಕ ಅನಾರೋಗ್ಯದಿಂದ ಬಳಲುತ್ತಿದ್ದರೂ ಯಾರೂ ಸಹಾಯಕ್ಕೆ ಬರುತ್ತಿಲ್ಲ ಎಂದು ಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆಲ್ಲ ಕಾರಣ ಶಿಮಾನ್: ಈ ಕುರಿತು ವೀಡಿಯೋ ಮೂಲಕ ಮಾತನಾಡಿರುವ ವಿಜಯಲಕ್ಷ್ಮಿ, ಕೊರೊನಾ ಸಂದರ್ಭದಲ್ಲಿ ಉಷಾ ಅವರ ಆರೋಗ್ಯದಲ್ಲಿ ತುಂಬಾ ಏರುಪೇರಾಗಿದೆ. ಅವರಿಗೆ ಚಿಕಿತ್ಸೆ ಕೊಡಿಸಲು ನನ್ನಿಂದ ಆಗುತ್ತಿಲ್ಲ. ಯಾವುದೇ ನಟರು ಸಹ ಸಹಾಯಕ್ಕೆ ಬರುತ್ತಿಲ್ಲ. ಇದಕ್ಕೆಲ್ಲ ಕಾರಣ ಶೀಮಾನ್, ಈ ಸಂಘಟನೆ ಕಟ್ಟಿಕೊಂಡು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ. ಕನ್ನಡಿಗರಿಗೆ ಅವಹೇಳನ ಮಾಡುತ್ತಿದ್ದಾನೆ. ನಾನು ಸಹ ಕನ್ನಡದವಳು ಎನ್ನುವ ಕಾಣಕ್ಕೆ ತಮಿಳುನಾಡಿನಲ್ಲಿ ಯಾರೂ ಸಹಾಯಕ್ಕೆ ಬರುತ್ತಿಲ್ಲ. ಅಕ್ಕ ಉಷಾಗೆ ಚಿಕಿತ್ಸೆ ಕೊಡಿಸಲು ಯಾವ ತಮಿಳು ನಟರು ಸಹ ಸಹಾಯ ಮಾಡುತ್ತಿಲ್ಲ. ಇದಕ್ಕೆಲ್ಲ ಕಾರಣ ಶಿಮಾನ್ ಎಂದು ಹೇಳಿದ್ದಾರೆ.

ಕನ್ನಡಿಗರಿಗೆ ಹಿಂಸೆ ನೀಡ್ತಿದ್ದಾನೆ:
ರಜಿಕಾಂತ್ ಅವರು ಹೊಸ ಪಕ್ಷ ಕಟ್ಟಲು ಮುಂದಾದಾಗ ಸಹ ಇವರು ಕನ್ನಡದವರು ಎಂದು ಹೇಳಿ ಟೀಕಿಸಿ, ರಾಜಕೀಯ ಪ್ರವೇಶಿಸುವುದನ್ನು ಶಿಮಾನ್ ತಡೆದ. ಹೀಗೆ ಕನ್ನಡಿಗರಿಗೆ ಹಿಂಸೆ ನೀಡುತ್ತಿದ್ದಾನೆ. ಆದರೆ ಕರ್ನಾಟಕದಲ್ಲಿ ಯಾವುದೇ ಹೋರಾಟಗಾರರು ಈ ರೀತಿ ಮಾಡುತ್ತಿಲ್ಲ, ಉದಾರಿಗಳಾಗಿದ್ದಾರೆ. ಆದರೆ ಇಲ್ಲಿ ರಜನಿಕಾಂತ್ ಇತ್ತೀಚೆಗೆ ತಮಿಳುನಾಡು ಸಿಎಂ ಫಂಡ್‍ಗೆ 1.5 ಕೋಟಿ ರೂ. ನೀಡಿದರೂ ಕೇವಲ ಒಂದೂವರೆ ಕೋಟಿ ಕೊಟ್ಟಿದಿರಾ ಎಂದು ಟೀಕಿಸಿದರು. ನಾನೂ ಸಹ 2 ವರ್ಷ ಅವನ ಜೊತೆ ಚಿತ್ರಹಿಂಸೆ ಅನುಭವಿಸಿದ್ದೇನೆ, ಕನ್ನಡದವಳು ಎಂದು ತಿರಸ್ಕರಿಸುತ್ತಿದ್ದ ಎಂದು ಶಿಮಾನ್ ವಿರುದ್ಧ ಕಿಡಿಕಾರಿದ್ದಾರೆ.

ಸುದೀಪ್ ಸಹಾಯ ಮಾಡಿಲ್ಲವೇ?
ನಾನು ಆತ್ಮಹತ್ಯೆಗೆ ಯತ್ನಿಸಿದಾಗ ಸಹ ಇವರು ಕರ್ನಾಟಕದವರು, ಕನ್ನಡದವರೇ ಇವರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದರು. ಈಗಲೂ ಅದೇ ನಡೆಯುತ್ತಿದೆ, ಉಷಾ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಚಿಕಿತ್ಸೆ ನೀಡಲು ಹಿಂದೆ ಮುಂದೆ ನೋಡುತ್ತಿದ್ದಾರೆ, ತಾರತಮ್ಯ ಮಾಡುತ್ತಿದ್ದಾರೆ. ಅಲ್ಲದೆ ನಾನು ಕರ್ನಾಟಕದವಳು ಎಂಬ ಕಾರಣಕ್ಕೆ ತಮಿಳಿನ ಯಾವ ನಟರೂ ಸಹಾಯ ಮಾಡುತ್ತಿಲ್ಲ. ರಜನಿ ಹಾಗೂ ಕಮಲ್ ಹಾಸನ್ ಅವರು ಒಂದು ಲಕ್ಷ ನೀಡುವುದು ಕಷ್ಟವೇ, ನಟ ಸುದೀಪ್ ಅವರು ಎಲ್ಲರಿಗೂ ಸಹಾಯ ಮಾಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಎಲ್ಲ ನಟರೂ ಸರ್ಕಾರಕ್ಕೆ ಹಣ ನೀಡಿದ್ದಾರೆ, ಆದರ ನಾನು ಕಷ್ಟದಲ್ಲಿದ್ದಾಗ ಸಹಾಯಕ್ಕೆ ಬರುತ್ತಿಲ್ಲ. ಇದಕ್ಕೆ ಶಿಮಾನ್ ಕಾರಣ, ನಾನು ಕನ್ನಡದವಳು ಕರ್ನಾಟಕದವಳು ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ರಜನಿಯವರನ್ನು ರಾಜಕೀಯಕ್ಕೆ ಬರದಂತೆ ಮಾಡಿದ ರೀತಿ ನಿಮ್ಮನ್ನೂ ಕರ್ನಾಟಕಕ್ಕೆ ಓಡಿಸುತ್ತೇವೆ ಎನ್ನುತ್ತಿದ್ದಾರೆ.

ಕರ್ನಾಟಕದಲ್ಲೇ ಇರುತ್ತೇನೆ:
ಕರ್ನಾಟಕದವರು ಈ ರೀತಿ ಯಾವತ್ತೂ ಮಾಡಿಲ್ಲ, ತಮಿಳುನಾಡಿವರು ಮಾನವೀಯತೆ ಕಳೆದುಕೊಳ್ಳಬಾರದು ಎಂದು ನಾನು ಮನವಿ ಮಾಡಿದ್ದೇನೆ. ಆದರೂ ಈ ವರೆಗೆ ತಮಿಳಿನ ಯಾವುದೇ ನಟ ಸಹಾಯಕ್ಕೆ ಬಂದಿಲ್ಲ. ಇದಕ್ಕೆಲ್ಲ ಕಾರಣ ಶಿಮಾನ್, ಅವನೇ ಎಲ್ಲರಿಗೂ ಇದೇ ರೀತಿ ಹೇಳಿದ್ದಾನೆ. ರಜನಿಕಾಂತ್ ಅವರಿಗೂ ಇದೇ ರೀತಿ ಮಾಡುತ್ತಿದ್ದಾರೆ. ಆದರೆ ರಜನಿಕಾಂತ್ ಶ್ರೀಮಂತರು, ಕೈಲಾದಷ್ಟು ಸಹಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ ನಾನು ಬಡ ಹೆಣ್ಣು ಮಗಳು, ಹೀಗಾಗಿ ಸಮಸ್ಯೆಯಾಗುತ್ತಿದೆ ಎಂದಿದ್ದಾರೆ. ನಾನು ಇನ್ನು ತಮಿಳಿನಲ್ಲಿ ಕೆಲಸ ಮಾಡಲ್ಲ, ಕರ್ನಾಟಕದಲ್ಲೇ ಕನ್ನಡದವಳಾಗಿ ಇರುತ್ತೇನೆ. ಈ ವಾರದಲ್ಲೇ ಹಿರಿಯರ ಜೊತೆ ಮಾತನಾಡಿ ಕರ್ನಾಕದಲ್ಲೇ ಇರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

https://www.youtube.com/watch?v=05pDFO3PF3M

Leave a Reply

Your email address will not be published.

Back to top button