ಮುಂಬೈ: ಬಾಲಿವುಡ್ ಹಾಟ್ ರಾಣಿ ದಿಶಾ ಪಠಾಣಿ ಮತ್ತೊಮ್ಮೆ ತಮ್ಮ ಬಿಕಿನಿ ಫೋಟೋಗಳ ಮೂಲಕ ಸದ್ದು ಮಾಡ್ತಿದ್ದಾರೆ. ನಿನ್ನೆ ಮುಂಬೈನಿಂದ ಮಾಲ್ಡಿವ್ಸ್ ಗೆ ಹಾರಿದ್ದ ದಿಶಾ, ಇಂದು ತಮ್ಮ ಬಿಕಿನಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುವ ಮೂಲಕ ಪಡ್ಡೆಗಳ ಕುತೂಹಲವನ್ನ ನಿಜಗೊಳಿಸಿದ್ದಾರೆ.
ಬೀಚ್ ನಲ್ಲಿ ಕಂದು ಬಣ್ಣದ ಬಿಕಿನಿ ಧರಿಸಿ, ಸೂರ್ಯನಿಗೆ ಮೈಯೊಡ್ಡಿದ ಸೆಕ್ಸಿ ಫೋಟೋವನ್ನ ದಿಶಾ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಲೈಕ್ಸ್ ನೀಡಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
Advertisement
View this post on Instagram
Advertisement
ಭಾನುವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಕೆಲ ಸಮಯದ ಅಂತರದಲ್ಲಿಯೇ ದಿಶಾ ಮತ್ತು ಟೈಗರ್‍ಶ್ರಾಫ್ ಕಾಣಿಸಿಕೊಂಡಿದ್ದರು. ಇಬ್ಬರು ಜೊತೆಯಾಗಿ ಮಾಲ್ಡಿವ್ಸ್ ಗೆ ತೆರಳುತ್ತಿದ್ದಾರೆ ಎಂದು ಸುದ್ದಿಗಳು ಪ್ರಕಟವಾಗಿದ್ದವು. ಇದೀಗ ದಿಶಾ ಫೋಟೋ ಮೂಲಕ ಮಾಲ್ಡಿವ್ಸ್ ನಲ್ಲಿರೋದನ್ನ ತಿಳಿಸಿದ್ದಾರೆ. ಆದ್ರೆ ಟೈಗರ್ ಶ್ರಾಫ್ ಮಾತ್ರ ಇನ್ನು ಯಾವುದೇ ಫೋಟೋ ಶೇರ್ ಮಾಡಿಕೊಂಡಿಲ್ಲ.
Advertisement
View this post on Instagram
Advertisement
ಈ ಹಿಂದೆ ದಿಶಾ ಮತ್ತು ಟೈಗರ್ ಜೊತೆಯಾಗಿ ಮಾಲ್ಡಿವ್ಸ್ ಪ್ರವಾಸ ಕೈಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೇವಲ ಸೋಲೋ ಫೋಟೋಗಳನ್ನ ಮಾತ್ರ ಹಂಚಿಕೊಳ್ಳುತ್ತಿರುತ್ತಾರೆ. ಇಬ್ಬರ ಮಧ್ಯೆ ಪ್ರೀತಿ ಇದೆ ಎಂದು ಬಾಲಿವುಡ್ ಗಲ್ಲಿಗಳು ಹೇಳುತ್ತಿವೆ. ಆದ್ರೆ ಇಬ್ಬರು ಮಾತ್ರ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.
View this post on Instagram