– ವೈಯುಕ್ತಿಕ ರನ್ ಗಳಿಕೆ ಮುಖ್ಯವಲ್ಲ
ನವದೆಹಲಿ: ಐಪಿಎಲ್ 2020ರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಧೋನಿ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Advertisement
ರಾಜಸ್ಥಾನ್ ರಾಯಲ್ಸ್ ನೀಡಿದ್ದ 217 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು. ಪಂದ್ಯದ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಗಂಭೀರ್, 217 ರನ್ ಬೆನ್ನಟ್ಟುವ ವೇಳೆ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವುದಾ? ಆತನ ನಿರ್ಧಾರ ನನಗೆ ಅಚ್ಚರಿ ತಂದಿತ್ತು. ಇದು ನಾಯಕತ್ವ ಎನಿಸಿಕೊಳ್ಳುವುದಿಲ್ಲ. ಸೋಲುಂಡರೂ ಕನಿಷ್ಠ ಮುಂದೆ ನಿಂತು ಮುನ್ನಡೆಸಬೇಕಿತ್ತು. ಫಾಫ್ ಡುಫ್ಲೆಸಿಸ್ ಮಾತ್ರ ಏಕಾಂಗಿ ಹೋರಾಟ ನಡೆಸಿದ್ದರು ಎಂದು ಗಂಭೀರ್ ಹೇಳಿದ್ದಾರೆ. ಇದನ್ನೂ ಓದಿ: ಸ್ಟೇಡಿಯಂ ಹೊರಕ್ಕೆ ಧೋನಿ ಸಿಕ್ಸರ್- ಚೆಂಡನ್ನು ಮನೆಗೆ ಕೊಂಡೊಯ್ದ ಲಕ್ಕಿ ಮ್ಯಾನ್
Advertisement
Advertisement
ಅಂತಿಮ ಓವರಿನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವುದು ಮುಖ್ಯವಲ್ಲ. ಅದು ಕೇವಲ ವೈಯುಕ್ತಿಕ ರನ್ ಗಳಿಕೆ ಅಷ್ಟೇ. ಧೋನಿ ಸ್ಥಾನದಲ್ಲಿ ಬೇರೆ ಯಾವುದೇ ತಂಡದ ನಾಯಕ ಸ್ಲೋ ಬ್ಯಾಟಿಂಗ್ ಮಾಡಿದ್ದರೇ ಭಾರೀ ಚರ್ಚೆಗೆ ಕಾರಣವಾಗುತ್ತಿತ್ತು. ಋತುರಾಜ್, ಕರ್ರನ್, ಜಾದವ್, ಫಾಫ್ ಡುಪ್ಲೆಸಿಸ್, ವಿಜಯ್ ಈ ಎಲ್ಲರ ಆಟಗಾರರು ಧೋನಿಗಿಂತ ಉತ್ತಮ ಎಂದು ಅಂಗೀಕರಿಸಿದಂತಿದೆ.
Advertisement
“Makes no sense to me”
On #T20TimeOut, Gautam Gambhir slams MS Dhoni’s decision to bat at No. 7 in the chase against #RR #RRvCSK | #IPL2020 | https://t.co/jNVlyYIXXi pic.twitter.com/3GN78ODavi
— ESPNcricinfo (@ESPNcricinfo) September 23, 2020
ಚೆನ್ನೈ ಇನ್ನಿಂಗ್ಸ್ ನ 6ನೇ ಓವರ್ ವೇಳೆಗೆ ಅವರು ಪಂದ್ಯವನ್ನು ಸಂಪೂರ್ಣವಾಗಿ ಕೈಬಿಟ್ಟಂತೆ ಕಾಣುತ್ತಿತ್ತು. ಧೋನಿ ಅಂತಿಮ ಎಸೆತದವರೆಗೂ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಮುಂದಿನ ಪಂದ್ಯಗಳಲ್ಲಿಯಾದರೂ ಮುಂದೇ ನಿಂತು ತಂಡವನ್ನು ಮುನ್ನಡೆಸಲು ಪ್ರಯತ್ನಿಸಬೇಕಿದೆ. ಆಗ ತಂಡಕ್ಕೆ ಸ್ಫೂರ್ತಿಯಾದರೂ ಲಭಿಸುತ್ತದೆ ಎಂದು ಗಂಭಿರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾವಿ ಪತಿ ಪ್ರಶಸ್ತಿ ಪಡೆಯುತ್ತಿದ್ದಂತೆ ಟಿವಿ ಎದುರೇ ಚಹಲ್ ಪ್ರೇಯಸಿ ಡ್ಯಾನ್ಸ್
ಪಂದ್ಯದ ಸೋಲಿನ ಬಳಿಕ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಕುರಿತು ಪ್ರತಿಕ್ರಿಯೆ ನೀಡಿದ ಧೋನಿ, ಸರಿ ಸುಮಾರು ಒಂದುವರೆ ವರ್ಷದ ಬಳಿಕ ಕ್ರಿಕೆಟ್ ಆಡುತ್ತಿದ್ದೇವೆ. 14 ದಿನಗಳ ಕ್ವಾರಂಟೈನ್ ಕೂಡ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಕರ್ರನ್ಗೆ ಅವಕಾಶ ನೀಡಿ ಹೊಸ ಪ್ರಯೋಗ ಮಾಡುವ ಚಿಂತನೆ ಇತ್ತು. ಆದರೆ ಅದು ಯಶಸ್ವಿಯಾಗಲಿಲ್ಲ ಎಂದು ಧೋನಿ ಸ್ಪಷ್ಟಪಡಿಸಿದ್ದರು.
Hard day at office for the Lions. Back to the drawing board. Keep praying #yellove. ???????? #WhistleFromHome #WhistlePodu #RRvCSK pic.twitter.com/PTvykpRRuc
— Chennai Super Kings (@ChennaiIPL) September 22, 2020
ಪಂದ್ಯದಲ್ಲಿ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್ ಗಳೊಂದಿಗೆ 29 ರನ್ ಗಳಿಸಿದ್ದರು. ಅಂತಿ ಓವರ್ ವೇಳೆಗೆ 6 ಎಸೆತಗಳಲ್ಲಿ 38 ರನ್ ಬೇಕಾಗಿತ್ತು. ಪಂದ್ಯದ ಬಳಿಕ ಹಲವು ಕ್ರಿಕೆಟ್ ವಿಶ್ಲೇಷಕರು ಸ್ಯಾಮ್ ಕರ್ರನ್ ಮುನ್ನವೇ ಧೋನಿ ಬ್ಯಾಟಿಂಗ್ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದರು. ಇದನ್ನೂ ಓದಿ: ತೀರ್ಪು ಬದಲಿಸಿದ ಅಂಪೈರ್ ಜೊತೆಗೆ ಧೋನಿ ವಾದ- ಸಾಕ್ಷಿ ಗರಂ
Your favourite moment from last night? ????#RRvCSK | #HallaBol | #RoyalsFamily | #IPL2020 pic.twitter.com/J7xJ956Srp
— Rajasthan Royals (@rajasthanroyals) September 23, 2020